ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯೋನ್ಮುಖ: ಬಿಜೆಪಿಗೆ ನಡುಕ
First Published | Mar 15, 2020, 3:37 PM ISTಡೆಡ್ಲಿ ಕೊರೋನಾದಿಂದಾಗಿ ಎಲ್ಲರೂ ಕೈಕಟ್ಟಿಕೊಂಡು ಮನೆಯಲ್ಲಿ ಕುಳಿತುಕೊಂಡ್ರೆ, ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಮಾರಕ ವೈರಸ್‌ಗೆ ಕ್ಯಾರೆ ಎನ್ನದೇ ಪಕ್ಷ ಸಂಘಟನೆಗೆ ತಾಲೀಮು ನಡೆಸಿದ್ದಾರೆ. ಬಹುತೇಕ ನಾಯಕರ ವಿರೋಧದ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಿರುವ ಡಿ.ಕೆ.ಶಿವಕುಮಾರ್ ಅವರು ಈಗ ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರ ವಿಶ್ವಾಸಗಳಿಸುವತ್ತ ಕಾರ್ಯೋನ್ಮುಖರಾಗಿದ್ದು, ಬಹುತೇಕ ಎಲ್ಲ ನಾಯಕರನ್ನು ಭೇಟಿ ಮಾಡಿ ಒಟ್ಟುಗೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.