ಕೆನಡಾದಲ್ಲಿ ಅದ್ಧೂರಿ ಹವ್ಯಕ ಸಮ್ಮೇಳನ: ಕಲೆ, ಸಂಸ್ಕೃತಿ, ಇತಿಹಾಸ ಅನಾವರಣ

Published : Jul 23, 2019, 03:24 PM ISTUpdated : Jul 23, 2019, 04:17 PM IST

ಉತ್ತರ ಅಮೆರಿಕಾದಲ್ಲಿ ನೆಲೆಸಿರುವ ಹವ್ಯಕ ಭಾಷಿಕರನ್ನು ಒಂದೆಡೆ ಸೇರಿಸಿ ಸಂಭ್ರಮಿಸುವ ದ್ವೈವಾರ್ಷಿಕ ಹವ್ಯಕ ಸಮ್ಮೇಳನ ಇತ್ತೀಚೆಗೆ ನಡೆಯಿತು. ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ (HAA) ವತಿಯಿಂದ ಹಮ್ಮಿಕೊಳ್ಳಲಾದ ಈ ಸಮ್ಮೇಳನದಲ್ಲಿ ಹವ್ಯಕ ಕಲೆ, ಸಂಸ್ಕೃತಿ, ಇತಿಹಾಸದ ಅನಾವರಣ. ಅದ್ಧೂರಿ ಸಮ್ಮೇಳನದ ಶ್ರೀಮಂತಿಕೆ ಸಾರುವ ಫೋಟೋಗಳು ಇಲ್ಲಿವೆ ವರದಿ: ಅಂಜಲಿ ಶರ್ಮಾ

PREV
114
ಕೆನಡಾದಲ್ಲಿ ಅದ್ಧೂರಿ ಹವ್ಯಕ ಸಮ್ಮೇಳನ: ಕಲೆ, ಸಂಸ್ಕೃತಿ, ಇತಿಹಾಸ ಅನಾವರಣ
ಅಮೆರಿಕ ಖಂಡದಲ್ಲಿ ನೆಲೆಸಿರುವ ಹವ್ಯಕ ಭಾಷಿಕರನ್ನು ಒಂದೆಡೆ ಸೇರಿಸಿ ಸಂಭ್ರಮಿಸುವ ದ್ವೈವಾರ್ಷಿಕ ಹವ್ಯಕ ಸಮ್ಮೇಳನ

214
ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ (HAA) ವತಿಯಿಂದ ಹಮ್ಮಿಕೊಳ್ಳಲಾಗುವ ಈ ಸಮ್ಮೇಳನ ಈ ಬಾರಿ ಕೆನಡಾದ ಒಂಟಾರಿಯೋ ರಾಜ್ಯದ ಟೊರಾಂಟೋದಲ್ಲಿ ನಡೆಯಿತು.

314
ಎರಡು ದಿನಗಳ ಕಾಲ ನಡೆದ ಹವ್ಯಕ ಸಮ್ಮೇಳನ ಸಮ್ಮೇಳನದಲ್ಲಿ ಹವ್ಯಕ ಸಮುದಾಯದ ಕಲೆ, ಸಂಸ್ಕೃತಿ, ಇತಿಹಾಸ, ಆಹಾರ ಇತ್ಯಾದಿಗಳಿಗೆ ಒತ್ತು ನೀಡಲಾಗಿತ್ತು.

414
ಯುಎಸ್ಎ, ಕೆನಡಾ ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಿಂದಲೂ ಆಗಮಿಸಿದ್ದ ಹವ್ಯಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು

514
ಇದೇ ಮೊದಲ ಬಾರಿಗೆ ಕೆನಡಾದಲ್ಲಿ ಆಯೋಜನೆಗೊಂಡಿದ್ದ ಹವ್ಯಕ ಸಮ್ಮೇಳನದಲ್ಲಿ ಸುಮಾರು 450ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

614
ಇದೇ ಮೊದಲ ಬಾರಿಗೆ ಹವ್ಯಕ ಸಮ್ಮೇಳನದ ಸಂದರ್ಭದಲ್ಲಿ ಯುವ ಶಿಬಿರ ಏರ್ಪಡಿಸಲಾಗಿತ್ತು.

714
ಜು.4ರಂದು ಹವ್ಯಕ ಯುವಕ-ಯುವತಿಯರು ಈ ಶಿಬಿರದಲ್ಲಿ ಪಾಲ್ಗೊಂಡು ಉಭಯ ಕುಶಲೋಪರಿ ನಡೆಸಿದರು. ಅಲ್ಲದೆ, ಟೊರಾಂಟೋ ನಗರದಲ್ಲಿ ಜಿಪ್ಲೈನ್ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

814
ಬೆಳಗ್ಗೆ ಹವ್ಯಕ ಅತಿಥಿಗಳಿಗಾಗಿ ಪಿಕ್ನಿಕ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ ವೇದಘೋಷ ಸಹಿತ ಗಣಪತಿ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

914
ಇದೇ ವೇಳೆ, ‘ಹವ್ಯಸಿರಿ’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕೆನಡಾ ಸಂಸದ ಚಂದ್ರಶೇಖರ್ ಆರ್ಯ, ಬೆಂಗಳೂರಿನ ಹವ್ಯಕ ಮಹಾಸಭಾದ ಶ್ರೀಧರ ಭಟ್ ಕೆಕ್ಕಾರು, ಡಾ|ರಾಮಚಂದ್ರ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.

1014
ಕನ್ನಡದ ಖ್ಯಾತ ಗಾಯಕರು ಸಂಗೀತ ಕಾರ್ಯಕ್ರಮ ನಡೆಯಿಸಿಕೊಟ್ಟರು.

1114
ಭಾರತದಿಂದ ಆಗಮಿಸಿದ್ದ ತೋಟಮನೆ ಗಣಪತಿ ಭಟ್ ಹಾಗೂ ಸಂಜಯ ಬೆಳೆಯೂರ್ ಅವರೊಡಗೂಡಿ ಟೊರಾಂಟೋದ ಯಕ್ಷಮಿತ್ರ ತಂಡ ‘ಕಾರ್ತವೀರ್ಯಾರ್ಜುನ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿತು.

1214
ವಿದುಷಿ ರಾಧಾ ದೇಸಾಯಿ ಅವರಿಂದ ಹಿಂದುಸ್ಥಾನಿ ಗಾಯನ ಹಾಗೂ ಭಗವದ್ಗೀತಾ ವಾಚನ ನಡೆಯಿತು. ಶ್ರೀ ವಿನಾಯಕ ಹೆಗಡೆ ಅವರ ನೇತೃತ್ವದಲ್ಲಿ ಯೂಥ್ ಸಿಂಫೊನಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

1314
ಇದಲ್ಲದೆ, ಯುವ ಪ್ರತಿಭಾ ಪ್ರದರ್ಶನ, ಭರತನಾಟ್ಯ, ಸಿನಿಮಾ ನೃತ್ಯ ಮತ್ತಿತರೆ ವೈವಿಧ್ಯಮಯ ಕಾರ್ಯಕ್ರಮಗಳೂ ಈ ಸಂದರ್ಭದಲ್ಲಿ ಪ್ರದರ್ಶನಗೊಂಡವು.

1414
ಮುಂದಿನ ದ್ವೈವಾರ್ಷಿಕ ಹವ್ಯಕ ಸಮ್ಮೇಳವನ್ನು 2021ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ಹಮ್ಮಿಕೊಳ್ಳುವುದೆಂದು ಇದೇ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

click me!

Recommended Stories