ಶಶಿ ತರೂರ್ ಇಂಗ್ಲಿಷ್‌ಗೆ ಅರ್ಥ ಮಾಡಿಕೊಳ್ಳಲು ಅನುವಾದಕರನ್ನ ನೇಮಿಸಿಕೊಂಡ್ರಂತೆ ಟ್ರಂಪ್

Published : May 29, 2025, 06:43 PM IST

ಪಾಕಿಸ್ತಾನದ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡಿಸಲು ಭಾರತ ಸರ್ಕಾರದಿಂದ ವಿದೇಶ ಪ್ರವಾಸ ಕೈಗೊಂಡಿರುವ ಸಂಸದರ ನಿಯೋಗದಲ್ಲಿ ಶಶಿ ತರೂರ್ ಇದ್ದಾರೆ. ಟ್ರಂಪ್ ಅವರು ತರೂರ್ ಅವರ ಇಂಗ್ಲಿಷ್ ಅನ್ನು ಅರ್ಥಮಾಡಿಕೊಳ್ಳಲು ಭಾಷಾಂತರಕಾರರನ್ನು ನೇಮಿಸಿಕೊಂಡಿದ್ದಾರೆ ಎಂಬ ವದಂತಿಗಳಿವೆ.

PREV
15

ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿಗೆ ತೋರಿಸಲು ಭಾರತ ಸರ್ಕಾರದಿಂದ ಸಂಸದರ ನಿಯೋಗ ವಿದೇಶಗಳಿಗೆ ಭೇಟಿ ನೀಡುತ್ತಿದೆ. ಈ ಸಂಸದರ ನಿಯೋಗದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಸಹ ಇದ್ದಾರೆ. ಶಶಿ ತರೂರ್ ಎಂದ ಕೂಡಲೇ ಎಲ್ಲರಿಗೂ ಮೊದಲು ನೆನಪಾಗೋದು ಅವರು ಬಳಸುವ ಇಂಗ್ಲಿಷ್ ಪದಗಳು.

25

ಉನ್ನತಮಟ್ಟದ ಇಂಗ್ಲಿಷ್ ಪದಗಳ ಮೂಲಕವೇ ಶಶಿ ತರೂರ್ ಎಲ್ಲರ ಗಮನ ಸೆಳೆಯುತ್ತಾರೆ. ಕೆಲವು ಬಾರಿಯಂತೂ ಶಶಿ ತರೂರ್ ಬಳಸಿದ ಪದವನ್ನು ಡಿಕೋಡ್ ಮಾಡಲು ಕಷ್ಟವಾಗುತ್ತದೆ. ಸರ್ವಪಕ್ಷ ಸಂಸದರ ನಿಯೋಗದಲ್ಲಿರುವ ಸಂಸದ ಶಶಿ ತರೂರ್ ಅಮೆರಿಕಕ್ಕೆ ಬರುತ್ತಿರುವ ವಿಷಯ ತಿಳಿದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಗ್ಲಿಷ್ ಟು ಇಂಗ್ಲಿಷ್ ಭಾಷಾಂತರ ತಜ್ಞರನ್ನು ನೇಮಿಸಿಕೊಂಡಿದ್ದಾರಂತೆ.

35

ಅಮೆರಿಕದ ಅಧಿಕೃತ ಭಾಷೆ ಇಂಗ್ಲಿಷ್ ಆದ್ರೂ ಶಶಿ ತರೂರ್ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಅಮೆರಿಕನ್ನರಿಗೆ ಕಷ್ಟವಾದಂತಿದೆ. ಇತ್ತೀಚಿನ ಶಶಿ ತರೂರ್ ತಮ್ಮ ಭಾಷಣದಲ್ಲಿ “floccinaucinihilipilification" ಎಂಬ ಪದ ಬಳಸಿದ್ದರು. ಇದನ್ನು ಪರಮಾಣು ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿತ್ತು. ಈ ಪದದ ಬಳಕೆ ಬೆನ್ನಲ್ಲೇ ಟ್ರಂಪ್ ಭಾಷಾ ತಜ್ಞರನ್ನು ನೇಮಿಸಿಕೊಂಡಿದ್ದಾರಂತೆ.

45

ನಾನು ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತೇನೆ. ಬಹುಶಃ ಶಶಿ ತರೂರ್ ನನ್ನ ಡಿಕ್ಷನರಿಯಲ್ಲಿ ಇಲ್ಲದ ಕಠಿಣ ಪದಗಳನ್ನು ಬಳಸುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ ಎನ್ನಲಾಗಿದೆ. ಟ್ರಂಪ್ ನೇಮಿಸಿಕೊಂಡಿರುವ ಅನುವಾದಕ ಆಕ್ಸ್‌ಫರ್ಡ್‌ನಿಂದ ಪಿಎಚ್‌ಡಿ ಪಡೆದಿದ್ದಾರೆ. ಕಠಿಣ ಪದಗಳನ್ನು ಅರ್ಥೈಸಿಕೊಳ್ಳಲು ತರಬೇತಿ ಪಡೆದಿದ್ದಾರೆ.

55

ವಾಕ್ಚಾತುರ್ಯವು ಅಪರಾಧವಾಗಿದ್ದರೆ, ನಾನು ವಾಗ್ಮಿಯಾಗಿ ತಪ್ಪಿತಸ್ಥನೆಂದು ಒಪ್ಪಿಕೊಳ್ಳುತ್ತೇನೆ ಎಂದು ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಶಶಿ ತರೂರ್ ಅವರ ಭಾಷಣದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಟ್ಟಿನಲ್ಲಿ ಆಂಗ್ಲ ಭಾಷಿಕರಿಗೂ ಶಶಿ ತರೂರ್ ಮಾತುಗಳನ್ನು ಅರ್ಥೈಸಿಕೊಳ್ಳಲು ಕಷ್ಟವಾಗ್ತಿದೆ ಅನ್ನೋದು ದೃಢವಾಗ್ತಿದೆ.

Read more Photos on
click me!

Recommended Stories