ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ: ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ Rahul Gandhi ಭೇಟಿಯ ಫೋಟೋಗಳನ್ನು ನೋಡಿ..

First Published | Oct 3, 2022, 1:39 PM IST

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕ ಭಾರತ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮುಂದುವರಿದಿದೆ. ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಕೈ ಪಕ್ಷದ ಭಾರತ್ ಜೋಡೋ ಯಾತ್ರೆ ಕಾಲಿಟ್ಟಿದ್ದು, ಈ ವೇಳೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗೆ ಸಹ ಭೇಟಿ ಕೊಟ್ಟಿದ್ದಾರೆ. ಇನ್ನು, ಇಂದು ರಾಹುಲ್‌ ಗಾಂಧಿ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೂ ಹೋಗಿ ಪೂಜೆ ಸಲ್ಲಿಸಿದ್ದಾರೆ. ಹೀಗೆ, ರಾಹುಲ್ ಗಾಂಧಿಯವರ ಟೆಂಪಲ್‌ ರನ್‌ ಮುಂದುವರಿದಿದೆ. 

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕ ಭಾರತ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮುಂದುವರಿದಿದೆ. ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಕೈ ಪಕ್ಷದ ಭಾರತ್ ಜೋಡೋ ಯಾತ್ರೆ ಕಾಲಿಟ್ಟಿದ್ದು, ಈ ವೇಳೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗೆ ಸಹ ಭೇಟಿ ಕೊಟ್ಟಿದ್ದಾರೆ.

ಇನ್ನು, ಇಂದು ರಾಹುಲ್‌ ಗಾಂಧಿ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೂ ಹೋಗಿ ಪೂಜೆ ಸಲ್ಲಿಸಿದ್ದಾರೆ. ಹೀಗೆ, ರಾಹುಲ್ ಗಾಂಧಿಯವರ ಟೆಂಪಲ್‌ ರನ್‌ ಮುಂದುವರಿದಿದೆ. 

Tap to resize

ರಾಹುಲ್‌ ಗಾಂಧಿ ದೇವಸ್ಥಾನ, ಮಸೀದಿ ಹಾಗೂ ಚರ್ಚೆಗೆ ಭೇಟಿ ನೀಡಿದ್ದ ವೇಳೆ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್‌, ಕಾಂಗ್ರೆಸ್‌ ನಾಯಕ ವೇಣುಗೋಪಾಲ್ ಸೇರಿ ಹಲವರು ಅವರ ಜತೆಯಲ್ಲಿದ್ದರು. 

ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನ ಹಾಗೂ ಇಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ಪೂಜೆ ಸಲ್ಲಿಸಿದ್ದಾರೆ. 
 

ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮೈಸೂರಿನ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅನೇಕ ಕಾಂಗ್ರೆಸ್‌ ನಾಯಕರು ಸಹ ಈ ವೇಳೆ ಅವರ ಜತೆಯಲ್ಲಿದ್ದರು. 

ಚರ್ಚ್‌ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಕ್ರೈಸ್ತ ಸನ್ಯಾಸಿನಿಯರು ರಾಹುಲ್‌ ಗಾಂಧಿಯವರನ್ನು ಮಾತನಾಡಿಸಿದ್ದಾರೆ. ಹಾಗೂ, ಕೈಕುಲುಕುವ ಮೂಲಕ ಹಲವರು ಶುಭ ಕೋರಿದ್ದಾರೆ. 

ಮಸೀದಿಗೆ ಸಹ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಈ ವೇಳೆ, ಕಾಂಗ್ರೆಸ್‌ ನಾಯಕ ವೇಣುಗೋಪಾಲ್ ಸಹ ಅವರ ಜತೆಯಲ್ಲಿದ್ದರು. ಈ ವೇಳೆ ರಾಹುಲ್ ಗಾಂಧಿಗೆ ಹಾರ ಹಾಕಿ ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ.

ಚರ್ಚ್‌ಗೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ..ಕೆ. ಶಿವಕುಮಾರ್‌ ಸಹ ಅವರ ಜತೆಯಲ್ಲಿದ್ದರು. ಅವರು ಸಹ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮೈಸೂರಿನ ಮಸಜಿದ್ - ಇ - ಅಝಮ್‌ಗೆ ಮಸೀದಿಗೆ ಭೇಟಿ ನೀಡಿದ್ದ ವೇಳೆ ರಾಹುಲ್‌ ಗಾಂಧಿಯವರ ಜತೆ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ನಲಪಾಡ್‌ ಸೇರಿ ಅನೇಕರು ಅವರ ಜತೆಯಲ್ಲಿದ್ದರು. 

ರಾಹುಲ್‌ ಗಾಂಧಿ ಮಸೀದಿಗೆ ಹೋಗಿದ್ದ ವೇಳೆ ಅವರಿಗೆ ಭಾರಿ ಭದ್ರತೆಯನ್ನು ಸಹ ನೀಡಲಾಗಿತ್ತು. ಅವರ ಸುತ್ತಮುತ್ತ ಅನೇಕ ಭದ್ರತಾ ಸಿಬ್ಬಂದಿ ಇತರೆ ಜನರನ್ನು ಕಾಂಗ್ರೆಸ್‌ ನಾಯಕನ ಬಳಿ ಸುತ್ತುವರಿಯದಂತೆ ನೋಡಿಕೊಳ್ಳುತ್ತಿದ್ದರು.  

Latest Videos

click me!