ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಹೊಸ ಮತ್ತು ಅತ್ಯುತ್ತಮ ಮಾಡೆಲ್ ಆಗಿರುವ ಫೋಲ್ಡೇಬಲ್ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಏಳನೇ ಜನರೇಷನ್ ನ ಫೋಲ್ಡೆಬಲ್ ಸ್ಮಾರ್ಟ್ ಫೋನ್ ಗಳು ಈ ಹಿಂದಿನ ಮಾದರಿಗಳಿಗಿಂತ ಅತಿ ತೆಳ್ಳಗೆ, ಹಗುರವಾಗಿ ಮತ್ತು ದೀರ್ಘ ಬಾಳಿಕೆ ಬರಲಿದೆ. 2019ರಲ್ಲಿ ಮೊದಲ ಬಾರಿಗೆ ಗ್ಯಾಲಕ್ಸಿ ಝಡ್ ಫೋಲ್ಡ್ ಫೋನ್ ಪರಿಚಯಿಸಿತು. ಆ ಮೂಲಕ ಸ್ಯಾಮ್ ಸಂಗ್ ಕಂಪನಿಯು ಗ್ರಾಹಕರಿಗೆ ಹೊಸ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ವಿಭಾಗವನ್ನು ಪರಿಚಯಿಸಿತ್ತು. ಆದರೆ, ಈ ವಿಭಾಗವು ಹೆಚ್ಚಿನ ಬೆಲೆ ಮತ್ತು ಫೋಲ್ಡಬಲ್ ಡಿವೈಸ್ ಗಳ ಬಾಳಿಕೆಯಿಂದ ಹಲವು ಸವಾಲು ಎದರಿಸಿತ್ತು. ಇದಕ್ಕೆ ಉತ್ತರವಾಗಿ ಇದೀಗ ದೀರ್ಘ ಬಾಳಿಕೆಯ, ತೆಳ್ಳಿಗನ ಫೋಲ್ಡೇಬಲ್ ಫೋನ್ ಬಿಡುಗಡೆ ಮಾಡುತ್ತಿದೆ.