ಟೆನಿಸ್ ಸುಂದರಿ, ಚಾಂಪಿಯನ್ ಮರಿಯಾ ಶರಪೋವಾ ದಿಢೀರ್ ವಿದಾಯ!

First Published | Feb 26, 2020, 10:04 PM IST

ಟೆನಿಸ್ ಕ್ರೀಡೆಯ ಮೆರುಗು ಹೆಚ್ಚಿಸಿದ, 5 ಗ್ರ್ಯಾಂಡ್ ಸ್ಲಾಂ ವಿಜೇತ, ನಂಬರ್ 1 ಟೆನಿಸ್ ಪಟು ರಷ್ಯಾದ ಮರಿಯಾ ಶರಪೋವಾ ದಿಢೀರ್ ವಿದಾಯ ಹೇಳಿದ್ದಾರೆ. ಶರಪೋವಾ ವಿದಾಯ ಟೆನಿಸ್ ಅಭಿಮಾನಿಗಳಿಗೆ ಆಘಾತ ತಂದಿದೆ. 32 ವರ್ಷದ ಶರಪೋವಾ ವಿದಾಯಕ್ಕೆ ಕಾರಣವೇನು? ಇಲ್ಲಿದೆ.

ಟೆನಿಸ್‌ಗೆ ವಿದಾಯ ಹೇಳಿದ 32 ವರ್ಷದ ಮರಿಯಾ ಶರಪೋವಾ
17ನೇ ವಯಸ್ಸಿಗೆ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಸಾಧಕಿ ಶರಪೋವಾ
Tap to resize

ಒಟ್ಟು 5 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ವಿಜೇತ ಶರಪೋವಾ
ವಿಂಬಲ್ಡನ್, ಯುಎಸ್ ಒಪನ್, ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್(2) ಗೆದ್ದಿದ್ದಾರೆ
2004ರಲ್ಲಿ ವಿಂಬಲ್ಡನ್ ಮೂಲಕ ಮೊದಲ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಶರಪೋವಾ
2005ರಲ್ಲಿ ನಂಬರ್ 1 ರ್ಯಾಂಕ್ ಪಟ್ಟ ಅಲಂಕರಿಸಿದ್ದ ಮರಿಯಾ ಶರಪೋವಾ
ಶರಪೋವಾ ಆಡಿದ ಕೊನೆಯ ಟೂರ್ನಿ ಆಸ್ಟ್ರೇಲಿಯಾ ಓಪನ್ 2020
ಈ ವರ್ಷದ ಆಡಿದ 2 ಪಂದ್ಯದಲ್ಲಿ ಸೋತು ಹೊರಬಿದ್ದ ಶರಪೋವಾ
ಭುಜದ ನೋವಿನಿಂದ ಬಳಲುತ್ತಿರುವ ಶರಪೋವಾ ನಿವೃತ್ತಿ ನಿರ್ಧಾರ
2007ರಿಂದಲೂ ಭುಜದ ನೋವಿಗೆ ತುತ್ತಾಗಿದ್ದ ಶರಪೋವಾ
2013ರಲ್ಲಿ ಭುಜದ ನೋವಿನಿಂದ ಸರಿ ಸುಮಾರು 1 ವರ್ಷ ಟೆನಿಸ್‌ನಿಂದ ಹೊರಗುಳಿದ ಶರಪೋವಾ
2016ರಲ್ಲಿ ಡೋಪ್ ಟೆಸ್ಟ್‌ನಿಂದ ಶರಪೋವಾಗೆ 15 ತಿಂಗಳು ನಿಷೇಧದ ಶಿಕ್ಷೆ
ರಷ್ಯಾದಲ್ಲಿ ಹುಟ್ಟಿದ ಶರಪೋವಾ ಅಮೆರಿಕಾದ ಫ್ಲೋರಿಡಾದಲ್ಲಿ ನೆಲೆಸಿದ್ದಾರೆ
ಮಾಡೆಲ್ ಆಗಿ ಹಲವು ಬ್ರ್ಯಾಂಡ್ ಪ್ರವೋಶನ್‌ಗಳಲ್ಲಿ ಗುರಿತಿಸಿಕೊಂಡಿದ್ದಾರೆ ಶರಪೋವಾ
ಎಪ್ರಿಲ್ 19, 1987ರಲ್ಲಿ ಹುಟ್ಟಿದ ಮರಿಯಾ ಶರಪೋವಾ

Latest Videos

click me!