ಸ್ವಾತಂತ್ರ್ಯ ದಿನಾಚರಣೆಗೂ ಮೊದಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್ ಫೋನ್‌ಗೆ ಭರ್ಜರಿ ಡಿಸ್ಕೌಂಟ್

Published : Aug 11, 2025, 04:33 PM IST

ಸ್ವಾತಂತ್ರ್ಯ ದಿನಾಚರಣೆ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಫ್ಲಿಪ್ ಫೋನ್‌ಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ನಗದು ಡಿಸ್ಕೌಂಟ್, ಕ್ಯಾಶ್‌ಬ್ಯಾಕ್, ಬೋನಸ್ ಸೇರಿ ಹಲವು ಆಫರ್ ಘೋಷಿಸಿದೆ

PREV
17

ಹಬ್ಬಗಳ ಸೀಸನ್ ಆರಂಭಗೊಳ್ಳುತ್ತಿದೆ. ಇತ್ತ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಸ್ಮಾರ್ಟ್‌ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಆಫರ್ ಘೋಷಣೆಯಾಗುತ್ತಿದೆ. ಇದೀಗ ಸ್ಯಾಮ್‌ಸಂಗ್ ತನ್ನ ಜನಪ್ರಿಯ ಗ್ಯಾಲಕ್ಸಿ ಫ್ಲಿಪ್ ಫೋನ್ ಮೇಲೆ ಭಾರಿ ಡಿಸ್ಕೌಂಟ್ ಆಫರ್ ನೀಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್7 ಮತ್ತು ಝಡ್ ಫ್ಲಿಪ್7 FE ಸ್ಮಾರ್ಟ್ ಫೋನ್ ಗಳ ಮೇಲೆ ಸೀಮಿತ ಅವಧಿಯ ಆಕರ್ಷಕ ಆಫರ್ ನೀಡಲಾಗಿದೆ.

27

ಈ ಹೊಸ ಆಫರ್ ನಲ್ಲಿ ₹12,000 ವರೆಗಿನ ಬ್ಯಾಂಕ್ ಕ್ಯಾಶ್‌ ಬ್ಯಾಕ್ ಅಥವಾ ಅಪ್‌ ಗ್ರೇಡ್ ಬೋನಸ್‌ ಒಳಗೊಂಡು ಗ್ಯಾಲಕ್ಸಿ ಝಡ್ ಫ್ಲಿಪ್7 ಕೇವಲ ₹97,999 ಬೆಲೆಗೆ ದೊರೆಯಲಿದೆ. ಗ್ಯಾಲಕ್ಸಿ ಝಡ್ ಫ್ಲಿಪ್7 ಎಫ್ಇ ₹10,000 ವರೆಗಿನ ಬ್ಯಾಂಕ್ ಕ್ಯಾಶ್‌ ಬ್ಯಾಕ್ ಅಥವಾ ಅಪ್‌ಗ್ರೇಡ್ ಬೋನಸ್‌ ಒಳಗೊಂಡು ಕೇವಲ ₹85,999 ಬೆಲೆಗೆ ಲಭ್ಯವಿದೆ. ಗ್ಯಾಲಕ್ಸಿ ಝಡ್ ಫ್ಲಿಪ್7 ಮತ್ತು ಝಡ್ ಫ್ಲಿಪ್7 ಎಫ್ಇ ಖರೀದಿಸಲು ಬಯಸುವ ಗ್ರಾಹಕರು ವಿಶೇಷವಾಗಿ ಬ್ಯಾಂಕ್ ಕ್ಯಾಶ್‌ ಬ್ಯಾಕ್ ಮತ್ತು ಅಪ್‌ ಗ್ರೇಡ್ ಬೋನಸ್ ಆಫರ್ ಗಳ ಜೊತೆಗೆ 24 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವನ್ನೂ ಪಡೆಯಬಹುದಾಗಿದೆ.

37

ಸ್ಯಾಮ್‌ ಸಂಗ್‌ ನ ಏಳನೇ ಜನರೇಷನ್ ನ ಫೋಲ್ಡೆಬಲ್ ಸ್ಮಾರ್ಟ್‌ ಫೋನ್‌ ಗಳು ಭಾರತದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಬೇಡಿಕೆ ಪಡೆದಿವೆ. ಈ ಫೋನ್ ಗಳು ಜುಲೈ ತಿಂಗಳಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಮೊದಲ 48 ಗಂಟೆಗಳಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್7, ಝಡ್ ಫ್ಲಿಪ್7 ಮತ್ತು ಝಡ್ ಫ್ಲಿಪ್7 ಎಫ್ಇ ಗಳಿಗೆ 2.1 ಲಕ್ಷಕ್ಕೂ ಹೆಚ್ಚು ಪ್ರೀ ಆರ್ಡರ್‌ ಗಳು ಬಂದಿದ್ದವು.

47

ಗ್ಯಾಲಕ್ಸಿ ಝಡ್ ಫ್ಲಿಪ್7 ಬಹುಮುಖ ಸಾಮರ್ಥ್ಯಗಳನ್ನು ಹೊಂದಿರುವ ಕಾಂಪ್ಯಾಕ್ಟ್ ಎಐ ಫೋನ್ ಆಗಿದ್ದು, ಹೊಸ ಆಕರ್ಷಕ ಫ್ಲೆಕ್ಸ್‌ ವಿಂಡೋ ಹೊಂದಿದೆ. ಜೇಬಿನಲ್ಲಿ ಇಡುವಷ್ಟು ಚಿಕ್ಕದಾಗಿದ್ದರೂ, ಅದ್ಭುತವಾಗಿ ನೆರವು ಒದಗಿಸುವಷ್ಟು ಶಕ್ತಿಶಾಲಿಯಾಗಿದೆ. ಇದರಲ್ಲಿ ಗ್ಯಾಲಕ್ಸಿ ಎಐಯನ್ನು ಹೊಸ ಎಡ್ಜ್-ಟು-ಎಡ್ಜ್ ಫ್ಲೆಕ್ಸ್‌ ವಿಂಡೋ ಜೊತೆಗೆ ಮಿಳಿತಗೊಳಿಸಲಾಗಿದೆ. ಅತ್ಯಾಧುನಿಕ ಕ್ಯಾಮೆರಾ ಮತ್ತು ಅತ್ಯಂತ ಕಾಂಪ್ಯಾಕ್ಟ್ ಹಾಗೂ ಆಕರ್ಷಕ ವಿನ್ಯಾಸ ಹೊಂದಿದೆ. ಅಪೂರ್ವವಾದ ವಾಯ್ಸ್ ಎಐಯಿಂದ ಹಿಡಿದು ಉತ್ತಮ ಸೆಲ್ಫಿ ತೆಗೆಯುವ ಸಾಮರ್ಥ್ಯಗಳವರೆಗೆ, ಗ್ಯಾಲಕ್ಸಿ ಝಡ್ ಫ್ಲಿಪ್7 ದೈನಂದಿನ ಬಳಕೆಗೆ ಮತ್ತು ಅತ್ಯುತ್ತಮ ಸಂವಹನಕ್ಕೆ ಹೇಳಿಮಾಡಿಸಿದಂತಿದೆ. ಜೇಬಿನ ಗಾತ್ರಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಅತ್ಯುತ್ತಮ ಸಂಗಾತಿಯಾಗಿದೆ. ಕೇವಲ 188 ಗ್ರಾಂ ತೂಕ ಇರುವ ಮತ್ತು ಮಡಚಿದಾಗ ಕೇವಲ 13.7 ಎಂಎಂ ದಪ್ಪವಿರುವ ಗ್ಯಾಲಕ್ಸಿ ಝಡ್ ಫ್ಲಿಪ್7 ಇದುವರೆಗಿನ ಅತ್ಯಂತ ತೆಳುವಾದ ಗ್ಯಾಲಕ್ಸಿ ಝಡ್ ಫ್ಲಿಪ್ ಆಗಿದೆ.

57

ಗ್ಯಾಲಕ್ಸಿ ಝಡ್ ಫ್ಲಿಪ್7 ಒಂದು ಅದ್ಭುತ ಫ್ಲೆಕ್ಸ್‌ ವಿಂಡೋ ಡಿಸ್‌ಪ್ಲೇ ಹೊಂದಿದ್ದು ಇದರ ಮುಂಭಾಗದಲ್ಲಿ ಮತ್ತು ಕೇಂದ್ರದಲ್ಲಿಯೇ ಪ್ರಮುಖ ಅಂಶಗಳನ್ನು ನೋಡಬಹುದಾಗಿದೆ. ಮಡಚಿರುವಾಗಲೇ ತ್ವರಿತವಾಗಿ ಸಂದೇಶಗಳನ್ನು ಟೈಪ್ ಮಾಡಲು ಅನುವು ಮಾಡಿಕೊಡುತ್ತದೆ. 4.1-ಇಂಚಿನ ಸೂಪರ್ ಅಮೋಲ್ಡ್ ಫ್ಲೆಕ್ಸ್‌ ವಿಂಡೋ, ಗ್ಯಾಲಕ್ಸಿ ಝಡ್ ಫ್ಲಿಪ್7 ನಲ್ಲಿಯೇ ಇದುವರೆಗಿನ ಅತಿದೊಡ್ಡ ಫ್ಲೆಕ್ಸ್ ವಿಂಡೋ ಆಗಿದೆ. ಎಡ್ಜ್-ಟು-ಎಡ್ಜ್ ಬಳಕೆ ಮಾಡಬಹುದಾಗಿದ್ದು, ಬಳಕೆದಾರರಿಗೆ ಕವರ್ ಸ್ಕ್ರೀನ್‌ ನಲ್ಲಿ ಹೆಚ್ಚು ನೋಡಲು ಮತ್ತು ಹೆಚ್ಚು ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ. 2600 ನಿಟ್ಸ್‌ ನಷ್ಟು ಗರಿಷ್ಠ ಬ್ರೈಟ್ ನೆಸ್ ಹೊಂದಿದ್ದು, ಫ್ಲೆಕ್ಸ್‌ ವಿಂಡೋ ನಲ್ಲಿ ವಿಷನ್ ಬೂಸ್ಟರ್‌ ಸೌಲಭ್ಯ ಕೂಡ ಲಭ್ಯವಿದೆ. ಈ ಮೂಲಕ ಹೊರಾಂಗಣ ಗೋಚರತೆ ಅತ್ಯುತ್ತಮವಾಗಿದೆ. ಈ ಎಲ್ಲಾ ಸೌಲಭ್ಯಗಳಿಂದಾಗಿ ಬಳಕೆದಾರರು ಎಲ್ಲಿಯೇ ಇದ್ದರೂ ಎಲ್ಲರ ಜೊತೆ ಸಂಪರ್ಕದಲ್ಲಿರಬಹುದು. ಇದರ ಮೇನ್ ಡಿಸ್‌ಪ್ಲೇ 6.9-ಇಂಚಿನ ಅಮೋಲ್ಡ್ 2ಎಕ್ಸ್ ಡಿಸ್ ಪ್ಲೇ ಆಗಿದ್ದು, ಅತ್ಯಂತ ಆಹ್ಲಾದಕರ ಅನುಭವ ಒದಗಿಸಲೆಂದೇ ನಿರ್ಮಿತವಾಗಿದೆ.

67

ಗ್ಯಾಲಕ್ಸಿ ಝಡ್ ಫ್ಲಿಪ್7ರ ಕವರ್ ಮತ್ತು ಹಿಂಭಾಗವು ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ಸುರಕ್ಷಿತವಾಗಿದೆ. ಆರ್ಮರ್ ಫ್ಲೆಕ್ಸ್‌ ಹಿಂಜ್ ಹಿಂದಿನ ಜನರೇಷನ್ ನ ಹಿಂಜ್ ಗಿಂತ ತೆಳುವಾಗಿದ್ದು, ಹೊಸ ವಿನ್ಯಾಸ ಹೊಂದಿದೆ. ಸುಗಮವಾದ ಮಡಿಸಲು ಸಾಧ್ಯವಾಗುವಂತೆ ಹೆಚ್ಚಿನ-ಶಕ್ತಿಯ ವಸ್ತುಗಳನ್ನು ಒಳಗೊಂಡಿದ್ದು, ದೀರ್ಘಕಾಲಿಕ ಬಾಳಿಕೆ ಬರುವಂತೆ ರೂಪುಗೊಂಡಿದೆ. ಗಟ್ಟಿಮುಟ್ಟಾದ ಆರ್ಮರ್ ಅಲ್ಯೂಮಿನಿಯಂ ಫ್ರೇಮ್ ಗಟ್ಟಿಯಾದ ಬಾಹ್ಯ ರಕ್ಷಣೆ ಒದಗಿಸುತ್ತದೆ. 4,300 ಎಂಎಎಚ್ ಬ್ಯಾಟರಿ ಹೊಂದಿದ್ದು, ಇದು ಗ್ಯಾಲಕ್ಸಿ ಝಡ್‌ ಫ್ಲಿಪ್ ನಲ್ಲಿ ಇದುವರೆಗಿನ ಅತಿದೊಡ್ಡ ಬ್ಯಾಟರಿಯಾಗಿದೆ. ಒಂದೇ ಚಾರ್ಜ್‌ನಲ್ಲಿ 31 ಗಂಟೆಗಳವರೆಗೆ ವೀಡಿಯೋ ಪ್ಲೇ ಟೈಂ ಅನ್ನು ಒದಗಿಸುತ್ತದೆ.

77

ಗ್ಯಾಲಕ್ಸಿ ಝಡ್‌ ಫ್ಲಿಪ್7 ಎಫ್ಇ ಆಕರ್ಷಕ ವೀಕ್ಷಣೆಗಾಗಿ 6.7-ಇಂಚಿನ ಮೇನ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 50 ಎಂಪಿ ಫ್ಲೆಕ್ಸ್‌ ಕ್ಯಾಮ್ ಫೀಚರ್ ಫ್ಲೆಕ್ಸ್ ಮೋಡ್‌ ನಲ್ಲಿ ಉತ್ತಮ-ಗುಣಮಟ್ಟದ ಸೆಲ್ಫಿಗಳು ಮತ್ತು ವೀಡಿಯೋವನ್ನು ತೆಗೆಯಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ಬಳಕೆದಾರರಿಗೆ ಸಾಧನವನ್ನು ತೆರೆಯದೆಯೇ ಕೈ ಬಳಸದೆಯೇ ವಸ್ತುವನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಝಡ್ ಫ್ಲಿಪ್7 ಬ್ಲೂ ಶ್ಯಾಡೋ, ಜೆಟ್ ಬ್ಲಾಕ್ ಮತ್ತು ಕೋರಲ್ ರೆಡ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಬರುತ್ತದೆ. ಗ್ಯಾಲಕ್ಸಿ ಝಡ್ ಫ್ಲಿಪ್7 ಎಫ್ಇ ಫೋನ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

Read more Photos on
click me!

Recommended Stories