Smartphone: ರಿಯಲ್‌ಮಿ P4R 5G ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಈ ಫೋನ್ 144Hz ಡಿಸ್‌ಪ್ಲೇ, 8000mAh ಬ್ಯಾಟರಿ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
ನೀವು 25 ಸಾವಿರ ಆಸುಪಾಸಿನಲ್ಲಿ ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಪ್ಲಾನ್ ಮಾಡುತ್ತಿದ್ದೀರಾ? ಹಾಗಾದ್ರೆ ನೀವು ರಿಯಲ್‌ಮಿ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗುತ್ತಿರುವ ಭರ್ಜರಿ ಡಿಸ್ಕೌಂಟ್ ಲಾಭ ಪಡೆಯಬಹುದಾಗಿದೆ. Realme P4R 5G ಸ್ಮಾರ್ಟ್‌ಫೋನ್ ನಿಮಗೆ ಒಳ್ಳೆಯ ಆಯ್ಕೆಯಾಗಬಹುದು. ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್ ಮೇಲೆ 19,600 ರೂ.ಗಳವರೆಗೆ ಡಿಸ್ಕೌಂಟ್ ಸಿಗಲಿದೆ.
25
ಬೆಲೆ
Realme P4R 5G ಸ್ಮಾರ್ಟ್‌ಫೋನ್ ಮೂಲಬೆಲೆ 40 ಸಾವಿರ ರೂಪಾಯಿ (Rs.39,999) ಆಗಿದೆ. ಗ್ರಾಹಕರು ಲಭ್ಯವಿರೋ ಆಯ್ಕೆಗಳನ್ನು ಬಳಸಿಕೊಂಡು 19 ಸಾವಿರ ರೂ.ವರೆಗೆ ಡಿಸ್ಕೌಂಟ್ ಪಡೆಯಬಹುದಾಗಿದೆ. ಇದರ ಜೊತೆ ಸೂಚಿಸಿದ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಹೆಚ್ಚುವರಿ ಲಾಭ ನಿಮ್ಮದಾಗಲಿದೆ.
ಇನ್ನು ಫ್ಲಿಪ್‌ಕಾರ್ಟ್‌ನಲ್ಲಿಯೂ Realme P4R 5G ಸ್ಮಾರ್ಟ್‌ಫೋನ್ ಲಭ್ಯವಿದ್ದು, ಇಲ್ಲಿ ನೀವು Flipkart Axis Bank ಅಥವಾ Flipkart SBI Credit Card ಬಳಸಿದ್ರೆ 1,200 ರೂಪಾಯಿ ಉಳಿತಾಯವಾಗಲಿದೆ.
35
ಸದ್ಯದ ಬೆಲೆ ಎಷ್ಟು?
ಫ್ಲಿಪ್‌ಕಾರ್ಟ್‌ನಲ್ಲಿ Realme P4R 5G ಸ್ಮಾರ್ಟ್‌ಫೋನ್ ಬೆಲೆ 40,999 ರೂ.ಗಳಿದ್ದು, ರಿಯಾಯ್ತಿ ಬಳಿಕ ಗ್ರಾಹಕರಿಗೆ 22,799 ರೂ.ಗೆ ಲಭ್ಯವಾಗಲಿದೆ.
6.67 ಇಂಚಿನ FHD+ AMOLED ಡಿಸ್‌ಪ್ಲೇಯನ್ನು 144Hz ರಿಫ್ರೆಶ್ ರೇಟ್ ಜೊತೆ ಬರಲಿದೆ.
MediaTek Dimensity 6300 Ultra 5G ಪ್ರೊಸೆಸೆರ್ ಹೊಂದಿರೋದರಿಂದ ಮಲ್ಟಿಟಾಸ್ಕಿಂಗ್ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.
55
ಕ್ಯಾಮೆರಾ ಮತ್ತು ಬ್ಯಾಟರಿ
50MP ಪ್ರೈಮರಿ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 16MP ಕ್ಯಾಮೆರಾ ನೀಡಲಾಗಿದೆ.
128GB ಮೆಮೊರಿ ಸ್ಟೋರೇಜ್, 6GB RAM ಒಳಗೊಂಡಿರುವ ಸ್ಮಾರ್ಟ್‌ಫೋನ್ ಇದಾಗಿದ್ದು, 8000mAh ಬ್ಯಾಟರಿ ಕೆಪಾಸಿಟಿಯನ್ನು ಹೊಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.