ವಿಶೇಷ ಬಾವುಟ ಮಾಡಲು ಮನೆಯನ್ನೇ ಮಾರಿದ ದೇಶಭಕ್ತ!

First Published May 17, 2019, 12:17 PM IST

 ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ್ದಾರೆ. ಹೌದು ಇಲ್ಲಿದೆ ಆಂಧ್ರಪ್ರದೇಶದ ಅಪ್ಪಟ ದೇಶಪ್ರೇಮಿ ಸತ್ಯನಾರಾಯಣ್ ಕತೆ

ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ ಅಪರೂಪದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ
undefined
ಸತ್ಯನಾರಾಯಣ ಇಂಥಹ ಅಪರೂಪದ ಧ್ವಜ ನೇಯಲು ಅಗತ್ಯವಾಗಿದ್ದ 6.5 ಲಕ್ಷ ರು.ಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಿ ಬಾಡಿಗೆ ಮನೆಗೆ ತೆರಳಿದ್ದಾರೆ.
undefined
ಗೋದಾವರಿ ಜಿಲ್ಲೆಯ ವೇಮವರಂ ಗ್ರಾಮದ ಕೈಮಗ್ಗ ನೇಕಾರರಾಗಿರುವ ಸತ್ಯನಾರಾಯಣ ಅವರಿಗೆ 8 ಅಡಿ ಎತ್ತರ ಹಾಗೂ 12 ಅಡಿ ಅಗಲದ ಈ ಬಾವುಟವನ್ನು ದೆಹಲಿಯ ಕೆಂಪುಕೋಟೆಯಲ್ಲಿ ಹಾರಿಸಬೇಕು ಎಂಬ ಮತ್ತೊಂದು ಮಹದಾಸೆ ಹುಟ್ಟಿಕೊಂಡಿದೆ
undefined
ಈ ಆಸೆಯಿಂದ ಇತ್ತೀಚೆಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ಧ್ವಜವನ್ನು ಹಸ್ತಾಂತರಿಸಿದ್ದೇನೆ: ಸತ್ಯನಾರಾಯಣ್
undefined
ಈ ವಿಶಿಷ್ಟಬಾವುಟವನ್ನು ಮೋದಿ ಅವರು ವೀಕ್ಷಣೆ ಮಾಡಿದ್ದಾರೆಯೇ ಎಂಬುದು ಗೊತ್ತಿಲ್ಲ: ಸತ್ಯನಾರಾಯಣ್
undefined
ಧ್ವಜದ ಬಗ್ಗೆ ಮೋದಿ ಅವರಿಗೆ ವಿವರಣೆ ನೀಡಲು ಸಮಯಾವಕಾಶ ಸಿಗಲಿಲ್ಲ ಎಂದು ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.
undefined
click me!