ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು (ಗುರುವಾರ) ಹುಟ್ಟುಹಬ್ಬದ ಸಂಭ್ರಮ. 78ನೇ ವಸಂತಕ್ಕೆ ಕಾಲಿಟ್ಟಿರುವ ಯಡಿಯೂರಪ್ಪ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ರಾಜ್ಯ ನಾಯಕರು ಸೇರಿದಂತೆ ಕೇಂದ್ರ ನಾಯಕರು ಸಹ ಟ್ವಿಟ್ಟರ್‌ನಲ್ಲಿ ಜನ್ಮದಿನ ಶುಭಕೋರಿದ್ದಾರೆ. ಇದರ ಮಧ್ಯೆ ರಾಜಾಹುಲಿ ಟ್ವಿಟ್ಟರ್‌ನಲ್ಲಿ ಅಬ್ಬರಿಸಿದ್ದಾರೆ. ಕರ್ನಾಟಕದ ರಾಜಕಾರಣಿಗಳ ಪೈಕಿ ಟ್ವಿಟರ್ ನಲ್ಲಿ ಬಿಎಸ್ ಯಡಿಯೂರಪ್ಪ ರಾಜಾಹುಲಿ.