ಬ್ಲಾಕ್ ಆಗಿದ್ದ ರೈತರ ಫೇಸ್‌ಬುಕ್, ಇನ್‌ಸ್ಟಾ 3 ಗಂಟೆ ಬಳಿಕ ತೆರವು; ಯಾರ ಕೈವಾಡ?

First Published | Dec 21, 2020, 7:01 PM IST

ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದೆ ಅನ್ನೋ ಮಾತು ಪದೇ ಪದೇ ಕೇಳುತ್ತಿದೆ. ಇದೀಗ ರೈತ ಸಂಘಟನೆಗಳ ಫೇಸ್‌ಬುಕ್ ಪೇಜ್ ಹಾಗೂ ಇನ್‌ಸ್ಟಾಗ್ರಾಂ ಪೇಜ್ ಬ್ಲಾಕ್ ಮಾಡಿ, 3 ಗಂಟೆ ಬಳಿಕ ಬ್ಲಾಕ್ ತೆರವು ಮಾಡಲಾಗಿದೆ. ಈ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಈ ರೀತಿಯ ಕುತಂತ್ರಕ್ಕೆ ರೈತರು ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.

ಕೇಂದ್ರ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ಚುರುಕುಗೊಂಡಿದೆ. ರೈತರು ಸಾಮಾಜಿಕ ಮಾಧ್ಯದ ಮೂಲಕವೂ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ರೈತರ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಪ್ರತಿಭಟನೆಯ ನೇರ ಪ್ರಸಾರ, ಪ್ರತಿಭಟನೆ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Tap to resize

ಕಿಸಾನ್ ಏಕ್ತಾ ಮೋರ್ಚಾ ಫೇಸ್‌ಬುಕ್ ಪೇಜ್ ಹಾಗೂ ಇನ್‌ಸ್ಟಾಗ್ರಾಂ ಪೇಜ್ ಬ್ಲಾಕ್ ಮಾಡಲಾಗಿತ್ತು. ಫೇಸ್‌ಬುಕ್ ಕಮ್ಯೂನಿಟಿ ಮಾರ್ಗಸೂಚಿ ಉಲ್ಲಂಘನೆ ಕಾರಣಕ್ಕೆ ಬ್ಲಾಕ್ ಮಾಡಲಾಗಿದೆ ಅನ್ನೋ ಸಂದೇಶವನ್ನು ಫೇಸ್‌ಬುಕ್ ನೀಡಿದೆ.
ಫೇಸ್‌ಬುಕ್ ಈ ನೀತಿಯನ್ನು ರೈತರು ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ಇದು ಕೇಂದ್ರ ಸರ್ಕಾರ ಸೂಚನೆ ನೀಡಿ ಮಾಡಿಸಲಾಗಿದೆ. ಕೇಂದ್ರದ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಎಂದು ರೈತರು ಆರೋಪಿಸಿದ್ದಾರೆ.
ಇನ್ನು ಕೆಲ ರೈತ ಸಂಘಟನೆಗಳು ಅಂಬಾನಿ ಫೇಸ್‌ಬುಕ್ ಬ್ಲಾಕ್ ಹಿಂದಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ, 3 ಗಂಟೆ ಬಳಿಕ ರೈತ ಸಂಘಟನಗಳು ಫೇಸ್‌ಬುಕ್ ಹಾಗೂ ಇನ್‌ಸ್ಟಾ ಪೇಜ್ ಬ್ಲಾಕ್ ತೆರವುಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಈ ರೀತಿ ಧೋರಣೆಗೆ ನಾವು ಬಗ್ಗುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ಖಚಿತಪಡಿಸಿದೆ.
ನವೆಂಬರ್ 26 ರಿಂದ ದೆಹಲಿಯ ಗಡಿಯಲ್ಲಿ ರೈತರು ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದೆ.
ಕೇಂದ್ರ ಬೇಡಿಕೆ ಈಡೇರಿಸಲು ಮನಸ್ಸು ಮಾಡುತ್ತಿಲ್ಲ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಉಪಯುಕ್ತ ತಿದ್ದುಪಡಿ ಮಾಡಲು ಕೇಂದ್ರ ಸಿದ್ದವಿದೆ ಎಂದಿದೆ

Latest Videos

click me!