ಸರ್ಕಾರದಿಂದ ಜಾತಿ ಗಣತಿ ಸ್ವೀಕರಿಸಿದ ಮಾತ್ರಕ್ಕೆ ಒಪ್ಪಿದಂತಲ್ಲ: ಸಚಿವ ಸತೀಶ್‌ ಜಾರಕಿಹೊಳಿ

First Published Mar 2, 2024, 4:35 AM IST

ರಾಜ್ಯ ಸರ್ಕಾರದಿಂದ ಜಾತಿ ಗಣತಿ ವರದಿ ಸ್ವೀಕಾರ ಮಾಡುವುದು ಬೇರೆ. ಅದನ್ನು ಒಪ್ಪುವುದು ಬೇರೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಬೆಳಗಾವಿ (ಮಾ.02): ರಾಜ್ಯ ಸರ್ಕಾರದಿಂದ ಜಾತಿ ಗಣತಿ ವರದಿ ಸ್ವೀಕಾರ ಮಾಡುವುದು ಬೇರೆ. ಅದನ್ನು ಒಪ್ಪುವುದು ಬೇರೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಾತಿ ಗಣತಿ ವರದಿ ಸ್ವೀಕಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವರದಿ ಸ್ವೀಕಾರ ಮಾಡಿಕೊಂಡರೆ ಅದನ್ನು ಒಪ್ಪಿದ ಹಾಗಲ್ಲ. ಪ್ರಕ್ರಿಯೆ ಹಂತ, ಹಂತವಾಗಿ ಹೋಗಬೇಕು. ಕಾಂತರಾಜು ವರದಿ ಕೊಟ್ಟಿದ್ದರು. 

ಅದನ್ನು ಮುಂದುವರಿಸಿ ಜಯಪ್ರಕಾಶ್ ಹೆಗ್ಡೆ ಅವರು ಇದೀಗ ಸರ್ಕಾರಕ್ಕೆ ಜಾತಿ ಗಣತಿ ವರದಿ ಕೊಟ್ಟಿದ್ದಾರೆ. ಏನಾಗುತ್ತೆ ನೋಡೋಣ ಎಂದರು. ಇದೇ ವೇಳೆ, ಲೋಕಸಭಾ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಟಿಕೆಟ್‌ ಮಾ.10ರೊಳಗೆ ಘೋಷಣೆಯಾಗಬಹುದು ಎಂದರು. ನಿಗಮ-ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿಲ್ಲ ನಿಜ. ಇನ್ನೆರಡು ನಿಗಮಗಳನ್ನು ಬೆಳಗಾವಿ ಜಿಲ್ಲೆಯವರಿಗೆ ಕೊಡಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯರನ್ನು ಬೀಳಿಸುವವರು ಯಾರಿದ್ದಾರೆ: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬದಲಾಗದು. ಸಿಎಂ ಸಿದ್ದರಾಮಯ್ಯ ಅವರನ್ನು ಬೀಳಿಸುವವರು ಯಾರಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದರು. 
 

ಬೆಳಗಾವಿ ತಾಲೂಕಿನ ಕಣಕುಂಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು. ಇದೇ ವೇಳೆ ಮಾಜಿ ಸಂಸದ ರಮೇಶ ಕತ್ತಿ ಕಾಂಗ್ರೆಸ್‌ ಸೇರ್ಪಡೆ ಸಂಬಂಧ ಯಾವುದೇ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. 

ಅವರು ನಮ್ಮನ್ನು ಸಂಪರ್ಕಿಸಿಲ್ಲ. ಕತ್ತಿ ಅವರಿಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಪ್ರಶ್ನೆಯೇ ಇಲ್ಲ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್‌ರ ಮನೆಗೆ ಊಟಕ್ಕೆ ಹೋಗದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರ ಮಗಳ ಮದುವೆ ಕಾರ್ಯಕ್ರಮಕ್ಕಾಗಿ ಚಂಡೀ್ ಹೋಗಿದ್ದೆ. ಹೀಗಾಗಿ ಡಿನ್ನರ್ ಸಭೆಗೆ ಹೋಗಲಿಲ್ಲ ಎಂದರು.
 

click me!