ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಾನಿಯಾ, ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆ!
First Published | Apr 30, 2020, 9:40 PM ISTಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೆಸರನ್ನು ಫೆಡ್ ಕಪ್ ಹಾರ್ಟ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶಗೊಳ್ಳುತ್ತಿರುವ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಸಾನಿಯಾ ಮಿರ್ಜಾ ಪಾತ್ರರಾಗಿದ್ದಾರೆ. ಪುತ್ರ ಇಜಾನ್ ಆಗಮನದ ಬಳಿಕ 18 ತಿಂಗಳ ಟೆನಿಸ್‌ನಿಂದ ದೂರವಿದ್ದ ಸಾನಿಯಾ ಮಿರ್ಜಾ ಮತ್ತೆ ಫೆಡ್ ಕಪ್ ಟೂರ್ನಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಸಾನಿಯಾ ನಾಮನಿರ್ದೇಶನಗೊಂಡ ಪ್ರಶಸ್ತಿ ವಿವರ ಇಲ್ಲಿದೆ.