ಕಿಮ್‌ ಶರ್ಮಾ ಜೊತೆ ಲಿಯಾಂಡರ್‌ ಪೇಸ್‌ ಡೇಟಿಂಗ್‌? ಫೋಟೋ ವೈರಲ್‌!

First Published | Jul 15, 2021, 10:37 AM IST

ಟೆನಿಸ್ ಚಾಂಪಿಯನ್ ಲಿಯಾಂಡರ್‌ ಪೇಸ್‌ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಬಹಳ ಸಮಯದಿಂದ ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ಲಿಯಾಂಡರ್‌ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಕಿಮಾ ಶರ್ಮಾ ಮತ್ತು ಲಿಯಾಂಡರ್ ಪೇಸ್‌ ಅವರ ಗೋವಾ ಹಾಲಿಡೇ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಕಂಡು ಬಂದಿದ್ದು, ಫೋಟೋ ಸಖತ್‌ ವೈರಲ್ ಆಗಿವೆ.
 

ಬಾಲಿವುಡ್ ನಟಿ ಕಿಮ್ ಶರ್ಮಾ ಮತ್ತು ಟೆನಿಸ್ ಚಾಂಪಿಯನ್ ಲಿಯಾಂಡರ್ ಪೇಸ್ ಪ್ರಸ್ತುತ ಗೋವಾದಲ್ಲಿದ್ದಾರೆ.
ಇಬ್ಬರೂ ಗೋವಾದ ಫೇಮಸ್‌ ರೆಸ್ಟೋರೆಂಟ್‌ನಲ್ಲಿ ಪೌಸಾಡಾ ಬೈ ದಿ ಬೀಚ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ.
Tap to resize

ಆದಾಗ್ಯೂ, ಕಿಮ್ ಅಥವಾ ಲಿಯಾಂಡರ್ ಅವರ ಸಂಬಂಧದ ಕುರಿತು ಏನನ್ನೂ ರಿವೀಲ್ ಮಾಡಿಲ್ಲ.ಇದುವರೆಗೂ ಅವರು ಯಾವುದೇ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ.
ಆದರೆ ಗೋವಾದ ರೆಸ್ಟೋರೆಂಟ್ ಈ ರೂಮರ್ಡ್‌ ಕಪಲ್‌ನ ಎರಡು ಸುಂದರವಾದ ಫೋಟೋಗಳನ್ನು ಪೋಸ್ಟ್‌ ಮಾಡಿದ್ದು, ಈ ಜೋಡಿ ಡೇಟ್‌ಮಾಡುತ್ತಿದ್ದಾರೆ ಎಂದು ಸುಳಿವು ನೀಡಿದೆ.
ಕಿಮ್ ಮತ್ತು ಲಿಯಾಂಡರ್ ಪೇಸ್ ಒಂದು ಫೋಟೋದಲ್ಲಿ ಊಟದ ಟೇಬಲ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಎರಡನೇ ಫೋಟೋ ಲಿಯಾಂಡರ್ ನಟಿಯನ್ನು ಹಿಂದಿನಿಂದ ಹಿಡಿದು ಕೊಂಡಿದ್ದಾರೆ. ಕಿಮ್‌ ಡೆನಿಮ್ ಶಾರ್ಟ್ಸ್ ಜೊತೆ ಬಿಳಿ ಶರ್ಟ್ ಧರಿಸಿದ್ದಾರೆ. ಫೋಟೋದಲ್ಲಿ ಎರಡು ಲ್ಯಾಬ್ರಡಾರ್ ನಾಯಿಗಳ ಜೊತೆ ಇವರಿಬ್ಬರು ಪೋಸ್ ನೀಡಿದ್ದಾರೆ.
ಆದರೆ ಕಿಮ್ ಮತ್ತು ಲಿಯಾಂಡರ್ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳಲ್ಲಿ ಜೊತೆಯಾಗಿರುವ ಯಾವುದೇ ಫೋಟೋ ಇಲ್ಲ, ಇಬ್ಬರು ತಮ್ಮ ಆಕೌಂಟ್‌ನಲ್ಲಿ ಗೋವಾದ ತಮ್ಮದೇ ಆದ ಕ್ಲಿಕ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಕಿಮ್ ಈ ಹಿಂದೆ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿ ಹಬ್ಬಿತ್ತು
ಮತ್ತೊಂದೆಡೆ, ಲಿಯಾಂಡರ್ ಮಾಜಿ ಪಾರ್ಟನರ್‌ ರಿಯಾ ಪಿಳ್ಳೈಯಿಂದ ಒಬ್ಬ ಮಗಳನ್ನು ಹೊಂದಿದ್ದಾರೆ.

Latest Videos

click me!