ಶೋಭಾ ಕರಂದ್ಲಾಜೆ ಆಯ್ತು, ಈಗ 'ಗೋ ಬ್ಯಾಕ್ ಜಗದೀಶ್ ಶೆಟ್ಟರ್' ಅಭಿಯಾನ ಆರಂಭ!

First Published | Mar 11, 2024, 5:35 PM IST

ಬೆಳಗಾವಿ (ಮಾ.11): ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡುತ್ತಾರೆಂಬ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಗೋ ಬ್ಯಾಕ್ ಅಭಿಯಾನ ಶುರುವಾಗಿದೆ. ಸ್ಥಳೀಯ ಬಿಜೆಪಿ ನಾಯಕ ಮಹಾಂತೇಶ ಕವಟಗಿಮಠ ಅವರ ಬೆಂಬಲಿಗರು ಗೋ ಬ್ಯಾಕ್ ಜಗದೀಶ್ ಶೆಟ್ಟರ್ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪೋಸ್ಟರ್ ಹರಿಬಿಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ವಿಧಾನಸಭಾ ಪರಿಷತ್‌ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಮರಳಿ ಬಿಜೆಪಿ ‌ಸೇರಿರುವ  ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಬೆಳಗಾವಿ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ.

ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಕಣಕ್ಕಿಳಿಯಲಿದ್ದಾರೆಂಬ ಚರ್ಚೆಯ ಬೆನ್ನಲ್ಲಿಯೇ, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಜಗದೀಶ್ ಶೆಟ್ಟರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗೋ-ಬ್ಯಾಕ್ ಅಭಿಯಾನ ಆರಂಭಿಸಿದ್ದಾರೆ.

Tap to resize

ಜೊತೆಗೆ, ಸ್ಥಳೀಯ ನಾಯಕರಿಗೆ ನಮ್ಮ ಮತ, ಅವರೇ ನಮಗೆ ಹಿತ. ಅಧಿಕಾರಕ್ಕಾಗಿ ಪಕ್ಷ ಬಿಟ್ಟವರಿಗೆ, ಕ್ಷೇತ್ರ ಬಿಡುವುದು ದೊಡ್ಡದಲ್ಲ ಎಂದು ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬೆಳಗಾವಿ ಸ್ಥಳೀಯ ಬಿಜೆಪಿ ನಾಯಕ ಮಹಾಂತೇಶ ಕವಟಗಿಮಠ ಬೆಂಬಲಿಸಿ ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕಾಗಿ 'ಪಕ್ಷದಿಂದ ಪಕ್ಷಕ್ಕೆ ಹಾರುವ ಜಗದೀಶ್ ಶೆಟ್ಟರ್ ನಮಗೆ ಬೇಡ, ಮಹಾಂತೇಶ ಕವಟಗಿಮಠ ನಮ್ಮ ನಾಯಕ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ.

Latest Videos

click me!