ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಆಯೋಜಕರು

Suvarna News   | Asianet News
Published : Mar 12, 2021, 11:41 AM IST

ನವದೆಹಲಿ: ಕ್ರಿಕೆಟ್‌ ಬಳಿಕ ದೇಶದಲ್ಲಿ ಅತಿಹೆಚ್ಚು ಕ್ರೇಜ್‌ ಹುಟ್ಟುಹಾಕಿರುವ ದೇಸಿ ಕ್ರೀಡೆ ಕಬಡ್ಡಿ ಕಳೆದ ಕೆಲವು ವರ್ಷಗಳಿಂದ ಹೊಸ ಸಂಚಲವನ್ನೇ ಸೃಷ್ಠಿ ಮಾಡಿದೆ. ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ಸಾಮರ್ಥ್ಯ ಹೊಂದಿರುವ ಪ್ರೊ ಕಬಡ್ಡಿ ಟೂರ್ನಿಗೆ ದೇಶದ ನಾನಾ ಮೂಲೆಗಳಿಂದ ಅಭಿಮಾನಿಗಳಿದ್ದಾರೆ. ಈಗಾಗಲೇ ಯಶಸ್ವಿಯಾಗಿ 7 ಪ್ರೊ ಕಬಡ್ಡಿ ಟೂರ್ನಿ ಆಯೋಜನೆಗೊಂಡಿದ್ದು, ಕಳೆದ ವರ್ಷ ಕೊರೋನಾ ಭೀತಿಯಿಂದಾಗಿ ಟೂರ್ನಿಯನ್ನು ರದ್ದುಪಡಿಸಲಾಗಿತ್ತು. ಮತ್ತೆ ಯಾವಾಗ ಪ್ರೊ ಕಬಡ್ಡಿ ಶುರುವಾಗುತ್ತೆ ಎಂದು ಕನವರಿಸುತ್ತಿದ್ದ ಅಭಿಮಾನಿಗಳಿಗೆ ಪ್ರೊ ಕಬಡ್ಡಿ ಲೀಗ್(ಪಿಕೆಎಲ್) ಆಯೋಜಕರು ಗುಡ್ ನ್ಯೂಸ್‌ ನೀಡಿದ್ದಾರೆ.

PREV
16
ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಆಯೋಜಕರು

2021ರ ಆವೃತ್ತಿಯ ಪ್ರೊ ಕಬಡ್ಡಿ ಜುಲೈನಿಂದ ಅಕ್ಟೋಬರ್‌ ವರೆಗೂ ನಡೆಸಲು ಯೋಜನೆ ರೂಪಿಸಲಾಗಿದೆ. ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

26

ಕೋವಿಡ್‌ ಕಾರಣದಿಂದಾಗಿ 2020ರ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯು ರದ್ದಾಗಿತ್ತು. 

36

ಆದರೆ ಸದ್ಯ ಬಹುತೇಕ ಕ್ರೀಡೆಗಳು ಬಯೋ ಸೆಕ್ಯೂರ್‌ ವಾತಾವರಣದಲ್ಲಿ ನಡೆಯುತ್ತಿದ್ದು, ಇದೇ ವ್ಯವಸ್ಥೆಯನ್ನು ಅಳವಡಿಸಿಕೊಂಡು ಟೂರ್ನಿ ಆಯೋಜಿಸುವುದಾಗಿ ಪ್ರೊ ಕಬಡ್ಡಿಯ ಆಯೋಜಕ ಸಂಸ್ಥೆ ಮಶಾಲ್‌ ಸ್ಪೋರ್ಟ್ಸ್‌ನ ಮುಖ್ಯಸ್ಥ ಅನುಪಮ್‌ ಗೋಸ್ವಾಮಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 

46

8ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯು ಎಂದಿನಂತೆ ರೋಚಕತೆಯನ್ನು ಕಾಯ್ದುಕೊಳ್ಳಲಿದ್ದು, ಮತ್ತಷ್ಟು ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

56

ಪಿಕೆಎಲ್‌ ಟೂರ್ನಿಯು ನವೀನ್‌ ಕುಮಾರ್, ನಿತೀಶ್ ಕುಮಾರ್ ಅವರಂತಹ ದೇಶಿ ಪ್ರತಿಭೆಗಳನ್ನು ಅನಾವರಣ ಮಾಡಿದೆ. ಮುಂದೆಯೂ ಪಿಕೆಎಲ್‌ ವತಿಯಿಂದ ದೇಸಿ ಪ್ರತಿಭಾ ಶೋಧ ನಡೆಯಲಿದೆ ಎಂದು ಅನುಪಮ್‌ ಗೋಸ್ವಾಮಿ ತಿಳಿಸಿದ್ದಾರೆ.

66

ಪ್ರೊ ಕಬಡ್ಡಿ ಟೂರ್ನಿಯ ಪ್ರಸಾರ ಹಕ್ಕು ಹರಾಜು ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

click me!

Recommended Stories