ಮೈಕ್ ಟೈಸನ್: ನಿಮಗೆ ಗೊತ್ತಿರದ ಬಾಕ್ಸರ್‌ನ ಡ್ರಗ್ಸ್, ಕ್ರೈಂ, ಸೆಕ್ಸ್ ಕಹಾನಿ

First Published | Dec 1, 2020, 3:36 PM IST

ನ್ಯೂಯಾರ್ಕ್: ಮೈಕ್‌ ಟೈಸನ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಬಲಾಢ್ಯ ಭುಜಬಲ ಹಾಗೂ ಕಣ್ಮಿಟುಕಿಸಿ ಬಿಡುವಷ್ಟರಲ್ಲೇ ಮುಖಕ್ಕಪ್ಪಳಿಸುವ ಪಂಚ್‌ನಿಂದ ಬಾಕ್ಸಿಂಗ್ ಜಗತ್ತನ್ನೇ ಆಳಿದ ಮೈಕ್ ಟೈಸನ್ ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಬಾಕ್ಸಿಂಗ್‌ ರಿಂಗ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಬಾಕ್ಸಿಂಗ್ ಹೆವಿವೇಯ್ಟ್ ಸ್ಫರ್ಧೆಯಲ್ಲಿ ತನ್ನದೇ ಆದ ಖದರ್ ಹೊಂದಿದ್ದ ಟೈಸನ್ ಬೆನ್ನಿಗೆ ಪ್ರಖ್ಯಾತಿಯಷ್ಟೇ ಕುಖ್ಯಾತಿಯೂ ಇದೆ. 54 ವರ್ಷದ ಟೈಸನ್ ಪುನಃ ರಾಯ್ ಜೋನ್ಸ್‌ ವಿರುದ್ಧ ಕಾದಾಡುವ ಮೂಲಕ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೆ ಅಬ್ಬರಿಸಿದ್ದಾರೆ. ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಮೈಕ್‌ ಟೈಸನ್ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ 

ಅಮೆರಿಕದ ವೃತ್ತಿಪರ ಬಾಕ್ಸರ್ ಮೈಕ್ ಟೈಸನ್ 1985ರಿಂದ 2005ರ ತನಕ ಬಾಕ್ಸಿಂಗ್ ರಿಂಗ್‌ನಲ್ಲಿ ಹುಲಿಯಂತೆ ಅಬ್ಬರಿಸಿದ್ದರು. ಇದರ ಜತೆಗೆ ಸಾರ್ವಕಾಲಿಕ ಶ್ರೇಷ್ಟ ಹೆವಿವೇಯ್ಟ್ ಬಾಕ್ಸರ್ ಎನ್ನುವ ಗೌರವವು ಟೈಸನ್‌ಗಿದೆ.
ಮೈಕ್ ಟೈಸನ್ 20 ವರ್ಷ 4 ತಿಂಗಳು 22 ದಿನಕ್ಕೆ ಹೆವಿವೇಯ್ಟ್ ಪಂದ್ಯದಲ್ಲಿ ಚಾಂಪಿಯನ್ ಆಗುವ ಮೂಲಕ ಈ ಸಾಧನೆ ಮಾಡಿದ ಅತಿ ಕಿರಿಯ ಬಾಕ್ಸರ್ ಎನ್ನುವ ದಾಖಲೆಗೆ ಭಾಜನರಾಗಿದ್ದರು.
Tap to resize

1992ರಲ್ಲಿ ಮೈಕ್ ಟೈಸನ್ ಅತ್ಯಾಚಾರ ಮಾಡಿದ ಅಪರಾಧಕ್ಕಾಗಿ 6 ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿದ್ದರು. ಆದಾಗಿಯೂ ಮೂರು ವರ್ಷಗಳ ಬಳಿಕ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು.
Undisputed Truth ಎನ್ನುವ ಆತ್ಮಕಥನದಲ್ಲಿ ಮೈಕ್ ಟೈಸನ್ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಮೈಕ್ ಟೈಸಸ್ ಸಿಯಾಲಿಸ್,ವೈಯಾಗ್ರ ಹಾಗೂ ಕೋಕೆನ್ ಡ್ರಗ್ಸ್‌ ದಾಸರಾಗಿದ್ದರಂತೆ.
ಅತ್ಯಾಚಾರ ಮಾಡಿ ಜೈಲು ಸೇರಿದ್ದ ಟೈಸಸ್, ಜೈಲಿನಲ್ಲೇ ಹಲವು ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ.
ತಮ್ಮ ಆತ್ಮಕಥೆಯಲ್ಲಿ, ನಾನು ಪ್ರತಿನಿತ್ಯ ಸೆಕ್ಸ್ ಮಾಡುತ್ತಿದ್ದೆ. ಅದು ಎಷ್ಟರ ಮಟ್ಟಿಗೆ ಇರುತಿತ್ತು ಎಂದರೆ ಜಿಮ್ ಮತ್ತೆ ವರ್ಕೌಟ್ ಮಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಸೆಕ್ಸ್‌ನಲ್ಲಿ ತೊಡಗಿಕೊಳ್ಳುತ್ತಿದ್ದೆ. ಹಾಗಾಗಿ ಜೈಲಿನ ಕೋಣೆಯಲ್ಲೇ ಉಳಿದುಕೊಳ್ಳುತ್ತಿದ್ದೆ ಎಂದು ಟೈಸನ್ ಬರೆದುಕೊಂಡಿದ್ದಾರೆ.
ಮೈಕ್ ಟೈಸನ್ 1997ರಲ್ಲಿ ನಡೆದ ಕಾದಾಟದಲ್ಲಿ ಎವಾಂಡರ್ ಹೋಲಿಫೈಡ್ ಅವರ ಕಿವಿಯನ್ನು ಕಚ್ಚಿ ವಿವಾದಕ್ಕೆ ಒಳಗಾಗಿದ್ದರು.
ಮೈಕ್ ಟೈಸನ್ ಅವರ ಈ ಅಪರಾಧಕ್ಕೆ 3 ಮಿಲಿಯನ್ ಅಮೆರಿಕನ್ ಡಾಲರ್ ದಂಡ ತೆತ್ತಿದ್ದರು.

Latest Videos

click me!