ಗಾಂಧೀ ಕುಟುಂಬ ಯುದ್ಧನೌಕೆ ಬಳಸಿತ್ತು: ಮೋದಿ ಆರೋಪಕ್ಕೆ ಸಾಕ್ಷಿಯಂತಿವೆ ಈ ಫೋಟೋಗಳು

Published : May 09, 2019, 05:31 PM IST

ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು, 5 ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜಕೀಯ ನಾಯಕರು ಚುನಾವಣಾ ಪ್ರಚಾರದಲ್ಲಿ ಭರ್ಜರಿಯಾಗಿ ತೊಡಗಿಸಿಕೊಂಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ಮೋದಿ, ರಾಹುಲ್ ಗಾಂಧಿ ಪರಸ್ಪರ ವಾಗ್ದಾಳಿಯೂ ಮುಂದುವರೆದಿದೆ. ಪ್ರಧಾನಿ ಮೋದಿ ರಾಜೀವ್ ಗಾಂಧಿ ಓರ್ವ ನಂ. 1 ಭ್ರಷ್ಟಾಚಾರಿ ಎಂದು ಹಣಿದಿರುವ ಬೆನ್ನಲ್ಲೇ ಯುದ್ಧನೌಕೆಗಳನ್ನು ವೈಯುಕ್ತಿಕ ಟ್ಯಾಕ್ಸಿಯಂತೆ ಬಳಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಮತ್ತೊಂದು ಅಚ್ಚರಿ ಮೂಡಿಸುವ ವಿಚಾರ ಬಹಿರಂಗವಾಗಿದೆ.

PREV
16
ಗಾಂಧೀ ಕುಟುಂಬ ಯುದ್ಧನೌಕೆ ಬಳಸಿತ್ತು: ಮೋದಿ ಆರೋಪಕ್ಕೆ ಸಾಕ್ಷಿಯಂತಿವೆ ಈ ಫೋಟೋಗಳು
ರಾಜೀವ್ ಗಾಂಧಿ ಕುಟುಂಬ 1980ರಲ್ಲೇ ಯುದ್ಧನೌಕೆಗಳನ್ನು ವೈಯಕ್ತಿಕ ಟ್ಯಾಕ್ಸಿಯಂತೆ ಬಳಸಿತ್ತು ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಗಂಭೀರ ಆರೋಪ.

26
ಭಾರತೀಯ ಸೇನೆ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ ಎಂದೆಲ್ಲಾ ಕೂಗಾಡುತ್ತಾರೆ. ಆದರೆ ಯಾರು ಹೀಗೆ ವರ್ತಿಸುತ್ತಾರೋ ಅವರ ತಂದೆ ಮತ್ತು ಅವರ ಕುಟುಂಬವೇ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಪರ್ಸನಲ್‌ ಟ್ಯಾಕ್ಸಿಯಾಗಿ ಬಳಸಿಕೊಂಡಿತ್ತು: ಮೋದಿ

36
ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಕುಟುಂಬ 10 ದಿನಗಳ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು. ದೇಶದ ಕರಾವಳಿ ಗಡಿ ಕಾಯುವ ಯುದ್ಧ ನೌಕೆಯನ್ನು ಗಾಂಧೀ ಕುಟುಂಬದ ಸಂಚಾರಕ್ಕೆ ಮತ್ತು ಭದ್ರತೆಗೆಂದು ಬಳಸಿಕೊಳ್ಳಲಾಗಿತ್ತು: ಮೋದಿ ಆರೋಪ

46
ರಾಜೀವ್ ಗಾಂಧಿಯಲ್ಲ, ನೆಹರೂ ಕಾಲದಲ್ಲೇ ಯುದ್ಧನೌಕೆಗಳ ಬಳಕೆ. ಆರೋಪದ ಬೆನ್ನಲ್ಲೇ ಅಚ್ಚರಿಯುತ ಮತ್ತೊಂದು ವಿಚಾರ ಬಹಿರಂಗ

56
ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ತಮ್ಮ ಮಗಳು ಇಂಧಿರಾ ಗಾಂಧಿ, ಮೊಮ್ಮಕ್ಕಳಾದ ರಾಜೀವ್ ಹಾಗೂ ಸಂಜಯ್ ಗಾಂಧಿ ಜೊತೆ ಐಎನ್‌ಎಸ್‌ ಯುದ್ಧನೌಕೆಯಲ್ಲಿ ರಜಾ ದಿನಗಳನ್ನು ಕಳೆಯುತ್ತಿರುವ ದೃಶ್ಯ

66
1950ರ ಜೂನ್ ತಿಂಗಳ ರಜೆ ಕಳೆಯಲು ಐಎನ್‌ಎಸ್‌ ಡೆಲ್ಲಿ ಯುದ್ಧನೌಕೆಯನ್ನು ಬಳಸಿಕೊಂಡಿತ್ತು ನೆಹರೂ ಕುಟುಂಬ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories