ಬಂಗಾಳದಲ್ಲಿ 200 ಸ್ಥಾನ ಗೆದ್ದರೆ ಟ್ವಿಟರ್ ತ್ಯಜಿಸುತ್ತೇನೆ; ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಸವಾಲು!

ಬಿಜೆಪಿ ಮಾತ್ರವಲ್ಲ, ಇಡೀ ದೇಶವೇ ಇದೀಗ ಪಶ್ಚಿಮ ಬಂಗಾಳ ಚುನಾವಣೆ ಹಾಗೂ ಫಲಿತಾಂಶ ಎದುರುನೋಡುವ ಹಾಗಾಗಿದೆ. ಅಮಿತ್ ಶಾ ಸೇರಿದಂತೆ ಬಿಜೆಪಿ ಘಟಾನುಘಟಿಗಳು ಬಂಗಾಳದಲ್ಲಿ ರೋಡ್ ಶೋ, ರ್ಯಾಲಿ ನಡೆಸುತ್ತಲೇ ಇದ್ದಾರೆ. ಇನ್ನು 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ ಗೆಲ್ಲಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದೀಗ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಚುನಾವಣಾ ಸ್ಟ್ರಾಟರ್ಜಿ ಜವಾಬ್ದಾರಿ ವಹಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಹೊಸ ಸವಾಲು ಹಾಕಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇದೀಗ ರಾಜಕೀಯ ಚಟುವಟಿಕೆ ಗರಿಗೆದರಿದೆ. ಒಂದೆಡೆ ಮಮತಾ ಬ್ಯಾನರ್ಜಿ ಮತ್ತೊಂದೆಡೆ ಅಮಿತ್ ಶಾ ಮುಂಬರುವ ಚುನಾವಣೆಗೆ ಸರ್ಕಸ್ ಆರಂಭಿಸಿದ್ದಾರೆ.
I will quit twitter if BJP performs well in west bengal election Prashant Kishor challenge Amit shah ckm
2021ರ ವಿಧಾನಸಭಾ ಚುನಾವಣೆಗೆ 7 ಮುಖಂಡರ ತಂಡ ರಚಿಸಿರು ಅಮಿತ್ ಶಾ, ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಅಮಿತ್ ಶಾ ಬೇಟಿ ಪಶ್ಚಿಮ ಬಂಗಾಳದಲ್ಲಿ ಹೊಸ ಅಲೆ ಎಬ್ಬಿಸಿದೆ.

ಮುಂಬರುವ ಬಂಗಾಳ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಮಾತಿಗೆ ಚುನವಣಾ ಚಾಣಾಕ್ಯ ಎಂದೇ ಗುರಿತಿಸಿಕೊಂಡಿರುವ ಪ್ರಶಾಂತ್ ಕಿಶೋರ್ ತಿರುಗೇಟು ನೀಡಿದ್ದಾರೆ
ಮಮತಾ ಬ್ಯಾನರ್ಜಿಯ ತೃಣಮೂಲಕ ಕಾಂಗ್ರೆಸ್(TMC)ಪರ ಮುಂಬರುವ ಚುನಾವಣೆ ಗೆಲುವಿಗೆ ಶ್ರಮಿಸುತ್ತಿರುವ ಪ್ರಶಾಂತ್ ಕಿಶೋರ್, ಅಮಿತ್ ಶಾಗೆ ಸವಾಲು ಹಾಕಿದ್ದಾರೆ. ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟುವುದೇ ಕಷ್ಟ ಎಂದಿದ್ದಾರೆ.
ಬಿಜೆಪಿ ಹೇಳಿದಂತೆ ಉತ್ತಮ ಫಲಿತಾಂಶ ಬಂದರೆ ನಾನು ಟ್ವಿಟರ್ ತ್ಯಜಿಸುತ್ತೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಅಮಿತ್ ಶಾ ಹಾಗೂ ಬಿಜೆಪಿ ಮಾಧ್ಯಮದ ಸಹಾಯ ಹಾಗೂ ರ್ಯಾಲಿಗ ಸೇರಿದ ಜನಸ್ತೋಮ ನೋಡಿ ಈ ರೀತಿ ಭ್ರಮೆಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಸೇವ್ ಮಾಡಿ ಇಟ್ಟುಕೊಳ್ಳಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಮಿತ್ ಶಾ ಬಂಗಾಳ ಬೇಟಿಯಿಂದ ಮಮತಾ ಬ್ಯಾನರ್ಜಿ ಬೆಚ್ಚಿ ಬಿದ್ದಿದ್ದಾರೆ. ಟಿಎಂಸಿ ಶಾಸಕ ಸುವೆಂದು ಅಧಿಕಾರಿ ಸೇರಿದಂತೆ ಪ್ರಮುಖ ನಾಯಕರು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಟಿಎಂಸಿ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಚುನಾವಣೆಗೆ ವೇಳೆ ಮಮತಾ ಏಕಾಂಗಿಯಾಗಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದರು.
ನಾಯಕರ ರಾಜೀನಾಮೆ, ಬಿಜೆಪಿ ಸೇರ್ಪಡೆ ಅಮಿತ್ ಶಾ ರೋಡ್ ಶೋಗಳಿಂದ ಕೋಪಗೊಂಡಿರುವ ಮಮತಾ ಬ್ಯಾನರ್ಜಿ, ಪ್ರಶಾಂತ್ ಕಿಶೋರ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.
ಮಮತಾ ಒಲೈಸಲು ಪ್ರಶಾಂತ್ ಕಿಶೋರ್ ಈ ರೀತಿ ಸವಾಲು ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇತ್ತ ಪ್ರಶಾಂತ್ ಕಿಶೋರ್ ಹೇಳಿದಂತೆ ಬಿಜೆಪಿಗೆ ಬಂಗಾಳದಲ್ಲಿ ಅಧಿಕಾರ ಸಾಧ್ಯವಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Videos

click me!