ಸರಳತೆಯ ಸಾಕಾರಮೂರ್ತಿ ಸುಧಾಮೂರ್ತಿಗೆ ಹುಟ್ಟುಹಬ್ಬದ ಸಂಭ್ರಮ

First Published | Aug 19, 2019, 12:40 PM IST

ಸರಳತೆ, ಸಹಾಯ, ಸಮಾಜಸೇವೆಗೆ ಇನ್ನೊಂದು ಹೆಸರು ಸುಧಾಮೂರ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ಫೋಸಿಸ್ ಎಂಬ ಐಟಿ ದಿಗ್ಗಜ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ ಸುಧಾಮೂರ್ತಿಗೆ 69 ನೇ ವಸಂತದ ಸಂಭ್ರಮ. ಸುವರ್ಣ ನ್ಯೂಸ್‌. ಕಾಂನಿಂದ ಸುಧಾಮೂರ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. 

ಕನ್ನಡದ ಹೆಮ್ಮೆಯ ಬರಹಗಾರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆಗೆ ಸುಧಾಮೂರ್ತಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ
ಧಾರವಾಡ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ 1950, ಆಗಸ್ಟ್ 19 ರಲ್ಲಿ ಕುಲಕರ್ಣಿ ಮನೆತನದಲ್ಲಿ ಜನಿಸಿದರು.
Tap to resize

ಸುಧಾ ಕುಲಕರ್ಣಿಯವರ ತಂದೆ ರಾಮಚಂದ್ರ ಕುಲಕರ್ಣಿ ಹುಬ್ಬಳ್ಳಿಯ ಕೆ.ಎಂ. ಕಾಲೇಜಿನಲ್ಲಿ ಸ್ತ್ರೀ ರೋಗ ತಜ್ಞರು, ಪ್ರಾಧ್ಯಾಪಕರಾಗಿದ್ದರು.
ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಸಹಜವಾಗಿ ಚಿಕ್ಕಂದಿನಿಂದಲೇ ಓದುವ ಗುಣ ಸುಧಾಮೂರ್ತಿಗೆ ಬಂದಿದೆ.
ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್' ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿ ಗಳಿಸಿದ್ದಾರೆ.
ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು.
ಪತಿ ನಾರಾಯಣ ಮೂರ್ತಿ ಜೊತೆ
ಸುಧಾ - ನಾರಾಯಣಮೂರ್ತಿ ಲವ್ ಕಹಾನಿ ಬೇರೆಯವರಿಗೆ ಮಾದರಿಯಾಗುವಂತಿದೆ. ಒಬ್ಬರಿಗೊಬ್ಬರು ಹೆಗಲಾಗೋದು ಅಂದ್ರೆ ಇವರನ್ನು ನೋಡಿ ಕಲಿಯಬೇಕು!
ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, 6 ಗೆಳೆಯರು ಜೊತೆಗೂಡಿ 1981 ರಲ್ಲಿ ಇನ್ಫೋಸಿಸ್ ಕಂಪನಿ ಸ್ಥಾಪಿಸಿದರು.
ಪ್ರವಾಹ ಸಂತ್ರಸ್ತರ ನೆರವಿಗೆ 10 ಕೋಟಿ ರೂ ಸಹಾಯ ಮಾಡಿದ್ದಾರೆ.
ಗ್ರಾಮಾಂತರ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ಇನ್ಫೋಸಿಸ್ ಫೌಂಡೇಷನ್‌’ ವತಿಯಿಂದ ಮಾಡುತ್ತಿದ್ದಾರೆ.
ಅವ್ಯಕ್ತೆ, ಅತಿರಿಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಪರಿಧಿ, ಯಶಸ್ವಿ, ತುಮಲ ಮತ್ತು ಋಣ ಇವರು ಬರೆದ ಪುಸ್ತಕಗಳು
ಮಗ ರೋಹನ್, ಮಗಳು ಅಕ್ಷತಾ ಮೂರ್ತಿ ಜೊತೆ ಸುಧಾಮೂರ್ತಿ ದಂಪತಿ

Latest Videos

click me!