Published : Apr 09, 2020, 02:35 PM ISTUpdated : Apr 09, 2020, 03:17 PM IST
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಶೋಯೆಬ್ ಮಲಿಕ್ ವಿವಾಹವಾಗಿರುವ ಸಾನಿಯಾಗೆ 2018ರ ಅಕ್ಟೋಬರ್‌ನಲ್ಲಿ ಗಂಡು ಮಗುವಿನ ತಾಯಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಮಗನ ಫೋಟೋ ರಿವೀಲ್ ಮಾಡಿದ ಮರುಕ್ಷಣದಿಂದಲೇ ಅಭಿಮಾನಿಗಳು ಪುತ್ರ ಕ್ರಿಕೆಟಿಗನಾಗುತ್ತಾನೋ ಅಥವಾ ಟೆನಿಸ್ ಪಟು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದರು. ಇದೀಗ ಸಾನಿಯಾ ಈ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.