ಈ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಅ.24ರಿಂದ WhatsApp ಕೆಲಸ ಮಾಡಲ್ಲ, ಇಲ್ಲಿದೆ ಲಿಸ್ಟ್!

First Published | Sep 24, 2023, 3:01 PM IST

ವ್ಯಾಟ್ಸ್ಆ್ಯಪ್ ಪ್ರತಿ ದಿನ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಇದರ ನಡುವೆ ಶಾಕ್ ನೀಡಿದೆ. ಅಕ್ಟೋಬರ್ 24 ರಿಂದ ಕೆಲ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಕೆಲಸ ಮಾಡಲ್ಲ. ಹಾಗಾದರೆ ಇನ್ನು ಒಂದು ತಿಂಗಳಲ್ಲಿ ವ್ಯಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಫೋನ್ ಯಾವುದು? ಈ ಲಿಸ್ಟ್‌ನಲ್ಲಿ ನಿಮ್ಮ ಫೋನ್ ಇದೆಯಾ? ಚೆಕ್ ಮಾಡಿಕೊಳ್ಳಿ

ನಿಮ್ಮಲ್ಲಿರುವ ಸ್ಮಾರ್ಟ್‌ಫೋನ್ ಯಾವುದು? ಯಾವ ವರ್ಶನ್? ಹಳೇದೋ ಅಥವಾ ಹೊಸ ವರ್ಶನ್ ಸಾಫ್ಟ್‌ವೇರ್ ಫೋನ್? ತಕ್ಷಣವೇ ನಿಮ್ಮ ಫೋನ್ ಸೆಟ್ಟಿಂಗ್‌ ಕ್ಲಿಕ್ ಮಾಡಿ ಪರಿಶೀಲನೆ ಮಾಡಿ. ಕಾರಣ ಕೆಲ ಹಳೇ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ವರ್ಕ್ ಆಗಲ್ಲ.

ಅಕ್ಟೋಬರ್ 24 ರಿಂದ ಕೆಲ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ. ಇನ್ನು 30 ದಿನದಲ್ಲಿ ಕೆಲ ವರ್ಶನ್ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಕಾರ್ಯನಿರ್ವಹಣೆ ನಿಲ್ಲಿಸಲಿದೆ.

Latest Videos


ಸದ್ಯ ವ್ಯಾಟ್ಸ್ಆ್ಯಪ್ ಆ್ಯಂಡ್ರಾಯ್ಡ್ 4.1 ವರ್ಶನ್ ಅಥವಾ ಇದಕ್ಕಿಂತ ಹೊಸ ವರ್ಶನ್ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಆದರೆ ಅಕ್ಟೋಬರ್ 24 ರಿಂದ 5.0 ಅಥವಾ ಇದಕ್ಕಿಂತ ಹೊಸ ವರ್ಶನ್ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ವ್ಯಾಟ್ಸ್ಆ್ಯಪ್ ಕೆಲಸ ಮಾಡಲಿದೆ.

ಹೀಗಾಗಿ ನಿಮ್ಮ ಫೋನ್ 5.0 ವರ್ಶನ್‌ಗಿಂತ ಹಳೇ ಫೋನ್ ಆಗಿದ್ದರೆ  ಅ.24ರಿಂದ ಕೆಲಸ ಮಾಡಲ್ಲ. ನಿಮ್ಮ ಫೋನ್‌ ಅಪ್‌ಗ್ರೇಡ್ ಮಾಡಲು ಸಾಧ್ಯವಾದರೆ ವ್ಯಾಟ್ಸ್ಆ್ಯಪ್ ಕೆಲಸ ಮಾಡಲಿದೆ. ಸದ್ಯ ಆ್ಯಂಡ್ರಾಯ್ಡ್ 13 ಚಾಲ್ತಿಯಲ್ಲಿದೆ. ಹೀಗಾಗಿ 4.0 ವರ್ಶನ್ ಫೋನ್‌‌ಗೆ 13 ವರ್ಶನ್ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ.
 

ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಹಳೇ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇಷ್ಟೇ ಅಲ್ಲ ಹಳೇ ಫೋನ್‌ಗಳಲ್ಲಿ ವ್ಯಾಟ್ಸ್ಆ್ಯಪ್ ಹ್ಯಾಕ್ ಮಾಡುವುದು ಸುಲಭವಾಗಿದೆ. ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ವ್ಯಾಟ್ಸ್ಆ್ಯಪ್ ಕೆಲ ಅಪ್‌ಗ್ರೇಡ್ ಮಾಡಿದೆ. ಹೀಗಾಗಿ ಇದು ಹಳೇ ಫೋನ್‌ಗಳಲ್ಲಿ ಕೆಲಸ ಮಾಡಲ್ಲ.

4.1 ವರ್ಶನ್ ಆ್ಯಂಡ್ರಾಯ್ಡ್ ಅಥವಾ 5.0 ಗಿಂತ ಹಿಂದಿನ ವರ್ಶನ್ ಆ್ಯಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿದ್ದವರಿಗೆ ಮೊದಲ ಆಯ್ಕೆ ಹೊಸ ಫೋನ್‌ ಖರೀದಿ. ಇನ್ನು ಅಪ್‌ಗ್ರೇಡ್ ಮಾಡಲು ಹೊರಟರೆ ಕೆಲ ಫೋನ್‌ಗಳು ಮಾತ್ರ ಅಪ್‌ಗ್ರೇಡ್ ಆಗಲಿದೆ. 

ನಿಮ್ಮ ಫೋನ್ ಯಾವ ವರ್ಶನ್ ತಿಳಿಯಲು ಸೆಟ್ಟಿಂಗ್ಸ್ ಕ್ಲಿಕ್ ಮಾಡಿ > ಬಳಿಕ ಅಬೌಂಟ್ ಫೋನ್> ಬಳಿಕ ಸಾಫ್ಟ್‌ವೆರ್ ಇನ್ಫೋ ಕ್ಲಿಕ್ ಮಾಡಿ ಯಾವ ವರ್ಶನ್ ಆ್ಯಂಡ್ರಾಯ್ಡ್ ಫೋನ್ ಎಂದು ತಿಳಿದುಕೊಳ್ಳಿ.

ಭಾರತದಲ್ಲಿ ಸರಿಸುಮಾರು 48 ಕೋಟಿ(487 ಮಿಲಿಯನ್) ಮಂದಿ ವ್ಯಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ. ವ್ಯಾಟ್ಸ್ಆ್ಯಪ್ ಬಳಕೆ ಮಾಡುತ್ತಿರುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ 118.5 ಮಿಲಿಯನ್ ವ್ಯಾಟ್ಸ್ಆ್ಯಪ್ ಬಳಕೆದಾರರನ್ನು ಹೊಂದಿದೆ.

click me!