ಕ್ಯೂಟ್ ಸಿದ್ದು, ಮುದ್ದು ಮುದ್ದು ಯೋಗಿ: ಎಐ ಸೃಷ್ಟಿಸಿದ ಸಿಎಂಗಳ ಬಾಲ್ಯದ ಫೋಟೋ

Published : Aug 03, 2023, 03:39 PM ISTUpdated : Aug 04, 2023, 10:58 AM IST

ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಫೋಟೋ ಹಾಗೂ ದೃಶ್ಯ ಮಾಧ್ಯಮ ಲೋಕದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದು, ಗತ ಹಾಗೂ ಭವಿಷ್ಯದ ಕಲ್ಪನೆಯನ್ನು ಬಹಳ ಸುಂದರವಾಗಿ ಚಿತ್ರಿಸಿ ನೀಡುತ್ತಿದೆ. ಅದೇ ರೀತಿ ಈಗ ಎಐ ವಿವಿಧ ರಾಜ್ಯಗಳ ಸಿಎಂಗಳು ಬಾಲ್ಯದಲ್ಲಿ ಹೇಗಿದ್ದಿರಬಹುದು ಎಂಬುದನ್ನು ಫೋಟೋಗಳಲ್ಲಿ ಕಟ್ಟಿ ಕೊಟ್ಟಿದ್ದು, ಆ ಫೋಟೋಗಳು ಇಲ್ಲಿವೆ ನೋಡಿ  

PREV
110
ಕ್ಯೂಟ್ ಸಿದ್ದು, ಮುದ್ದು ಮುದ್ದು ಯೋಗಿ: ಎಐ ಸೃಷ್ಟಿಸಿದ ಸಿಎಂಗಳ ಬಾಲ್ಯದ ಫೋಟೋ
ನಿತೀಶ್ ಕುಮಾರ್

ಬಿಹಾರದ 22ನೇ ಹಾಗೂ ಪ್ರಸ್ತುತ ಸಿಎಂ ಆಗಿರುವ ನಿತೀಶ್‌ ಕುಮಾರ್ ಜನಿಸಿದ್ದು1951ರ ಮಾರ್ಚ್  1ರಂದು. ಸಾಕಷ್ಟು ರೆವೆನ್ಯೂ (ತೆರಿಗೆ) ಬರುವ ಮದ್ಯವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸುವ ಮೂಲಕ ರಾಜ್ಯದ ಹೆಣ್ಣು ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ ನಿತೀಶ್. 

210
ಯೋಗಿ ಆದಿತ್ಯನಾಥ್

ಇದು ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ  ಸೃಷ್ಟಿಸಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರ. ಈಗಿರುವಂತೆಯೇ ಖಡಕ್ ಲುಕ್ ಬಾಲ್ಯದ ಫೋಟೋದಲ್ಲೂ ಎದ್ದು ಕಾಣಿಸುತ್ತಿದೆ. ತಮ್ಮ  ಕಟರ್ ಹಿಂದುತ್ವದಿಂದಾಗಿ ಅವರು ಬಹುಸಂಖ್ಯಾತ ಹಿಂದೂಗಳ ಹೃದಯ ಸಮ್ರಾಟ್ ಎನಿಸಿದ್ದು, ಯೋಗಿಗೆ ದೇಶಾದ್ಯಂತ ಕೋಟ್ಯಾಮತರ ಜನ ಅಭಿಮಾನಿಗಳಿದ್ದಾರೆ.  ಉತ್ತರ ಪ್ರದೇಶದ ಗರ್ವಾಲ್ ಜಿಲ್ಲೆಯ ಪೌರಿಯಲ್ಲಿ 1972ರ ಜೂನ್ ಐದರಂದು ಜನಿಸಿದ ಯೋಗಿ ಅವರ ಪೂರ್ವಾಶ್ರಮದ ಹೆಸರು ಅಜಯ್ ಮೋಹನ್ ಸಿಂಗ್ ಬಿಶ್ತ್, 2017ರಲ್ಲಿ ಮೊದಲ ಬಾರಿಗೆ ಉತ್ತರಪ್ರದೇಶ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. 

310
ಎಂ.ಕೆ. ಸ್ಟಾಲಿನ್

1953ರ ಮಾರ್ಚ್ ಒಂದು ಚೆನ್ನೈನಲ್ಲಿ ಜನಿಸಿದ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ತಮಿಳುನಾಡಿನ 8ನೇ ಹಾಗೂ  ಪ್ರಸ್ತುತ ಸಿಎಂ ಆಗಿದ್ದಾರೆ. ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಪುತ್ರನಾಗಿರುವ ಸ್ಟಾಲಿನ್‌ಗ 2018ರಲ್ಲಿ ತಂದೆ ಕರುಣಾನಿಧಿ ನಿಧನದ ನಂತರ ದ್ರಾವಿಡ ಮುನ್ನೇತ್ರ ಕಾಳಗಂ ಪಕ್ಷದ  ಅಧ್ಯಕ್ಷರಾದರು. 2021ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಬಂದು ತಮಿಳುನಾಡು ಸಿಎಂ ಆದರು.

410
ಹಿಮಂತ್ ಬಿಸ್ವಾಸ್ ಸರ್ಮಾ

1969ರ ಫೆಬ್ರವರಿ 1 ರಂದು ಅಸ್ಸಾಂನ ಜೋರ್ಹತ್‌ನಲ್ಲಿ ಜನಿಸಿದ  ಹಿಮಂತ್ ಬಿಸ್ವಾಸ್ ಸರ್ಮಾ ಅಸ್ಸಾಂನ 15ನೇ ಮುಖ್ಯಮಂತ್ರಿ. ಕಾಂಗ್ರೆಸ್‌ ಪಕ್ಷದಿಂದ ರಾಜಕೀಯ ಆರಂಭಿಸಿದ ಹಿಮಂತ್  2015ರಲ್ಲಿ ಬಿಜೆಪಿ ಸೇರಿ ಪ್ರಸ್ತುತ ಸಿಎಂ ಆಗಿದ್ದಾರೆ.  ಇತ್ತೀಚೆಗೆ ಅವರು ಭಾರತದಲ್ಲಿ ಮುಸ್ಲಿಂ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ತಿರುಗೇಟು ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಅಲ್ಲದೇ ಹಲವು ವಿವಾದಾತ್ಮಕ ಹೇಳಿಕೆಗಳಿಂದ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. 

510
ಸಿದ್ದರಾಮಯ್ಯ

ನಮ್ಮ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ, 1947ರ ಆಗಸ್ಟ್ 3 ರಂದು ಮೈಸೂರಿ ವರುಣಾ ಹೋಬಳಿಯ ಸಿದ್ದರಾಮಯ್ಯನಹುಂಡಿಯಲ್ಲಿ ಜನಿಸಿದ ಸಿದ್ದರಾಮಯ್ಯಗೀಗ 76ರ ಹರೆಯ. 2013ರಲ್ಲಿ ಮೊದಲ ಬಾರಿ ಸಿಎಂ ಆಗಿದ್ದ ಸಿದ್ದು, ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಖ್ಯಾತಿ ಗಳಿಸಿದ್ದರು. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಹಲವು ಬಾರಿ ಹಣಕಾಸು ಸಚಿವರಾಗಿಯೂ ರಾಜ್ಯವನ್ನಾಳಿದ್ದಾರೆ. 

610
ಮಮತಾ ಬ್ಯಾನರ್ಜಿ

1955ರ ಜನವರಿ 5 ರಂದು ಕೋಲ್ಕತ್ತಾದಲ್ಲಿ ಜನಿಸಿದ  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೀದಿ ಎಂದೇ ಫೇಮಸ್, ಪಶ್ಚಿಮ ಬಂಗಾಳದ 8ನೇ ಹಾಗೂ ಪ್ರಸ್ತುತ ಸಿಎಂ ಆಗಿರುವ ಮಮತಾ ಅವಿವಾಹಿತೆ. 2011ರಿಂದಲೂ ಪಶ್ಚಿಮ ಬಂಗಾಳದ ಸಿಎಂ ಆಗಿರುವ ಮಮತಾ ಆ ಪಟ್ಟಕ್ಕೇರಿದ ಪ್ರಥಮ ಹಾಗೂ ಏಕೈಕ ಮಹಿಳೆ. 1998ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಮಮತಾ ತಮ್ಮದೇ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಸ್ಥಾಪಿಸಿದರು. 

710
ಅರವಿಂದ್ ಕೇಜ್ರಿವಾಲ್

1968ರ ಆಗಸ್ಟ್ 16 ರಂದು ಹರ್ಯಾಣದ ಸಿವಾನಿಯಲ್ಲಿ ಜನಿಸಿದ ಅರವಿಂದ್ ಕೇಜ್ರಿವಾಲ್, ಎಎಪಿ ಪಕ್ಷ ಸ್ಥಾಪಿಸಿ ದೊಡ್ಡಮಟ್ಟದ ಹವಾ ಸೃಷ್ಟಿಸಿದ ರಾಜಕಾರಣಿ. 1955ರಲ್ಲಿ ಸಿವಿಲ್ ಪರೀಕ್ಷೆ ಪಾಸು ಮಾಡಿ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದ 2006ರಲ್ಲಿ ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಇಳಿದರು.  2012ರಲ್ಲಿ ಎಎಪಿ ಪಕ್ಷ ಸ್ಥಾಪಿಸಿದ ಅರವಿಂದ್ 2015ರಿಂದ ದೆಹಲಿಯಲ್ಲಿ ಸಿಎಂ ಚುಕಾಣಿ ಹಿಡಿದಿದ್ದಾರೆ. 

810
ಪ್ರಮೋದ್ ಸಾವಂತ್

ಕಡಲ ತಡಿಯ ಪುಟ್ಟ ರಾಜ್ಯ ಗೋವಾದ ಸಿಎಂ ಆಗಿರುವ ಪ್ರಮೋದ್ ಸಾವಂತ್ ಮನೋಹರ್ ಪರಿಕ್ಕರ್ ನಿಧನದ ನಂತರ ಗೋವಾ ಬಿಜೆಪಿಯಿಂದ ಗೆದ್ದು ಸಿಎಂ ಚುಕ್ಕಾಣಿ ಹಿಡಿದವರು.  ಆಯುರ್ವೇದ ಮೆಡಿಸಿನ್‌ನಲ್ಲಿ ಪದವಿ ಪಡೆದಿರುವ ಅವರುಮೂಲತ ವೈದ್ಯರು ಆಗಿದ್ದಾರೆ. 1973 ಏಪ್ರಿಲ್ 24 ರಂದು ಜನಿಸಿದ ಅವರು ಗೋವಾದ 11ನೇ ಹಾಗೂ ಪ್ರಸ್ತುತ ಸಿಎಂ

910
ಅಶೋಕ್ ಗೆಹ್ಲೋಟ್

ವಿಸ್ತಾರದಲ್ಲಿ ದೇಶದ  ಅತ್ಯಂತ ದೊಡ್ಡ ರಾಜ್ಯವಾಗಿರುವ ರಾಜಸ್ಥಾನದ ಸಿಎಂ ಆಗಿರುವ ಅಶೋಕ್ ಗೆಹ್ಲೋಟ್ ಅವರಿಗೀಗ 72ವರ್ಷ, 1951 ರ ಮೇ 3 ರಂದು ಜೋಧ್ಪುರದಲ್ಲಿ ಜನಿಸಿದ ಅಶೋಕ್ ಗೆಹ್ಲೋಟ್ ಅವರು 2018ರಿಂದಲೂ ರಾಜಸ್ಥಾನ ಸಿಎಂ ಆಗಿದ್ದಾರೆ. ಅಲ್ಲಿನ ತಮ್ಮದೇ ಯುವ ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್ ಹಾಗೂ ಅಶೋಕ್ ನಡುವಿನ ಶೀತಲ ಸಮರದ ಕಾರಣಕ್ಕೆ ಇತ್ತೀಚೆಗೆ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. 

1010
ನವೀನ್ ಪಟ್ನಾಯಕ್

1946ರ ಆಕ್ಟೋಬರ್ 16 ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದ ನವೀನ್ ಪಟ್ನಾಯಕ್ ಒಡಿಶಾದ ಪ್ರಾದೇಶಿಕ ಪಕ್ಷ ಬಿಜು ಜನತಾದಳದ ಅಧ್ಯಕ್ಷರಾಗಿದ್ದು, ಒಡಿಶಾದ 14ನೇ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ಬಿಜು ಪಟ್ನಾಯಕ್ ನಿಧನದ ನಂತರ 1997ರಲ್ಲಿ ರಾಜಕೀಯ ಪ್ರವೇಶಿಸಿದ ನವೀನ್ ಪಟ್ನಾಯಕ್ 2000 ಇಸವಿಯಿಂದ ಇಲ್ಲಿಯವರೆಗೆ ಅಂದರೆ ನಿರಂತರವಾಗಿ 23 ವರ್ಷಗಳ ಸುಧೀರ್ಘ ಕಾಲ ಒಡಿಶಾವನ್ನು ಅಳಿದ ಖ್ಯಾತಿ ಗಳಿಸಿದ್ದಾರೆ. 

click me!

Recommended Stories