ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಯ್, ಕಮಲ್ ನಾಥ್ ಬಳಿ ಮಧ್ಯಪ್ರದೇಶವನ್ನು ಅಭಿವೃದ್ಧಿ ಪಥದೆಡೆ ಸಾಗಿಸುವ ಸಂಪೂರ್ಣ ಪ್ಲಾನ್ ಇದೆ. ಅವರೊಬ್ಬರೇ ಮಧ್ಯಪ್ರದೇಶ ಉದ್ಧಾರ ಮಾಡಲು ಸಾಧ್ಯ. ಅವರ ಸರ್ಕಾರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಹಾಗೂ ಸಮಸ್ಯೆ ನಿವಾರಣೆ ಆಗುವವರೆಗೂ ನಾನು ಧರಣಿ ಮುಂದುವರೆಸುತ್ತೇನೆ ಎಂದಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮುಂದುವರೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲದೇ ಮುಂದಿನ 10 ವರ್ಷ ಕಮಲ್ ನಾಥ್ ರವರೇ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಅತಿ ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ ಹಾಗೂ ಸಿಹಿ ಸುದ್ದಿ ಸಿಗಲಿದೆ. ಕಮಲನಾಥ್ ಓರ್ವ ಅತ್ಯುತ್ತಮ ರಾಜಕೀಯ ನಾಯಕರು ಮಾತ್ರವಲ್ಲ, ಅತ್ಯುತ್ತಮ ಉದ್ಯಮಿ ಕೂಡಾ ಹೌದು. ಅವರ ಬಳಿ ರಾಜ್ಯದ ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗ ನಿಡುವ ಪ್ಲಾನ್ ಕೂಡಾ ಇದೆ ಎಂಬುವುದು ಲಕ್ಷ್ಯ್ ಮಾತು.
ಲಕ್ಷ್ಯ್ ತನ್ನೊಂದಿಗೆ ಒಂದು ಪೋಸ್ಟರ್ ಕೂಡಾ ತೆಗೆದುಕೊಂಡು ಬಂದಿದ್ದಾನೆ. ಇದರಲ್ಲಿ ನನಗೆ ನಮ್ಮ ಮುಖ್ಯಮಂತ್ರಿ ಕುರಿತು ಬಹಳ ಗೌರವವಿದೆ. ಭಗವಂತ ನಿಮ್ಮೊಂದಿಗಿದ್ದಾನೆ. ರಾಜ್ಯದ ಜನತೆ ನಿಮ್ಮೊಂದಿಗಿದ್ದಾರೆ ಎಂದು ಬರೆದಿದ್ದಾರೆ.
ಕಮಲ್ ನಾಥ್ ಸಂಸದರಾಗಿದ್ದಾಗ ನಾನು ನಮ್ಮ ಶಾಲೆಯಲ್ಲಿ ಅವರ ಕುರಿತು ಒಂದು ಭಾಷಣ ಮಾಡಿದ್ದೆ. ಇದರಲ್ಲಿ ತಾನು ರಾಜ್ಯದ ಜನತೆಗೆ ವರ ಅಗತ್ಯವಿದೆ ಹಾಗೂ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾನು ಹೇಳಿದ್ದೆ ಎಂದಿದ್ದಾರೆ ಲಕ್ಷ್ಯ್
ನಾನು ಕಮಲ್ ನಾಥ್ ರನ್ನು ಭೇಟಿ ಕೂಡಾ ಮಾಡಿದ್ದೇನೆ. ಈ ವೇಳೆ ಅವರಿಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ದಯನೀಯ ಸ್ಥಿತಿಯನ್ನು ಸುಧಾರಿಸುವ ಕುರಿತು ಮಾಸ್ಟರ್ ಪ್ಲಾನ್ ನೀಡಿದ್ದೇನೆ. ಇದನ್ನು ಜಾರಿಗೊಳಿಸುವ ಭರವಸೆ ಅವರು ನಿಡಿದ್ದಾರೆ ಎಂದಿದ್ದಾರೆ ಲಕ್ಷ್ಯ್
ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷದ 22 ಬಂಡಾಯ ಶಾಸಕರು ಬೆಂಗಳೂರಿನ ರಮಡಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಇವರಿಂದ ಸರ್ಕಾರ ಉರುಳುವ ಭೀತಿಯಲ್ಲಿದ್ದು, ಕಮಲ್ ನಾಥ್ ಸರ್ಕಾರ ಉಳಿಸುವ ಎಲ್ಲಾ ಪ್ರಯತ್ನ ಮುಂದುವರೆಸಿದ್ದಾರೆ