ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!

First Published | Apr 24, 2019, 4:31 PM IST

ಭ್ರಷ್ಟರಿಗೆ ಸಿಂಹಸ್ವಪ್ನರಾಗಿರುವ ರೂಪಾ. ಡಿ ಮೌಡ್ಗಿಲ್ ತಮ್ಮ ದಕ್ಷತೆಗೆ ಫೇಮಸ್. ಪೊಲೀಸ್ ಸೇವೆ ಮಾತ್ರವಲ್ಲದೇ, ಫ್ಯಾಷನ್ ಡಿಸೈನಿಂಗ್, ಮಾಡೆಲಿಂಗ್, ನೃತ್ಯ, ಗಾಯನ ಹೀಗೆ ನಾನಾ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಭ್ರಷ್ಟರ ವಿರುದ್ಧ ಯವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಈ ಲೇಡಿ ಸಿಂಗಂ, ಕರ್ನಾಟಕದ ಮೊದಲ IPS ಆಫೀಸರ್ ಆಗಿದ್ದಾರೆ. ಬಾಲ್ಯದಲ್ಲೇ IPS ಆಫೀಸರ್ ಆಗುವ ಕನಸು ಕಂಡಿದ್ದ ಇವರು ಎರಡು ಬಾರಿ ಮಿಸ್ ದಾವಣಗೆರೆ ಪಟ್ಟ ಗಳಿಸಿದರೂ ಫ್ಯಾಷನ್ ಲೋಕಕ್ಕೆ ಮರುಳಾಗಲಿಲ್ಲ. ಕಂಡ ಕನಸನ್ನು ನನಸಾಗಿಸಿ ಇತರರಿಗೆ ಆದರ್ಶರಾಗಿರುವ ಈ ಹೆಮ್ಮೆಯ ಪೊಲೀಸ್ ಅಧಿಕಾರಿಯ ಬಗ್ಗೆ ನಿಮಗೆ ತಿಳಿದಿರದ ಕೆಲ ಇಂಟರೆಸ್ಟಿಂಗ್ ಸಂಗತಿಗಳು

ಭ್ರಷ್ಟರಿಗೆ ಸಿಂಹಸ್ವಪ್ನರಾಗಿರುವ, ದಕ್ಷ ಅಧಿಕಾರಿ ಡಿ. ರೂಪಾ ಮೌಡ್ಗಿಲ್ ಕರ್ನಾಟಕದ ಮೊದಲ ಮಹಿಳಾ IPS ಆಫೀಸರ್.
undefined
ದಾವಣಗೆರೆಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಡಿ. ರೂಪಾ ಕರ್ನಾಟಕದ ಲೇಡಿ ಸಿಂಗಂ ಎಂದೇ ಖ್ಯಾತಿ ಗಳಿಸಿದ್ದಾರೆ.
undefined

Latest Videos


8ನೇ ತರಗತಿಯಲ್ಲಿದ್ದಾಗ NCC ಗೆ ಸೇರಿದ್ದ ರೂಪಾ ಡಿ. A, B, C ಸರ್ಟಿಫಿಕೇಟ್ ಪಡೆದಿದ್ದರು.
undefined
9ನೇ ತರಗತಿಯಲ್ಲಿದ್ದಾಗಲೇ ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಹೆಮ್ಮೆಯ ಕೆಡೆಟ್ ಡಿ. ರೂಪಾ.
undefined
ಬಾಲ್ಯದಲ್ಲೇ IPS ಅಧಿಕಾರಿಯಾಗುವ ಕನಸು ಕಂಡಿದ್ದ ಡಿ. ರೂಪಾ ಇದಕ್ಕೆ ತಕ್ಕಂತೆ ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರು.
undefined
ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೂಪಾ 2000ನೇ ಇಸವಿಯಲ್ಲಿ UPSCಯಲ್ಲಿ 43ನೇ ರ್ಯಾಂಕ್ ಪಡೆದಿದ್ದರು.
undefined
43ನೇ ಸ್ಥಾನ ಗಳಿದಿದ್ದರೂ IAS ಆಯ್ಕೆ ಮಾಡಿಕೊಳ್ಳದ ರೂಪಾ, ತಮ್ಮ ಕನಸನ್ನು ನನಸಾಗಿಸಲು IPS ಆಯ್ಕೆ ಮಾಡಿಕೊಂಡಿದ್ದರು. ಆಗ ಅವರ ವಯಸ್ಸು ಕೇವಲ 24 ವರ್ಷ.
undefined
2001ನೇ ಬ್ಯಾಚ್ ನ IPS ಅಧಿಕಾರಿಯಾಗಿರುವ ಡಿ. ರೂಪಾ 5ನೇ ಸ್ಥಾನ ಗಳಿಸಿದ್ದರು
undefined
ಮೊದಲ ಪೋಸ್ಟಿಂಗ್ ಧಾರವಾಡ, 2004ರಲ್ಲಿ ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿ ಉಮಾ ಭಾರತಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿದಾಗ ಡಿ. ರೂಪಾ ಅವರನ್ನು ಬಂಧಿಸಿದ್ದರು. ಈ ಸವಾಲಿನ ಮೂಲಕ ತಮ್ಮ ಸೇವೆ ಆರಂಭಿಸಿದ್ದರು.
undefined
2017ರಲ್ಲಿ ಕಾರಾಗೃಹ DIG ಆಗಿದ್ದ ಡಿ. ರೂಪಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದರು.
undefined
ಅದರಲ್ಲೂ ಪ್ರಮುಖವಾಗಿ ಪರಪ್ಪನ ಅಗ್ರಹಾರದಲ್ಲಿ ಸುಪ್ರೀಂ ಆದೇಶ ಮೀರಿ ಜಯಲಲಿತಾ ಆಪ್ತೆ ಶಶಿಕಲಾರಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತಿನ ವಿಡಿಯೋ ಬಿಡುಗಡೆ ಮಾಡಿದ್ದರು.
undefined
ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ಅಂಜಿಕೆ ಹಾಗೂ ಮುಲಾಜಿಲ್ಲದೆ ದಿಟ್ಟ ಕ್ರಮ ಕೈಗೊಳ್ಳುವ ಈ ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ದಕ್ಷತೆಗೆ ರಾಷ್ಟ್ರಾದ್ಯಂತ ಹೆಸರುವಾಸಿಯಾಗಿದ್ದಾರೆ.
undefined
2003ನೇ ಇಸವಿಯಲ್ಲಿ IAS ಅಧಿಕಾರಿ ಮುನೀಶ್ ಮೌಡ್ಗಿಲ್ ಜೊತೆ ವಿವಾಹ. ಮುನೀಶ್ ಹಾಗೂ ರೂಪಾ ಮೌಡ್ಗಿಲ್ ದಂಪತಿಗೆ ಅನಘಾ ಹಾಗೂ ರೋಶಿಲ್ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
undefined
ಶಾರ್ಪ್ ಶೂಟರ್ ಆಗಿರುವ ರೂಪಾ ಡಿ ನ್ಯಾಶನಲ್ ಪೊಲೀಸ್ ಅಕಾಡೆಮಿಯಲ್ಲಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
undefined
ಶಾಸ್ತ್ರೀಯ ಹಿಂದೂಸ್ತಾನಿ ಸಂಗೀತ ಕಲಿತಿರುವ ರೂಪಾ ಓರ್ವ ಅತ್ಯುತ್ತಮ ಗಾಯಕಿ, ಸಿನಿಮಾಗಳಿಗೆ ಹಿನ್ನೆಲೆ ಗಾಯನವನ್ನೂ ಮಾಡಿದ್ದಾರೆ.
undefined
10ನೇ 12ನೇ ತರಗತಿಯಲ್ಲಿ ರಾಜ್ಯದಲ್ಲಿ ರ್ಯಾಂಕ್ ಪಡೆದಿದ್ದ ರೂಪಾ ಡಿ ಓರ್ವ ಅತ್ಯುತ್ತಮ ಬರಹಗಾರ್ತಿ ಹಾಗೂ ನೃತ್ಯಪಟು.
undefined
ಕಾಲೇಜು ದಿನಗಳಲ್ಲಿ ಎರಡು ಬಾರಿ ಮಿಸ್ ದಾವಣಗೆರೆಯಾಗಿದ್ದರೂ IPS ಅಧಿಕಾರಿಯಾಗುವ ಕನಸು ಹೊತ್ತಿದ್ದ ರೂಪಾ ಫ್ಯಾಷನ್ ಲೋಕದಲ್ಲಿ ಕಳೆದು ಹೋಗಲಿಲ್ಲ. ಆದರೆ ಇದನ್ನು ಹವ್ಯಾಸವಾಗಿ ಮುಂದುವರೆಸಿದರು.
undefined
ಪೊಲೀಸ್ ಇಲಾಖೆ ಎಂದು ಹಿಂಜರಿಯುವ ಎಲ್ಲರಿಗೂ, ತಾನು ಕಂಡ ಕನಸು ನನಸಾಗಿಸಿ ದಕ್ಷಾಡಳಿತ ನಡೆಸುತ್ತಿರುವ ಕರ್ನಾಟಕದ ಲೇಡಿ ಪೊಲೀಸ್ ಆಫೀಸರ್ ಅತ್ಯುತ್ತಮ ನಿದರ್ಶನ
undefined
click me!