ಟೋಕಿಯೋ ಒಲಿಂಪಿಕ್ಸ್‌ 2020 - ಪದಕ ಗೆಲವ ಹಾದಿಯಲ್ಲಿ ಪಿ.ವಿ. ಸಿಂಧು !

First Published | Jul 30, 2021, 3:53 PM IST

ಭಾರತೀಯ ಶಟ್ಲರ್ ಪಿ.ವಿ ಸಿಂಧು ರಿಯೊ ಒಲಿಂಪಿಕ್ಸ್ 2016ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಸ್ತುತ ಟೋಕಿಯೊದಲ್ಲಿ ನೆಡೆಯುತ್ತಿರುವ  ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ಭರವಸೆಯ ಆಟಗಾರ್ತಿ ಸಿಂಧು ಕ್ವಾಟರ್‌ಫೈನಲ್‌ಗೆ ತಲುಪಿದ್ದಾರೆ.   ಸಿಂಧು ಅವರು ಈ ಸಾಧನೆಗಳನ್ನು ಮಾಡಲು ನೆಡೆದು ಬಂದಿರುವ ಹಾದಿ ಸುಲಭವಾಗಿಲ್ಲ. ಕಠಿಣ ಪರಿಶ್ರಮ, ಪ್ರೀತಿಪಾತ್ರರಿಂದ ದೂರವಿರುವುದು ಮತ್ತು ಒಲಿಂಪಿಕ್ ಹಂತವನ್ನು ತಲುಪಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. 

ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.

ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.

ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ

Tap to resize

ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.

ಸಿಂಧು ಯಶಸ್ವಿಯ ಹಿಂದೆ ಅವರ ಕೋಚ್‌ ಪುಲ್ಲೇಲಾ ಗೋಪಿಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅತ್ಯುತ್ತಮ ತರಬೇತಿಯನ್ನು ನೀಡುವುದಲ್ಲದೆ ಪೋಷಕರಂತೆ ಸಿಂಧುವನ್ನು ನೋಡಿಕೊಂಡಿದ್ದಾರೆ.

ಅವರು ಯಾರೊಂದಿಗೂ ಮಾತನಾಡಲು ಸಾಧ್ಯವಾಗಲಿಲ್ಲ. ಯಾರನ್ನೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಮತ್ತು ಅವರ ಗಮನ ಕೇವಲ ಆಟದ ಮೇಲೆ ಮಾತ್ರ ಇರುವಂತೆ ನೋಡಿಕೊಳ್ಳಲಾಗಿತ್ತು.

ಅವರ ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂತರಬೇತುದಾರ ಪುಲ್ಲೇಲಾ ಗೋಪಿಚಂದ್ ಕಾಳಜಿ ವಹಿಸುತ್ತಾರೆ ಎಂದು ಪಿ.ವಿ ಸಿಂಧುಹೇಳುತ್ತಾರೆ.

ಅವರ ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ತರಬೇತುದಾರ ಪುಲ್ಲೇಲಾ ಗೋಪಿಚಂದ್ ಕಾಳಜಿ ವಹಿಸುತ್ತಾರೆ ಎಂದು ಪಿ.ವಿ ಸಿಂಧು ಹೇಳುತ್ತಾರೆ.

ಸಿಂಧು ಅವರ ಫಿಟ್‌ನೆಸ್‌ನಿಂದ ಹಿಡಿದು ಆಹಾರ ಮತ್ತು ಪಾನೀಯದವರೆಗೆ ಎಲ್ಲವನ್ನು ಟ್ರ್ಯಾಕ್‌ ಮಾಡಲಾಗುತ್ತಿತ್ತು. ಸಿಂಧು ತೂಕ ಹೆಚ್ಚಾಗದೆ ಫಿಟ್‌ ಆಗಿರಲು ಗೋಪಿ ಚೆಂದ್‌ ಸಿಂಧುವಿನ ತಟ್ಟೆಯಿಂದ ಆಹಾರವನ್ನು ಸಹತೆಗೆಯುತ್ತಿದ್ದರು.ಗೋಪಿಚಂದ್ ತಮ್ಮ ಅಕಾಡೆಮಿಯಲ್ಲಿರುವ ಎಲ್ಲದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.

ಬ್ರೆಡ್ ಮತ್ತು ಸಕ್ಕರೆಯನ್ನು ಅವರ ಅಕಾಡೆಮಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಮಾತ್ರವಲ್ಲದೆ, ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಫುಡ್‌ ಕ್ರೀಡಾಪಟುವಿನ ತಟ್ಟೆಯಿಂದ ದೂರವಿರಿಸುತ್ತಾರೆ.

ಸಿಂಧು ಚಾಕೊಲೇಟ್ ಮತ್ತು ಹೈದರಾಬಾದ್ ಬಿರಿಯಾನಿ ತಿನ್ನುವುದನ್ನು ನಿಷೇಧಿಸಲಾಗಿತು.ಆದರೆ, ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಸಿಂಧು ಮೊದಲು ಐಸ್ ಕ್ರೀಮ್ ತಿನ್ನುವ ಬಯಕೆಯನ್ನು ವ್ಯಕ್ತಪಡಿಸಿದರು. ಸಿಂಧುಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಈಗ ಅವಳು ಏನು ಬೇಕಾದರೂ ತಿನ್ನಬಹುದು ಎಂದು ಗೋಪಿಚಂದ್‌ ಹೇಳಿದ್ದರು.

ಸಿಂಧು ಚಾಕೊಲೇಟ್ ಮತ್ತು ಹೈದರಾಬಾದ್ ಬಿರಿಯಾನಿ ತಿನ್ನುವುದನ್ನು ನಿಷೇಧಿಸಲಾಗಿತು. ಆದರೆ, ರಿಯೊ ಒಲಿಂಪಿಕ್ಸ್ 2016 ರಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಸಿಂಧು ಮೊದಲು ಐಸ್ ಕ್ರೀಮ್ ತಿನ್ನುವ ಬಯಕೆಯನ್ನು ವ್ಯಕ್ತಪಡಿಸಿದರು. ಸಿಂಧುಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಈಗ ಅವಳು ಏನು ಬೇಕಾದರೂ ತಿನ್ನಬಹುದು ಎಂದು ಗೋಪಿಚಂದ್‌ ಹೇಳಿದ್ದರು.

ಪಿವಿ ಸಿಂಧು ಅವರ ಯಶಸ್ಸಿನ ಹಿಂದೆ ಆಕೆಯ ಕೋಚ್‌ನ ಮುಖ್ಯ ಪಾತ್ರವಿದೆ ಎಂಬ ಮಾತನ್ನು ಸಿಂಧು ತಂದೆ ಒಪ್ಪಿಕೊಂಡಿದ್ದಾರೆ.

ತನ್ನ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಪ್ರಾರಂಭಿಸಲು ಗೋಪಿಚಂದ್ ತನ್ನ ಮನೆಯನ್ನು ಸಹ ಅಡ ಇಡಬೇಕಾಗಿತ್ತು. ಆಂಧ್ರಪ್ರದೇಶ ಸರ್ಕಾರವು ಅಕಾಡೆಮಿ ನಿರ್ಮಿಸಲು ಗೋಪಿಚಂದ್‌ಗೆ ಭೂಮಿಯನ್ನು ನೀಡಿತ್ತು, ಆದರೆ ಯೋಜನೆಯನ್ನು ಪೂರ್ಣಗೊಳಿಸಲು ಅವರ ಬಳಿ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಮತ್ತು ಕ್ರೀಡಾಪಟುಗಳ ಕನಸನ್ನು ಈಡೇರಿಸಲು ತಮ್ಮ ಮನೆಯನ್ನು ಅಡ ಇಟ್ಟಿದ್ದರು.

ಈಗ ಮತ್ತೊಮ್ಮೆ ಭಾರತವು ಶಟ್ಲರ್ ಪಿ.ವಿ ಸಿಂಧು ಅವರಿಂದ ಪದಕ ಪಡೆಯುವ ನಿರೀಕ್ಷೆಯಲ್ಲಿದೆ. ಈ ಬಾರಿ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ತನ್ನ ಬೆಳ್ಳಿಯನ್ನು ಚಿನ್ನವಾಗಿ ಪರಿವರ್ತಿಸಲಿ ಎಂದು ಹಾರೈಸೋಣ.

Latest Videos

click me!