ಸುಳ್ಯ (ಮಾ.11): ಪಂಚ ಗ್ಯಾರಂಟಿಗಳು ನಿಜವಾದ ಜಾತ್ಯತೀತ ಯೋಜನೆಯಾಗಿದ್ದು, ಜನರ ಬದುಕನ್ನು ಬದಲಾಯಿಸಿದ ಯೋಜನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುಳ್ಯದಲ್ಲಿ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಓಟಿಗೋಸ್ಕರ ಬುರುಡೆ ಬಿಡ್ತಾರೆ ಅಂತ ಬಿಜೆಪಿಯವರು ಹೇಳ್ತಾ ಇದ್ರು.