ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಖರೀದಿಸಲು ಮುಗಿಬಿದ್ದ ಗ್ರಾಹಕರು, ಅಂತಾದ್ದೇನಿದೆ ಈ ಫೋನಲ್ಲಿ?

Published : Feb 07, 2025, 09:31 PM IST

ಇಂದಿನಿಂದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಫೋನ್ ಮಾರಾಟ ಆರಂಭಗೊಂಡಿದೆ. ಮಾರಾಟ ಆರಂಭಗಗೊಂಡ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ. ಏನಿದೆ ಈ ಫೋನ್‌ನಲ್ಲಿ? 

PREV
15
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಖರೀದಿಸಲು ಮುಗಿಬಿದ್ದ ಗ್ರಾಹಕರು, ಅಂತಾದ್ದೇನಿದೆ ಈ ಫೋನಲ್ಲಿ?

ಭಾರತದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಹಲವು ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದೀಗ  ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್25 ಸೀರಸ್ ಮಾರಾಟ ಆರಂಭಗೊಂಡಿದೆ. ಈಗಾಗಲೇ 430,000 ಪ್ರೀ- ಆರ್ಡರ್‌ ಮೂಲಕ ಭಾರಿ ಗಮನಸೆಳೆದಿದ್ದ ಈ ಫೋನ್ ಇದೀಗ ಮಾರಾಟ ಆರಂಭಗೊಂಡಿದೆ.ಇದರ ಬೆನ್ನಲ್ಲೇ ಗ್ರಾಹಕರು ಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ. ಇತರ ಸೀರಿಸ್‌ಗೆ ಹೋಲಿಸಿದರೆ ಎಸ್25 ಸರಣಿಗೆ ಶೇ.20ರಷ್ಟು ಹೆಚ್ಚು ಪ್ರೀ ಆರ್ಡರ್ ಪಡೆದಿದೆ.

25

ಗ್ಯಾಲಕ್ಸಿ ಎಸ್25 ಸರಣಿಯ ಯಶಸ್ಸು ಗ್ರಾಹಕರು ಸ್ಯಾಮ್‌ ಸಂಗ್‌ ಮೇಲೆ ಇಟ್ಟಿರುವ ನಂಬಿಕೆಯನ್ನು ಬಲಪಡಿಸಿದ್ದು, ಈ ಮೂಲಕ ಗ್ರಾಹಕರು ತಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಉತ್ತಮವಾದ ಎಐ ಪರಿಹಾರಗಳನ್ನು ಹೆಚ್ಚು ಬಳಸಲಿದ್ದಾರೆ. ಭಾರತದಲ್ಲಿ ಗ್ಯಾಲಕ್ಸಿ ಎಸ್25 ಗ್ರಾಹಕರಿಗೆ ಗೂಗಲ್ ನ ಜೆಮಿನಿ ಲೈವ್ ಹಿಂದಿಯಲ್ಲಿ ಕೂಡ ಲಭ್ಯವಿರುತ್ತದೆ. ಇದು ಸ್ಯಾಮ್ ಸಂಗ್ ಭಾರತದ ಮೇಲೆ ಹೊಂದಿರುವ ಪ್ರಾಮುಖ್ಯತೆಯನ್ನು ಸಾರುತ್ತದೆ.

35

ಫೆಬ್ರವರಿ 7 ರಿಂದ ಗ್ಯಾಲಕ್ಸಿ ಎಸ್25 ಸರಣಿಯು ರಿಟೇಲ್ ಅಂಗಡಿಗಳಲ್ಲಿ ಮತ್ತು Samsung.com ಮತ್ತು ಇತರ ಆನ್‌ ಲೈನ್ ಪ್ಲಾಟ್‌ ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ಎಸ್25 ಅಲ್ಟ್ರಾ ಟೈಟಾನಿಯಂ ಸಿಲ್ವರ್‌ಬ್ಲೂ, ಟೈಟಾನಿಯಂ ಬ್ಲಾಕ್, ಟೈಟಾನಿಯಂ ವೈಟ್‌ಸಿಲ್ವರ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಸ್25 ಮತ್ತು ಗ್ಯಾಲಕ್ಸಿ ಎಸ್25+ ನೇವಿ, ಸಿಲ್ವರ್ ಶ್ಯಾಡೋ, ಐಸಿಬ್ಲೂ ಮತ್ತು ಮಿಂಟ್ ಬಣ್ಣದಲ್ಲಿ ದೊರೆಯುತ್ತದೆ.

45

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಅವರು,  "ಗ್ಯಾಲಕ್ಸಿ ಎಸ್25 ಅಲ್ಟ್ರಾ, ಗ್ಯಾಲಕ್ಸಿ ಎಸ್25+ ಮತ್ತು ಗ್ಯಾಲಕ್ಸಿ ಎಸ್25 ಸ್ಮಾರ್ಟ್‌ ಫೋನ್‌ ಗಳು ಸ್ಯಾಮ್‌ ಸಂಗ್‌ ನ ಅತ್ಯಂತ ಸಹಜ ಮತ್ತು ಸಂದರ್ಭ ಜಾಗೃತ ಮೊಬೈಲ್ ಅನುಭವ ಒದಗಿಸುತ್ತಿದ್ದು, ಇವುಗಳು ನಿಜವಾದ ಎಐ ಸಂಗಾತಿಗಳಾಗಿ ಹೊರಹೊಮ್ಮಿವೆ ಎಂದಿದ್ದಾರೆ. 

55

ಗ್ಯಾಲಕ್ಸಿ ಎಐ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಯುವ ಟೆಕ್ ಸ್ಯಾವಿ ಗ್ರಾಹಕರು ಗ್ಯಾಲಕ್ಸಿ ಎಸ್25 ಸರಣಿಯ ಮೇಲೆ ಹೆಚ್ಚಿನ ಆಸಕ್ತಿ ತೋರಿಸಿರುವುದನ್ನು ನಾವು ಗಮನಿಸಿದ್ದೇವೆ. ಈ ವರ್ಷ ನಾವು ನಮ್ಮ ಪ್ರಮುಖ ವಿತರಣಾ ಜಾಲವನ್ನು 17,000 ಮಳಿಗೆಗಳಿಗೆ ವಿಸ್ತರಿಸಿದ್ದು, ಇದು ಸಣ್ಣ ನಗರಗಳಲ್ಲಿಯೂ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡಿದೆ ಎಂದು ರಾಜು ಹೇಳಿದ್ದಾರೆ.

Read more Photos on
click me!

Recommended Stories