ಪತಿಗೆ ವಿಶೇಷವಾಗಿ ಆ್ಯನಿವರ್ಸರಿ ವಿಶ್‌ ಮಾಡಿದ ಸಾನಿಯಾ ಮಿರ್ಜಾ!

First Published | Apr 14, 2021, 11:54 AM IST

ಭಾರತೀಯ ಟೆನಿಸ್ ಸ್ಟಾರ್‌ ಸಾನಿಯಾ ಮಿರ್ಜಾ ಮತ್ತು  ಪಾಕಿಸ್ತಾನಿ ಕ್ರಿಕೆಟರ್‌ ಶೋಯೆಬ್ ಮಲಿಕ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 12 ರಂದು ಸೆಲಬ್ರೆಟ್‌ ಮಾಡಿಕೊಂಡರು. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 12,2010 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು. ಮದುವೆಯ 11ನೇ ಆನಿವರ್ಸರಿಯಂದು ಸಾನಿಯಾ ಮಿರ್ಜಾ ತನ್ನ ಪತಿ ಶೋಯೆಬ್ ಮಲಿಕ್ ಅವರನ್ನು ಬಹಳ ವಿಶೇಷ ರೀತಿಯಲ್ಲಿ ವಿಶ್‌ ಮಾಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ ಫನ್ನಿ ಕ್ಯಾಪ್ಷನ್‌ ನೀಡಿದ್ದಾರೆ.

ಭಾರತದ ಟೆನಿಸ್ ಸ್ಟಾರ್‌ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಆಲ್‌ರೌಂಡರ್ ಶೋಯೆಬ್ ಮಲಿಕ್ ಮದುವೆಯಾಗಿ 11 ವರ್ಷಗಳಾಗಿವೆ.
ಈ ಸಂದರ್ಭದಲ್ಲಿ, ಸಾನಿಯಾ ತನ್ನ ಪತಿಗೆ ವಿಶೇಷವಾಗಿ ಶುಭ ಹಾರೈಸಿತಮ್ಮ ಎರಡು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Tap to resize

ಸಾನಿಯಾ ಮಿರ್ಜಾ ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ದಂಪತಿ 11ನೇ ಆನಿವರ್ಸರಿಗೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಅರ್ಧ ಗಂಟೆಯಲ್ಲಿ 60 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಪಡೆದಿವೆ ಫೋಟೋಗಳು.
ಸಾನಿಯಾ ಮತ್ತು ಶೋಯೆಬ್ ಮಲಿಕ್ ಅವರ ವಿವಾಹವು ಸಖತ್‌ ಸದ್ದು ಮಾಡಿತ್ತು. ಇಬ್ಬರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ಅಂತಿಮವಾಗಿ ಅವರ ಪ್ರೀತಿ ಗೆದ್ದಿತು.
ಮದುವೆಯಾಗುವ ನಿಮ್ಮ ಸಂಗಾತಿ ಎಲ್ಲಿಂದ ಬಂದಿದ್ದಾರೆ ಅಥವಾ ದೇಶಗಳ ನಡುವೆ ರಾಜಕೀಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಚಿಂತಿಸಬೇಡಿ. ನೀವು ಯಾರನ್ನಾದರೂ ಪ್ರೀತಿಸಿ ಆ ವ್ಯಕ್ತಿಯನ್ನು ಮದುವೆಯಾಗುವುದರಲ್ಲಿ ಯಾವುದೇ ಕೆಡಕಿಲ್ಲ ಎಂದು ಸಂದರ್ಶನವೊಂದರಲ್ಲಿ, ಶೋಯೆಬ್ ಮಲಿಕ್ ಹೇಳಿದ್ದರು.
ಆದಾಗ್ಯೂ, ಸಾನಿಯಾ ಶೋಯೆಬ್ ಅವರ ಮೊದಲ ಹೆಂಡತಿ ಅಲ್ಲ. 2002ರಲ್ಲಿ ಶೋಯೆಬ್ ಮಲಿಕ್ ಆಯೆಷಾ ಎಂಬ ಹುಡುಗಿಯನ್ನು ಫೋನ್‌ನಲ್ಲಿ ಮದುವೆಯಾದರು. ಆದರೆ ಮೊದಲು ಮದುವೆಗಾಗಿ ಇನ್ನೊಬ್ಬ ಹುಡುಗಿಯ ಫೋಟೋ ತೋರಿಸಿ ಮೋಸ ಮಾಡಲಾಗಿತ್ತು ಎಂದು ತಿಳಿದುಬಂದಿದೆ.ಆ ಕಾರಣದಿಂದ ಆ ಮದುವೆ ಕಾನೂನು ಬಾಹಿರವಾಯಿತು.
2010ರಲ್ಲಿ ವಿವಾಹವಾದಶೋಯೆಬ್ ಮತ್ತು ಸಾನಿಯಾ ಅವರು 2018ರಲ್ಲಿ ಮಗುವಿನ ಪೋಷಕರಾದರು.
ತಾಯಿಯಾದ ನಂತರ, ಬ್ರೇಕ್‌ ತೆಗೆದು ಕೊಂಡಿದ್ದ ಸಾನಿಯಾ ಮಿರ್ಜಾ ಸ್ವಲ್ಪ ಸಮಯದ ನಂತರ ಹೋಬಾರ್ಟ್ ಇಂಟರ್ನ್ಯಾಷನಲ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು
ಪಾಕಿಸ್ತಾನದ ಪರವಾಗಿ ದೀರ್ಘಕಾಲ ಆಡಿದ್ದ ಶೋಯೆಬ್ ಮಲಿಕ್, 2019 ರಲ್ಲಿ ಪಾಕಿಸ್ತಾನ ತಂಡದಿಂದ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾದರು.

Latest Videos

click me!