ತಮ್ಮ ಅಧಿಕಾರವಧಿಯಲ್ಲಿ ಕೋಮುಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ದಾಖಲೆ ಬಿಚ್ಚಿಟ್ಟ ಸಿದ್ದು

Published : Jul 29, 2022, 05:49 PM IST

ರಾಜ್ಯದ ಯಾವ ಮೂಲೆಯಲ್ಲಿ ಕೋಮುಘರ್ಷಣೆ, ಹತ್ಯೆಗಳು ನಡೆದರೂ ನಮ್ಮ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ ಸುಳ್ಳು ಮಾಹಿತಿ ನೀಡುವುದು ಕರ್ನಾಟಕ ಬಿಜೆಪಿ ನಾಯಕರಿಗೆ ಚಟವಾಗಿಬಿಟ್ಟಿದೆ. ನಮ್ಮ ಸರ್ಕಾರದ ಕಾಲದಲ್ಲಿ ನಡೆದ ಕೋಮುಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ಪುಸ್ತಕವನ್ನೇ ಪ್ರಕಟಿಸಿದ್ದೇವೆ, ಓದಿಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ದಾಖಲೆ  ಬಹಿರಂಗಪಡಿಸಿದ್ದಾರೆ.  

PREV
16
ತಮ್ಮ ಅಧಿಕಾರವಧಿಯಲ್ಲಿ ಕೋಮುಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ದಾಖಲೆ ಬಿಚ್ಚಿಟ್ಟ ಸಿದ್ದು

ರಾಜ್ಯದ ಯಾವ ಮೂಲೆಯಲ್ಲಿ ಕೋಮುಘರ್ಷಣೆ, ಹತ್ಯೆಗಳು ನಡೆದರೂ ನಮ್ಮ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ ಸುಳ್ಳು ಮಾಹಿತಿ ನೀಡುವುದು ಕರ್ನಾಟಕ ಬಿಜೆಪಿ ನಾಯಕರಿಗೆ ಚಟವಾಗಿಬಿಟ್ಟಿದೆ. ನಮ್ಮ ಸರ್ಕಾರದ ಕಾಲದಲ್ಲಿ ನಡೆದ ಕೋಮುಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ಪುಸ್ತಕವನ್ನೇ ಪ್ರಕಟಿಸಿದ್ದೇವೆ, ಓದಿಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ದಾಖಲೆ  ಬಹಿರಂಗಪಡಿಸಿದ್ದಾರೆ.

26

ನಮ್ಮ ಸರ್ಕಾರದ  ಐದು ವರ್ಷಗಳ ಅವಧಿಯಲ್ಲಿ ರಾಜಕೀಯ ಘರ್ಷಣೆ ಇಲ್ಲವೆ ಕೋಮುಗಲಭೆಗಳಿಗೆ ಸಂಬಂಧ ಪಟ್ಟಂತೆ ಒಟ್ಟು 23 ಹತ್ಯೆಗಳಾಗಿವೆ. ಇವುಗಳಲ್ಲಿ ಹನ್ನೆರಡು ಮೃತ ವ್ಯಕ್ತಿಗಳು ಹಿಂದೂಗಳು, ಉಳಿದ ಹನ್ನೊಂದು ಮಂದಿ ಮುಸ್ಲಿಮರು.

36

ಹನ್ನೆರಡು ಹಿಂದೂಗಳ ಹತ್ಯೆಯ ಎಂಟು ಪ್ರಕರಣಗಳಲ್ಲಿ ಪಿ.ಎಫ್.ಐ/ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ ಕಾಂಗ್ರೆಸ್ ಕಾರ್ಯಕರ್ತ ಆರೋಪಿಯಾಗಿದ್ದಾನೆ. ಇವರಲ್ಲಿ 99 ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ. 

46

2013 ರಿಂದ 2017ರ ವರೆಗಿನ ಅವಧಿಯಲ್ಲಿ ನಡೆದ ಹನ್ನೊಂದು ಮುಸ್ಲಿಮರ ಹತ್ಯೆಗಳ ಎಂಟು ಪ್ರಕರಣಗಳಲ್ಲಿ ಬಜರಂಗದಳ, ತಲಾ ಒಂದು ಪ್ರಕರಣಗಳಲ್ಲಿ ಹಿಂದೂ ಜಾಗರಣಾ ವೇದಿಕೆ, ಶ್ರೀರಾಮಸೇನೆ ಮತ್ತು ವಿಶ್ವ ಹಿಂದೂ ಪರಿಷತ್‌ ನ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ. 115 ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗಿದೆ. 

56

ವೈಯಕ್ತಿಕ ಕಾರಣಗಳಿಗಾಗಿ ಹತ್ತು ಹತ್ಯೆಗಳಾಗಿದ್ದು 61 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೊಲೀಸರು ಹತ್ಯೆಯ ಕಾರಣದ ತನಿಖೆ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ತನಿಖೆ ಪೂರ್ಣಗೊಂಡಿರಲಿಲ್ಲ. ಈ ಎಲ್ಲ ಪ್ರಕರಣಗಳ ಮೊಕದ್ದಮೆಗಳ ಸಂಖ್ಯೆ ಸಮೇತ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

66

ಈ ಹತ್ಯೆ ಪ್ರಕರಣಗಳ ತನಿಖೆಗೆ ಪೊಲೀಸರು ಸಮರ್ಥರಾಗಿದ್ದರೂ ವಿರೋಧ ಪಕ್ಷಗಳ  ಒತ್ತಾಯಕ್ಕಾಗಿ ಕೆಲವು ಪ್ರಕರಣಗಳನ್ನು ಸಿಬಿಐ ಮತ್ತು ಎನ್ಐಎ ಗೆ ವಹಿಸಲಾಗಿತ್ತು. ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಸಿಬಿಐಗೆ ಮತ್ತು ಬೆಂಗಳೂರಿನ ರುದ್ರೇಶ್ ಕೊಲೆ ಪ್ರಕರಣವನ್ನು ಎನ್ಐಎ ಗೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Read more Photos on
click me!

Recommended Stories