ಜಗತ್ತಿನ ಅತಿದೊಡ್ಡ ಟಾಪ್ 10 ರಾಜಕೀಯ ಪಕ್ಷಗಳಿವು..! ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟನೇ ಸ್ಥಾನ?

Published : Aug 20, 2023, 01:46 PM ISTUpdated : Aug 20, 2023, 02:18 PM IST

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ರಾಜಕೀಯ ಪಕ್ಷಗಳ ಪಾತ್ರ ಮಹತ್ವವಾದದ್ದಾಗಿದೆ. ಪಕ್ಷಗಳಲ್ಲಿನ ಕಾರ್ಯಕರ್ತರ ಸಂಖ್ಯೆಗಳ ಆಧಾರದಲ್ಲಿ ಜಗತ್ತಿನ ಅತಿದೊಡ್ಡ ಪಕ್ಷಗಳ ಹೆಸರನ್ನು ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದು ಪಕ್ಷಗಳೇ ಹೇಳಿಕೊಂಡ ಸಂಖ್ಯೆಗಳಾಗಿದ್ದು, ಯಾವುದೇ ಸ್ವತಂತ್ರ ಸಂಸ್ಥೆಯು ಅಧ್ಯಯನ ಮಾಡಿದ ಸಂಖ್ಯೆಗಳಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ.  

PREV
113
ಜಗತ್ತಿನ ಅತಿದೊಡ್ಡ ಟಾಪ್ 10 ರಾಜಕೀಯ ಪಕ್ಷಗಳಿವು..! ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟನೇ ಸ್ಥಾನ?
1. ಭಾರತೀಯ ಜನತಾ ಪಕ್ಷ: BJP

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾದ ಭಾರತದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡಿದೆ. 

213

ಏಪ್ರಿಲ್‌ 06, 1980ರಲ್ಲಿ ಸ್ಥಾಪನೆಗೊಂಡ ಭಾರತೀಯ ಜನತಾ ಪಕ್ಷವೂ 2022ರ ಅಂತ್ಯದ ವೇಳೆಗೆ 180 ಮಿಲಿಯನ್ ಅಂದರೆ 18 ಕೋಟಿ ಸದಸ್ಯರನ್ನು ಹೊಂದಿದೆ. ಈ ಮೂಲಕ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡಿದೆ. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಎನಿಸಿಕೊಂಡಿದೆ.

313
2. ಚೈನೀಸ್ ಕಮ್ಯುನಿಷ್ಟ್ ಪಾರ್ಟಿ: CCP

ಜಗತ್ತಿನ ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ಚೀನಾವನ್ನು ಆಳುತ್ತಿರುವ ಚೈನೀಸ್ ಕಮ್ಯುನಿಷ್ಟ್ ಪಾರ್ಟಿಯು, ಕಾರ್ಯಕರ್ತರ ಆಧಾರದಲ್ಲಿ ಎರಡನೇ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡಿದೆ.

413

ಜುಲೈ 23, 1921ರಲ್ಲಿ ಸ್ಥಾಪನೆಯಾದ ಚೈನೀಸ್‌ ಕಮ್ಯುನಿಷ್ಟ್ ಪಕ್ಷವು 2022ರ ಅಂತ್ಯದ ವೇಳೆಗೆ 98.04 ಮಿಲಿಯನ್ ಕಾರ್ಯಕರ್ತರನ್ನು ಹೊಂದುವ ಮೂಲಕ ಸಿಸಿಪಿ ಜಗತ್ತಿನ ಎರಡನೇ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡಿದೆ.
 

513
3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: INC

ಬ್ರಿಟೀಷ್ ಆಡಳಿತಕ್ಕೆ ಸೆಡ್ಡು ಹೊಡೆದು ಸ್ಥಾಪನೆಗೊಂಡ ರಾಜಕೀಯ ಪಕ್ಷವೆಂದರೆ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌. 1885ರಲ್ಲಿ ಕಾಂಗ್ರೆಸ್ ಪಕ್ಷವು ಸ್ಥಾಪನೆಯಾಯಿತು.

613

ಭಾರತವು ಸ್ವಾತಂತ್ರ್ಯ ಪಡೆಯುವಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖ ಪಾತ್ರವಹಿಸಿತ್ತು. ಸದ್ಯ 2022ರ ಅಂತ್ಯದ ವೇಳೆಗೆ ಕಾಂಗ್ರೆಸ್ 50 ಮಿಲಿಯನ್ ಕಾರ್ಯಕರ್ತರನ್ನು ಹೊಂದುವ ಮೂಲಕ ಜಗತ್ತಿನ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
 

713
4. ಡೆಮೊಕ್ರಾಟಿಕ್ ಪಕ್ಷ:

ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯಂತ ಪುರಾತನ ರಾಜಕೀಯ ಪಕ್ಷವೆಂದರೆ ಅದು ಡೆಮೊಕ್ರಾಟಿಕ್ ಪಕ್ಷ. ಜನವರಿ 8, 1828ರಲ್ಲಿ ಸ್ಥಾಪನೆಯಾದ ಈ ಪಕ್ಷ 47.13 ಮಿಲಿಯನ್ ಕಾರ್ಯಕರ್ತರನ್ನು ಹೊಂದಿದೆ.
 

813
5.ರಿಪಬ್ಲಿಕನ್ ಪಾರ್ಟಿ:

ಅಮೆರಿಕ ಸಂಯುಕ್ತ ಸಂಸ್ಥಾನದ ಎರಡನೇ ಅತಿದೊಡ್ಡ ಪಕ್ಷವೆಂದರೆ ಅದು ರಿಪಬ್ಲಿಕನ್ ಪಾರ್ಟಿ. ಮಾರ್ಚ್ 20, 1854ರಲ್ಲಿ ಸ್ಥಾಪನೆಯಾದ ರಿಪಬ್ಲಿಕನ್ ಪಕ್ಷದಲ್ಲಿ 36 ಮಿಲಿಯನ್‌ ಕಾರ್ಯಕರ್ತರಿದ್ದಾರೆ.
 

913
6. ಎಐಎಡಿಎಂಕೆ:

ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರಾ ಕಳಗಂ ಪಕ್ಷವು ಅಕ್ಟೋಬರ್ 17, 1972ರಲ್ಲಿ ಸ್ಥಾಪನೆಯಾಯಿತು. ತಮಿಳುನಾಡಿನ ಅತ್ಯಂತ ಬಲಿಷ್ಠ ಪಕ್ಷವೆನಿಸಿರುವ ಎಐಎಡಿಎಂಕೆ ಪಕ್ಷದಲ್ಲಿ 20 ಮಿಲಿಯನ್ ಕಾರ್ಯಕರ್ತರ ಬಳಗವಿದೆ.

1013
7. ಡ್ರಾವಿಡ ಮುನ್ನೇತ್ರಾ ಕಳಗಂ: DMK

ದಕ್ಷಿಣ ಭಾರತದ ಅತ್ಯಂತ ಪುರಾತನ ಪಕ್ಷಗಳಲ್ಲಿ ಒಂದು ಎನಿಸಿರುವ ಡ್ರಾವಿಡ ಮುನ್ನೇತ್ರಾ ಕಳಗಂ ಪಕ್ಷವು ಸೆಪ್ಟೆಂಬರ್ 17, 1949ರಲ್ಲಿ ಸ್ಥಾಪನೆಯಾಯಿತು. ಡಿಎಂಕೆ ಪಕ್ಷದ ಬಳಿ ಕೂಡಾ 20 ಮಿಲಿಯನ್ ಕಾರ್ಯಕರ್ತರ ಬಲವಿದೆ.
 

1113
8. ಜಸ್ಟೀಸ್ & ಡೆವಲಪ್ಮೆಂಟ್‌ ಪಾರ್ಟಿ: AKP

ಟರ್ಕಿ ದೇಶದ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷವೆಂದರೆ ಅದು ಎಕೆ ಪಾರ್ಟಿ/ಜಸ್ಟೀಸ್‌ ಅಂಡ್ ಡೆವಲಪ್ಮೆಂಟ್‌ ಪಾರ್ಟಿ. ಆಗಸ್ಟ್ 14, 2001ರಲ್ಲಿ ಸ್ಥಾಪನೆಯಾದ ಎಕೆಪಿ ಪಕ್ಷದಲ್ಲಿ 11.2 ಮಿಲಿಯನ್ ಕಾರ್ಯಕರ್ತರಿದ್ದಾರೆ.

1213
9.ಪ್ರಾಸ್ಪರಿಟಿ ಪಾರ್ಟಿ:

ಹಿಂದುಳಿದ ದೇಶಗಳಲ್ಲಿ ಒಂದು ಎನಿಸಿಕೊಂಡಿರುವ ಇಥಿಯೋಪಿಯಾದಲ್ಲಿರುವ ಪ್ರಮುಖ ರಾಜಕೀಯ ಪಕ್ಷವೆಂದರೆ ಅದು ಪ್ರಾಸ್ಪರಿಟಿ ಪಾರ್ಟಿ. ಕೇವಲ 3 ವರ್ಷಗಳ ಹಿಂದೆ ಅಂದರೆ 2019ರ ಡಿಸೆಂಬರ್ 01ರಂದು ಸ್ಥಾಪನೆಯಾದ ಪ್ರಾಸ್ಪರಿಟಿ ಪಾರ್ಟಿಯಲ್ಲಿ ಕೇವಲ 3 ವರ್ಷಗಳ ಅವಧಿಯಲ್ಲಿ 11 ಮಿಲಿಯನ್ ಫಾಲೋವರ್ಸ್‌ ಹೊಂದಿದೆ.

1313
10. ಆಮ್‌ ಆದ್ಮಿ ಪಕ್ಷ:

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ನವೆಂಬರ್ 26, 2012ರಲ್ಲಿ ಸ್ಥಾಪನೆಯಾಯಿತು. ಡೆಲ್ಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷವು ಸದ್ಯ 10.5 ಮಿಲಿಯನ್ ಕಾರ್ಯಕರ್ತರನ್ನು ಹೊಂದಿದೆ.
 

Read more Photos on
click me!

Recommended Stories