ಖರ್ಚಿಗೂ ಹಣವಿಲ್ಲದಂತೆ ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸೀಜ್‌ ಮಾಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

First Published | Mar 17, 2024, 7:43 AM IST

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಬಂದ್ ಮಾಡಿ, ಸಾರ್ವಜನಿಕರು ನೀಡಿದ ದೇಣಿಗೆ ಹಣವನ್ನು ಸೀಜ್ ಮಾಡಿದ್ದಾರೆ. ₹300- ₹400 ಕೋಟಿ ದಂಡ ಹಾಕಿ ಖರ್ಚಿಗೆ ಹಣವಿಲ್ಲದಂತೆ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. 

ಕಲಬುರಗಿ (ಮಾ.17): ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಬಂದ್ ಮಾಡಿ, ಸಾರ್ವಜನಿಕರು ನೀಡಿದ ದೇಣಿಗೆ ಹಣವನ್ನು ಸೀಜ್ ಮಾಡಿದ್ದಾರೆ. ₹300- ₹400 ಕೋಟಿ ದಂಡ ಹಾಕಿ ಖರ್ಚಿಗೆ ಹಣವಿಲ್ಲದಂತೆ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್‌ ಪಂಚ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು.

ಬಿಜೆಪಿಗೆ ಒಂದೇ ದಿನ 365 ಕೋಟಿ ರು. ಹಣ ಬಂದಿದೆ. ಇದನ್ನು ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಖರ್ಗೆ ಬಿಜೆಪಿಗೆ ನ್ಯಾಯಾಲಯ ಸೂಚಿಸಿದರೂ ಸಹ ಚುನಾವಣಾ ಬಾಂಡ್‌ಗಳನ್ನು ಕೊಟ್ಟವರ ಪಟ್ಟಿ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದರು.

Latest Videos


ಈ ವಿಷಯವಾಗಿ ಸುಪ್ರೀಂಕೋರ್ಟ್‌ ಬಿಜೆಪಿಗೆ ಛೀಮಾರಿ ಹಾಕಿದೆ, ಬಾಂಡ್ ಕೊಟ್ಟವರ ಪಟ್ಟಿ ಕೊಡಿ ಅಂದ್ರೆ ಜುಲೈನಲ್ಲಿ ಕೊಡ್ತಿವಿ ಎಂದು ಬಿಜೆಪಿ ಹೇಳುತ್ತಿದೆ. ಯಾಕಪ್ಪಾ.. ಜುಲೈವರೆಗೆ ಟೈಮ್ ಬೇಕು ನಿಮಗೆ, ಒಂದು ಬಟನ್ ಹೊಡೆದ್ರೆ ಎಲ್ಲರ ಪಟ್ಟಿ ಬಂದ್ ಬಿಡುತ್ತೆ ಆದ್ರೂ ಯಾಕಪ್ಪ ಹಿಂದೇಟು ಎಂದರು. 

ಒಂದು ವೇಳೆ ಇ‍ವರು ಪಟ್ಟಿ ಸಲ್ಲಿಸಿದರೆ ಇವರ ಬಂಡವಾಳ ಬಯಲಿಗೆ ಬರುತ್ತೆ. ಯಾರ್‍ಯಾರಿಂದ ಬಾಂಡ್ ತಗೊಂಡು ಬೇರೆ ಕೆಲಸ ಕೊಟ್ಟಿದ್ದಾರೆ ಅನ್ನೋದು ಬಯಲಿಗೆ ಬರುತ್ತೆ. ಇವರ ಧೋರಣೆಗೆ ಬೇಸತ್ತು ಚುನಾವಣಾ ಆಯುಕ್ತರೊಬ್ಬರು ರಾಜೀನಾಮೆ ನೀಡಿದ್ದಾರೆ ಎಂದು ಖರ್ಗೆ ದೂರಿದರು. ಎಲ್ಲಿ ಸಿಕ್ತು ಅಂದ್ರೆ ಅಲ್ಲಿ ಬೆಂಕಿ ಇಡುವ ಕೆಲಸ ಮೋದಿ ಮಾಡ್ತಿದಾರೆ. 

ಇಂದಿರಾ ಗಾಂಧಿ ಪಾಕಿಸ್ತಾನ ಎರಡು ಹೋಳು ಮಾಡಿದ್ರು, ಮೋದಿ ಇದುವರೆಗೂ ಒಂದೂ ನೊಣನೂ ಹೊಡೆದಿಲ್ಲ, ಆದ್ರೆ ಆತನ ಪ್ರಚಾರನೇ ಜಾಸ್ತಿ. ಹೇಳಿದಂತೆ ಮಾಡೋದು ಕಷ್ಟ ಇದೆ. ಬೆಂಕಿ ಹಚ್ಚೋದು ಸರಳ ಎಂದು ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

click me!