ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟ ಸಹುದ್ಯೋಗಿಗಳು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಮಂತ್ರಿ ನಿವಾಸಕ್ಕೆ ಇಂದು(ಬುಧವಾರ) ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದರು.
ಬಳಿಕ ಆರೋಗ್ಯ ವಿಚಾರಿಸಿದ ಸಿಎಂ ತಮ್ಮದು ಊಟ ಎಲ್ಲಾ ಏನ್ ಮಾಡ್ತೀರಾ? ನಾರ್ಮಲ್ ಮುದ್ದೆ ಎಲ್ಲಾ ಮಾಡ್ತೀರಾ ದೇವೆಗೌಡರಿಗೆ ಬೊಮ್ಮಾಯಿ ಕೇಳಿದರು.ಇದಕ್ಕೆ ದೇವೇಗೌಡ್ರು ತಲೆ ಅಲ್ಲಾಡಿಸಿದರು.
ಬಳಿಕ ಕಾಲು ನೋವು ಇದೆ ಅಲ್ವಾ ಎಂದು ದೇವೆಗೌಡರಿಗೆ ಬಸವರಾಜ ಬೊಮ್ಮಾಯಿ ಕೇಳಿದರು. ಹಾ..ಕಾಲು ನೋವು ಇದೆ.. ಹಾಗೆಯೇ ಮಂಡಿ ನೋವು ಕೂಡ ಇದೆ ಎಂದ ದೇವೇಗೌಡ್ರು ಉತ್ತರಿಸಿದರು.
ಕೆಲ ಹೊತ್ತು ಬೊಮ್ಮಾಯಿ ಅವರು ದೇವೇಗೌಡ್ರ ಜೊತೆ ಆರೋಗ್ಯದ ಬಗ್ಗೆ ಮಾತನಾಡಿ ಬಳಿಕೆ ಎಲ್ಲರೂ ಊಟ ಸೇವಿಸಿದರು. ಪೂರಿ ಹಾಗೂ ಮುದ್ದೆ ಊಟ ಸವಿದರು ಎಂದು ತಿಳಿದುಬಂದಿದೆ.
ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಕೊಂಚ ಅನಾರೋಗ್ಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳಿತ್ತಿದ್ದು, ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.