ಸಿಎಂ ಬಿಎಸ್‌ವೈ ಮತ್ತೊಂದು ಲಂಚ್ ಮೀಟಿಂಗ್: ಈ ಬಾರಿ ಕಾಂಗ್ರೆಸ್ ಶಾಸಕರು ಭಾಗಿ..!

First Published | Sep 7, 2020, 10:44 PM IST

ಕೊರೋನಾ, ಪ್ರವಾಹದಿಂದ ಸದಾ ಒತ್ತಡದಲ್ಲಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಹಳ ದಿನಗಳ ನಂತರ ಸಚಿವರ ಮತ್ತು ಶಾಸಕರ ಜೊತೆ ಲಂಚ್ ಮೀಟಿಂಗ್  ಮಾಡಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಮೊನ್ನೇ ಅಷ್ಟೇ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಆಪ್ತರ ಜೊತೆ ಭೋಜನ ಸೇವಿಸಿದ್ದರು. ಇದೀಗ ಮತ್ತೊಂದು ಲಂಚ್ ಮೀಟಿಂಗ್ ಮಾಡಿದ್ದು, ಇದರಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಭಾಗವಹಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೋಟೆಲ್‌ನತ್ತ ಮುಖ ಮಾಡುತ್ತಿದ್ದಾರೆ.
. ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಮೊನ್ನೇ ಅಷ್ಟೇ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಆಪ್ತರ ಜೊತೆ ಭೋಜನ ಸೇವಿಸಿದ್ದರು.
Tap to resize

ಇದೀಗ ಇಂದು (ಸೋಮವಾರ) ಯಡಿಯೂರಪ್ಪ ಅವರು ಬೆಂಗಳೂರಿನ ಜಯನಗರದಲ್ಲಿರುವ ಮಯ್ಯಾಸ್ ಹೋಟೆಲ್‌ನಲ್ಲಿ ಲಂಚ್ ಮಾಡಿದ್ದು,ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿಎಸ್ ಆರ್‌ ವಿಶ್ವನಾಥ್,ಮತ್ತು ಸಂಸದ ತೇಜಸ್ವಿ ಸೂರ್ಯ ಸಾಥ್ ನೀಡಿದರು.
ವಿಶೇಷ ಅಂದ್ರೆ ಈ ಲಂಚ್‌ನಲ್ಲಿ ಕಾಂಗ್ರೆಸ್‌ ಶಾಸಕಿ ಸೌಮ್ಯರೆಡ್ಡಿ ಭಾಗಿಯಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೊನ್ನೇ ಅಷ್ಟೇ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಇದೇ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿಎಸ್ ಆರ್‌ ವಿಶ್ವನಾಥ್ ಜೊತೆ ಬಿಎಸ್‌ವೈ ಭೋಜನ ಮಾಡಿದ್ದರು,

Latest Videos

click me!