ಪುಣ್ಯ ಸ್ಮರಣೆ: ಬುದ್ಧಿವಂತ ವಕೀಲ ಅರುಣ್ ಜೇಟ್ಲಿ ಬಗ್ಗೆ ನಿಮಗೆ ತಿಳಿಯದ ಇಂಟರೆಸ್ಟಿಂಗ್ ವಿಚಾರಗಳು

First Published Aug 24, 2019, 2:03 PM IST

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತೀಯ ಇತಿಹಾಸದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ರಾಜಕಾರಣಿಗಳಲ್ಲೊಬ್ಬರು. ಪಿಎಂ ಮೋದಿಗೆ ಆತ್ಮೀಯರಾಗಿದ್ದ ಜೇಟ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರು. ಓರ್ವ ಅತ್ಯುತ್ತಮ ವಾಗ್ಮಿಯಾಗಿದ್ದ ಜೇಟ್ಲಿಯ ಪುಣ್ಯ ಸ್ಮರಣೆ. ಇಂತಹ ಸಂದರ್ಭದಲ್ಲಿ ಪಿಎಂ ಮೋದಿ ಕೂಡಾ ಟ್ವೀಟ್ ಮಾಡಿ ಜೇಟ್ಲಿಯನ್ನು ನೆನಪಿಸಿಕೊಂಡಿದ್ದಾರೆ. ಜೇಟ್ಲಿ ಕುರಿತಾದ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಜೇಟ್ಲಿ ಓರ್ವ ಅತ್ಯಂತ ಮೇಧಾವಿ ವಿದ್ಯಾರ್ಥಿ. ಶ್ರೀ ರಾಮ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದ ಜೇಟ್ಲಿ, ಅತ್ತ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿನ್ನೂ ಗಳಿಸಿದ್ದರು.
undefined
ಕಾಲೇಜು ದಿನಗಳಲ್ಲಿ ರಾಜಕೀಯದೆಡೆ ಆಕರ್ಷಿತರಾದ ಜೇಟ್ಲಿ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾಗ ಜೆಐಲಿಗೆ ತೆರಳಿದ್ದ ಜೇಟ್ಲಿ, ಅಲ್ಲಿ ತಮ್ಮ ಮಾತುಗಾರಿಕೆಯಿಂದ ಹಲವು ಹಿರಿಯ ರಾಜಕಾರಣಿಗಳ ಗಮನ ಸೆಳೆದಿದ್ದರು.
undefined
ಜೈಲಿನಿಂದ ಹೊರ ಬಂದ ಬಳಿಕ ಜನಸಂಘದ ಸದಸ್ಯರಾದ ಜೇಟ್ಲಿ ABVP ದೆಹಲಿ ಘಟಕದ ಅಧ್ಯಕ್ಷರಾಗುತ್ತಾರೆ. ಇದಾದ ಬಳಿಕ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.
undefined
1980ರಲ್ಲಿ ಬಿಜೆಪಿ ರಚನೆಯಾದಾಗ, ಜೇಟ್ಲಿ ಯುವ ಘಟಕದ ಅಧ್ಯಕ್ಷರಾಗುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಉತ್ತಮ ಅವಕಾಶ ಸಿಕ್ಕಿತು. 1980 ರಿಂದ 90ರ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಹರಸಾಹಸ ಪಡುತ್ತಿತ್ತು. ಈ ವೇಳೆ ಅಟಲ್ ಹಾಗೂ ಅಡ್ವಾಣಿ ಬಿಜೆಪಿ ಪಕ್ಷಕ್ಕಾಗಿ ಕಠಿಣ ಶ್ರಮ ಪಡುತ್ತಿದ್ದರೆ, ಅತ್ತ ಜೇಟ್ಲಿ ಯುವ ಬ್ರಿಗೇಡ್ ಸದಸ್ಯರನ್ನು ಪ್ರಬುದ್ಧ ನಾಯಕರನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
undefined
ಈ ಎಲ್ಲಾ ಕರ್ತವ್ಯಗಳೊಂದಿಗೆ ಜೇಟ್ಲಿ ಸುಪ್ರೀಂ ಕೋರ್ಟ್ ವಕೀಲರಾಗಿಯೂ ಕಾರ್ಯ ನಿರ್ವಹಿಸಿದರು. ಅಲ್ಲದೇ ದೇಶದ ಪ್ರಸಿದ್ಧ ವಕೀಲರಾಗಿ ಗುರುತಿಸಿಕೊಂಡರು.
undefined
1999ರಲ್ಲಿ ಅಟಲ್ ನೇತೃತ್ವದ NDA ಅಧಿಕಾರಕ್ಕೇರಿದಾಗ ಜೇಟ್ಲಿಗೆ ಕೇಂದ್ರ ಕಾನೂನು ಹಾಗೂ ನ್ಯಾಯಾಂಗ, ಮಾಹಿತಿ ಹಾಗೂ ತಂತ್ರಜ್ಞಾನ ರಾಜ್ಯ ಸಚಿವ ಖತೆ ಜವಾಬ್ದಾರಿ ವಹಿಸಲಾಯಿತು. ತಮ್ಮ ಕಾರ್ಯ ವೈಖರಿಯಿಂದ ಅಟಲ್ ಭರವಸೆ ಗೆದ್ದ ಜೇಟ್ಲಿ, ಒಂದೇ ವರ್ಷದಲ್ಲಿ ಸಂಪುಟ ದರ್ಜೆ ನೀಡಲಾಯ್ತು.
undefined
ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಜೇಟ್ಲಿ ಕಡಿಮೆ ಅವಧಿಯಲ್ಲಿ ತಾವೇನು ಎಂದು ಸಾಬೀತುಪಡಿಸಿದ್ದರು. ಹೀಗಾಗೇ ಪ್ರಮೋದ್ ಮಹಾಜನ್ ಸಾವನ್ನಪ್ಪಿದಾಗ, ಅಟಲ್ ನಿವೃತ್ತಿ ಬಳಿಕ ಜೇಟ್ಲಿ ಬಿಜೆಪಿ ಗೆಲುವಿನ ರಣತಂತ್ರ ರೂಪಿಸುವ ರೂವಾರಿಯಾದರು.
undefined
ರಾಜ್ಯಸಭೆಯಲ್ಲಿ ಬಿಜೆಪಿಯ ಗಟ್ಟಿ ಧ್ವನಿಯಾದ ಜೇಟ್ಲಿ 2009ರಲ್ಲಿ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾದರು.
undefined
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಿತ್ತು. ಈ ಗೆಲುವಿನ ತಂತ್ರ ರೂಪಿಸಿದ್ದು ಜೇಟ್ಲಿಯೇ ಎಂಬುವುದು ಉಲ್ಲೇಖನೀಯ.
undefined
2014ರಲ್ಲಿ ಮೊಟ್ಟ ಮೊದಲ ಬಾರಿ ನೇರವಾಗಿ ಚುನಾವಣಾ ಕಣಕ್ಕಿಳಿದಿದ್ದ ಜೇಟ್ಲಿ ಅಮೃತಸರದಿಂದ ಸ್ಪರ್ಧಿಸಿದ್ದರು. ದುರಾದೃಷ್ಟವಶಾತ್ ಕಾಂಗ್ರೆಸ್ ಪಕ್ಷದ ಅಮರಿಂದರ್ ಸಿಂಗ್ ವಿರುದ್ಧ ಸೋಲುಂಡಿದ್ದರು.
undefined
click me!