ಆರೋಹಿ ಪಂಡಿತ್: ಅಟ್ಲಾಂಟಿಕ್ ಸಾಗರ ಸೋಲಿಸಿದ ಮಹಿಳಾ ಪೈಲೆಟ್!

First Published May 15, 2019, 2:55 PM IST

ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಹಿಂದುಳಿದಿಲ್ಲ. ಮುಂಬೈನ ಸಿಟಿ ಪೈಲಟ್ ಆರೋಹಿ ಪಂಡಿತ್ ಈ ಮಾತನ್ನು ತಮ್ಮ ಸಾಧನೆ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 

ಮುಂಬೈನ ಆರೋಹಿ ಪಂಡಿತ್ ಅಟ್ಲಾಂಟಿಕ ಮಹಾಸಾಗರ ಮೇಲೆ ಏಕಾಂಗಿಯಾಗಿ ಯಶಸ್ವೀ ವಿಮಾನ ಹಾರಾಟ ನಡೆಸುವ ಮೂಲಕ ದಾಖಲೆ ಬರೆದಿದ್ದಾರೆ.
undefined
ಮುಂಬೈನ 23 ವರ್ಷದ ಆರೋಹಿ ಪಂಡಿತ್, ಲಘು ಕ್ರೀಡಾ ವಿಮಾನದ ಮೂಲಕ ಅಟ್ಲಾಂಟಿಕ ಮಹಾಸಾಗವನ್ನು ದಾಟಿದ ವಿಶ್ವದ ಮೊದಲ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
undefined
ಈ ದಾಖಲೆ ನಿರ್ಮಿಸಲು ಭಾರತೀಯ ಪೈಲಟ್ ಆರೋಹಿ 7 ತಿಂಗಳ ಕಠಿಣ ತರಬೇತಿ ಪಡೆದಿದ್ದಾರೆ. ತರಬೇತಿ ವೇಳೆ ಕೆಟ್ಟ ಹವಾಮಾನದಲ್ಲೂ ವಿಮಾನ ಹಾರಿಸಿದ್ದರು.
undefined
ಕೆನಡಾದ ನುನಾವುಡ್ ನಲ್ಲಿರುವ ಇಕಾಲಿಟ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನಿಳಿಸಿದ ಆರೋಹಿ ಎಲ್ಲಕ್ಕಿಂತ ಮೊದಲ ಭಾರತದ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.
undefined
ಆರೋಹಿ ಪಂಡಿತ್ ಮುಂಬೈನ ಬಾಂಬೆ ಪ್ಲೈಯಿಂಗ್ ಕ್ಲಬ್ ನಿಂದ ವಿಮಾನ ಚಲಾಯಿಸುವ ತರಬೇತಿ ಪಡೆದಿದ್ದರು.
undefined
ತರಬೇತಿ ಮುಗಿಸಿದ್ದ ಆರೋಹಿ ಸ್ಕಾಟ್ಲ್ಯಾಂಡ್ ನ ವಿಕ್ ನಿಂದ ಕೆನಡಾದ ಇಕಾಲಿಟ್ ವರೆಗೆ ಹಾರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಐಲ್ಯಾಂಡ್ ಹಾಗೂ ಗ್ರೀನ್ ಲ್ಯಾಂಡ್ ಪ್ರವಾಸ ಮಾಡಿದ್ದರು ಎಂಬುವುದು ಉಲ್ಲೇಖನೀಯ.
undefined
ಈ ಪ್ರವಾಸದ ವೇಳೆ ಆರೋಹಿ ಅಟ್ಲಾಂಟಿಕ ಮಹಾಸಾಗರವನ್ನು ಸಂಪೂರ್ಣವಗಿ ಕವರ್ ಮಾಡಿದ್ದಾರೆ. ಇನ್ನು ಈ ವಿಮಾನ ಹಾರಾಟದ ವೇಳೆ ಅವರೊಂದಿಗೆ ಯಾರೂ ಇರಲಿಲ್ಲ ಎಂಬುವುದು ಹೆಮ್ಮೆಯ ವಿಚಾರ.
undefined
ಇವೆಲ್ಲದರೊಂದಿಗೆ ಆರೋಹಿ ಗ್ರೀನ್ ಲ್ಯಾಂಡ್ ಐಸ್ಕ್ಯಾಪ್ ಮೇಲೆ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ಸೋಲೋ ಫ್ಲೈಟ್ ಪೈಲಟ್ ಎನಿಸಿಕೊಂಡಿದ್ದಾರೆ.
undefined
ಆರೋಹಿ 'ಮಾಹಿ' ಎಂಬ ಲಘು ವಿಮಾನವನ್ನು ಚಲಾಯಿಸಿದ್ದರು. ಇದು ಕೇವಲ ಒಂದು ಬುಲೆಟ್ ಬೈಕ್ ನಷ್ಟು ತೂಕ ಹೊಂದಿರುತ್ತದೆ.
undefined
click me!