ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನ ಹೀಗಿತ್ತು ರಾಹುಲ್ ಲೈಫ್!

First Published Jun 19, 2019, 5:30 PM IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 1970ರ ಜುಲೈ 19ರಂದು ದೆಹಲಿಯಲ್ಲಿ ಜನಿಸಿದರು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಶ್ರೀಮತಿ ಸೋನಿಯಾ ಗಾಂಧಿ ಮಗ ರಾಹುಲ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನೆಹರು-ಗಾಂಧಿ ಕುಟುಂಬದ ನಾಲ್ಕನೇ ತಲೆಮಾರು. ಹೀಗಿದ್ದರೂ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ಎಲ್ಲದ್ದರು? ಜೀವನ ಶೈಲಿ ಹೇಗಿತ್ತು? ಇಲ್ಲಿದೆ ನೋಡಿ ನಿಮಗೆ ತಿಳಿಯದ ರಾಹುಲ್ ಗಾಂಧೀ ಲೈಫ್ ಸ್ಟೋರಿ...

ರಾಜಕೀಯಕ್ಕೆ ಎಂಟ್ರಿ ಕೊಟ್ಟ ನೆಹರು-ಗಾಂಧಿ ಕುಟುಂಬದ 4ನೇ ತಲೆಮಾರು ರಾಹುಲ್ ಗಾಂಧಿ.
undefined
1970ರ ಜುಲೈ 19ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ದಂಪತಿಯ ಮಗನಾಗಿ ಜನಿಸಿದ ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಮುದ್ದಿನ ತಂಗಿ.
undefined
ಪ್ರೀತಿಯ ಅಣ್ಣನಿಗಾಗಿ ಈ ಮುದ್ದಿನ ತಂಗಿ ಏನು ಬೇಕಾದರೂ ಮಾಡಲು ಸಿದ್ಧ. ಚುನಾವಣಾ ಸಂದರ್ಭದಲ್ಲಿ ಯಾವುದೇ ಹುದ್ದೆ ಇಲ್ಲದೇ ಅಣ್ಣ ರಾಹುಲ್ ಗಾಗಿ ಹಗಲಿರುಳೆನ್ನದೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇ ಇದಕ್ಕೆ ಉದಾಹರಣೆ.
undefined
ಭಾರತದ ಮೊದಲ ಮಹಿಳಾ ಪ್ರಧಾನಿ ಅಜ್ಜಿ ಇಂಧಿರಾ ಗಾಂಧಿ ಎಂದರೆ ರಾಹುಲ್ ಗೆ ಬಹಳ ಅಚ್ಚುಮೆಚ್ಚು.
undefined
ರಾಹುಲ್ ಗಾಂಧಿ ದೆಹಲಿಯ ಸೇಂಟ್ ಕೊಲಂಬಸ್ ಸ್ಕೂಲ್ ಹಾಗೂ ಡೆಹ್ರಾಡೂನ್ ನ ಡೂನ್ ಸ್ಕೂಲ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ. ಸುರಕ್ಷತೆಯ ನಿಟ್ಟಿನಲ್ಲಿ ಮನೆಯಿಂದಲೇ ಶಿಕ್ಷಣ ಪೂರೈಸಿದ್ದಾರೆ.
undefined
1989ರಲ್ಲಿ ದೆಹಲಿಯ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ವ್ಯಾಸಂಗಕ್ಕೆಂದು ಸೇರುತ್ತಾರೆ. ಆದರೆ ಇದಾದ ಬಳಿಕ ಮುಂದಿನ ವ್ಯಾಸಂಗಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಳ್ಳುತ್ತಾರೆ.
undefined
ಆದರೆ 1991ರಲ್ಲಿ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಬಳಿಕ ಭಾರತಕ್ಕೆ ಮರಳಿದ ರಾಹುಲ್ ಗಾಂದೀ ರಾಲಿನ್ಸ್ ಕಾಲೇಜಿಗೆ ಸೇರುತ್ತಾರೆ. ರಾಹುಲ್ ಟ್ರಿನಿಟಿ ಕಾಲೇಜಿನಿಂದ M.Phil ಪದವಿಯನ್ನೂ ಪಡೆದಿದ್ದಾರೆ. ಕೇಂಬ್ರಿಡ್ಜ್ ಯುನಿವರ್ಸಿಟಿಯಿಂದ ಅಂತರಾಷ್ಟ್ರೀಯ ವ್ಯವಹರದಲ್ಲಿ ಪದವಿ ಪಡೆದಿದ್ದಾರೆ
undefined
ಪದವಿ ಶಿಕ್ಷಣ ಪಡೆದ ರಾಹುಲ್ ಗಾಂಧಿ ಲಂಡನ್ ನ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಫರ್ಮ್ ನಲ್ಲಿ ಉದ್ಯೋಗ ಮಾಡುವ ಮೂಲಕ ವೃತ್ತಿ ಬದುಕು ಆರಂಭಿಸುತ್ತಾರೆ.
undefined
ಬಳಿಕ 2004ರಲ್ಲಿ ಮುಂಬೈನಲ್ಲಿ ಬ್ಯಾಕ್ ಅಪ್ ಸರ್ವೀಸಸ್ ಲಿಮಿಟೆಡ್ ಸ್ಥಾಪಿಸಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
undefined
ಬ್ಯಾಡ್ಮಿಂಟನ್ ರಾಹುಲ್ ಗಾಂಧಿಯವರ ಅತ್ಯಂತ ಫೇವರಿಟ್.
undefined
ಜಪಾನಿನ ಅತ್ಯಂತ ಪ್ರಸಿದ್ಧ ಮಾರ್ಷಲ್ ಆರ್ಟ್ AIKODO ನಲ್ಲಿ ರಾಹುಲ್ ಗಾಂಧಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
undefined
ಮೋಮೋಸ್ ರಾಹುಲ್ ಗಾಂಧಿಯ ಅತ್ಯಂತ ಫೇವರಿಟ್ ತಿಂಡಿ.
undefined
ರಾಹುಲ್ ಗಾಂಧಿ ವೈಯಕ್ತಿಕ ಬದುಕು ಮಾತ್ರ ಅತ್ಯಂತ ಸೀಕ್ರೆಟ್. ತಮ್ಮ ಖಾಸಗಿ ಜೀವನವನ್ನು ಮಾಧ್ಯಮ ಹಾಗೂ ರಾಜಕೀಯದಿಂದ ದೂರವಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
undefined
ಹೀಗಿದ್ದರೂ ಪ್ರೆಸ್ ಕಾನ್ಫರೆನ್ಸ್ ಒಂದರಲ್ಲಿ 'ವೆರೋನಿಕ್ ಕಾರ್ಟೆಲ್ಲಿ' ಹೆಸರಿನ ಗರ್ಲ್ ಫ್ರೆಂಡ್ ಇದ್ದಾಳೆ. ವೆನೆಜುವೆಲಾದಲ್ಲಿರುವ ಆಕೆ ಸ್ಪಾನಿಶ್ ಆರ್ಕಿಟೆಕ್ಟ್ ಎಂದು ರಾಹುಲ್ ಗಾಂಧಿ ಹೇಳಿದ್ದರು.
undefined
2004ರಲ್ಲಿ ತನ್ನ ತಂದೆಯ ಕ್ಷೇತ್ರವಾಗಿದ್ದ ಉತ್ತರ ಪ್ರದೇಶದ ಅಮೇತಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡುವ ಮೂಲಕ ರಾಹುಲ್ ಗಾಂಧಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ.
undefined
ರಾಜಕೀಯ ಬದುಕಿಗೆ ಕಾಲಿಟ್ಟ ರಾಹುಲ್ ಗಾಂಧಿಯನ್ನು 2011ರ ಮೇ 11ರಂದು ಉತ್ತರ ಪ್ರದೇಶದ ಬಟ್ಟಾ ಪರ್ಸೌಲ್ ನ ರೈತರನ್ನು ಭೇಟಿಯಾಗಲು ಹೋದ ಸಂದರ್ಭದಲ್ಲಿ ಮೊದಲ ಬಾರಿ ಬಂಧಿಸಲಾಗುತ್ತದೆ.
undefined
ರಾಹುಲ್ ಗಾಂಧಿ ಬಳಸುವ ಬ್ಲ್ಯಾಕ್ ಬೆರಿ ಫೋನ್ ಅತ್ಯಂತ ಫೇಮಸ್. ರಾಹುಲ್ ಗಾಂಧಿ ಆಫೀಸ್ ಎನ್ನಲಾಗುವ ಈ ಫೋನನ್ನು ರಾಹುಲ್ ಸದಾ ತನ್ನ ಬಳಿಯೇ ಇಟ್ಟುಕೊಳ್ಳುತ್ತಾರೆ.
undefined
ರಾಹುಲ್ ಗಾಂಧಿ ತನ್ನ ತಂಗಿ ಪ್ರಿಯಾಂಕಾ ಗಾಂಧಿ ಗಂಡ, ತನ್ನ ಬಾವ ರಾಬರ್ಟ್ ವಾದ್ರಾರನ್ನು ಗೆಳೆಯನೆಂದೇ ಸಂಬೋಧಿಸುತ್ತಾರೆ.
undefined
ಮುದ್ದಿನ ತಂಗಿ ಪ್ರಿಯಾಂಕಾ ಮಕ್ಕಳಾದ ರೆಹಾನ್ ಹಾಗೂ ಮಿರಾಯಾ ವಾದ್ರಾ ಎಂದರೆ, ಮಾವ ರಾಹುಲ್ ಗಾಂಧಿಗೆ ಬಹಳ ಅಚ್ಚುಮೆಚ್ಚು.
undefined
ಕೊರೋನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಕಟುವಾದ ಶಬ್ದಗಳಿಂದ ಟೀಕಿಸಿದ್ದರು.
undefined
click me!