ಹೊಸ ಪ್ಲಾನ್ ಪರಿಚಯಿಸಿದ ಜಿಯೋ, 365 ರೂ. ಸಿಗಲಿದೆ ಇಷ್ಟೊಂದು ಲಾಭ

Published : Feb 21, 2026, 11:57 AM IST

Jio New Plan : ಜಿಯೋ ಸದ್ದಿಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಹೊಸ ಪ್ಲಾನ್ ಶುರು ಮಾಡಿದೆ. ಅದ್ರ ಬೆಲೆ ಎಷ್ಟು, ಎಷ್ಟು ದಿನ ವ್ಯಾಲಿಡಿಟಿ, ಏನೆಲ್ಲ ಹೆಚ್ಚುವರಿ ಲಾಭ ಎನ್ನುವ ಮಾಹಿತಿ ಇಲ್ಲಿದೆ.

PREV
17
ಜಿಯೋ ಹೊಸ ಪ್ಲಾನ್

ಜಿಯೋ ಸಿಮ್ ಬಳಕೆದಾರರಿಗೆ ಖುಷಿ ಸುದ್ದಿ ಒಂದಿದೆ. ಜಿಯೋ ವ್ಯಾಲ್ಯೂ ರಿವಾರ್ಡ್ಗಳ ಭಾಗವಾಗಿ ಸದ್ದಿಲ್ಲದೆ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಜಿಯೋ ಗ್ರಾಹಕರಿಗೆ ತನ್ನ ಹೊಸ ಪ್ಲಾನ್ ಬೆಲೆಯನ್ನು 365 ರೂಪಾಯಿಗೆ ನಿಗದಿಪಡಿಸಿದೆ. ಬಳಕೆದಾರರು ಈ ಪ್ಲಾನ್ ನಲ್ಲಿ ಡೇಟಾ, ಕರೆ, ಎಸ್ ಎಂಎಸ್ ಮತ್ತು ಟಾಕ್ ಟೈಮ್ ಪಡೆಲಿದ್ದಾರೆ. ಒಂದು ಪ್ಲಾನ್ ಬಹು ಲಾಭದ ಅಡಿಯಲ್ಲಿ ಈ ಪ್ಲಾನ್ ಶುರುವಾಗಿದೆ.

27
ಎಷ್ಟು ಮಾನ್ಯತೆ ?

ಅತಿ ಕಡಿಮೆ ಬೆಲೆಗೆ ಹೆಚ್ಚು ಲಾಭ ನೀಡುವ ವಿಷ್ಯದಲ್ಲಿ ಜಿಯೋ ಮುಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಈಗಾಗಲೇ ಅನೇಕ ಹೊಸ ಪ್ಲಾನ್ ಗಳನ್ನು ಜಿಯೋ ಪರಿಚಯಿಸಿದೆ. ಈಗ ಶುರು ಆಗಿರುವ ಹೊಸ ಪ್ಲಾನ್ ನಲ್ಲಿ 365 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ ಸಿಗಲಿದೆ. ಅಲ್ದೆ ಗ್ರಾಹಕರು ಅನ್ ಲಿಮಿಟೆಡ್ ಧ್ವನಿ ಕರೆ ಸೌಲಭ್ಯ ಪಡೆಯಲಿದ್ದಾರೆ.

37
ಏನೇನು ಸಿಗಲಿದೆ?

ನೀವು 365 ರೂಪಾಯಿ ರೀಚಾರ್ಜ್ ಪ್ಲಾನ್ ಪಡೆದ್ರೆ ನಿಮಗೆ ದಿನಕ್ಕೆ 25GB ಡೇಟಾ ಸಿಗಲಿದೆ. ಅಲ್ದೆ 100 ಉಚಿತ ಎಸ್ ಎಂಎಸ್ ಲಭ್ಯವಿದೆ. ಅಂದ್ರೆ ನೀವು 30 ದಿನಗಳವರೆಗೆ 25GB ಡೇಟಾ, 100 ಎಸ್ ಎಂಎಸ್ ಮತ್ತು ಅನಿಯಮಿತ ಕರೆಯನ್ನು ಪಡೆಯುತ್ತೀರಿ. ಇದಲ್ದೆ 7.47 ಮೌಲ್ಯದ ಟಾಕ್ ಟೈಮ್ ಅನ್ನು ಸಿಗಲಿದೆ.

47
ಜಿಯೋ ಹಾಟ್ಸ್ಟಾರ್

ಬರೀ ಎಸ್ ಎಂಎಸ್, ಕರೆ ಮಾತ್ರವಲ್ಲ ಕಂಪನಿಯು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತಿದೆ. ವಿಶೇಷ ಕೊಡುಗೆಯಲ್ಲಿ, ಕಂಪನಿ ಮೂರು ತಿಂಗಳ ಜಿಯೋಹಾಟ್ಸ್ಟಾರ್ ಮೊಬೈಲ್ ಮತ್ತು ಟಿವಿ ಎಕ್ಸೆಸ್ ನೀಡುತ್ತಿದೆ. ನೀವು ಮೊಬೈಲ್ ಹಾಗೂ ಟಿವಿ ಎರಡರಲ್ಲೂ ಎಕ್ಸೆಸ್ ಪಡೆಯಬಹುದು.

57
50 ಜಿಬಿ ಡೇಟಾ

JioAI ಕ್ಲೌಡ್ ಅಡಿಯಲ್ಲಿ 50GB ಡೇಟಾ ಲಭ್ಯವಿರುತ್ತದೆ. ನೀವು ಕ್ಲೌಡ್ ಸ್ಟೋರೇಜ್ನಲ್ಲಿ 50GB ಡೇಟಾವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಕಂಪನಿಯು Google Gemini Pro ಯೋಜನೆಯನ್ನು ಸಹ ನೀಡುತ್ತಿದೆ.

67
ಇದು ಉಚಿತ

35,100 ಬೆಲೆಯ Google Gemini ಯೋಜನೆಯು ಗ್ರಾಹಕರಿಗೆ ಉಚಿತವಾಗಿ ಲಭ್ಯವಿದೆ. ಆದಾಗ್ಯೂ, ಇದನ್ನು ಸಕ್ರಿಯಗೊಳಿಸಬೇಕು. ಈ ಯೋಜನೆಯನ್ನು ಬಳಸಲು ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

77
ಯಾರಿಗೆ ಪ್ರಯೋಜನಕಾರಿ?

ಕಂಪನಿಯು ಈ ಯೋಜನೆಯನ್ನು ವ್ಯಾಲ್ಯೂ ಲೀಸ್ಟ್ ನಲ್ಲಿ ಸೇರಿಸಿದೆ. ಆದ್ರೆ ಇದನ್ನು ಅಗ್ಗದ ಪ್ಲಾನ್ ಎನ್ನಲು ಸಾಧ್ಯವಿಲ್ಲ. 365 ರೂಪಾಯಿಗೆ ವ್ಯಾಲಿಡಿಟಿ 30 ದಿನ ಮಾತ್ರ ಲಭ್ಯವಿದೆ. 30 ದಿನಗಳವರೆಗೆ ಡೇಟಾ, ಕರೆ ಮತ್ತು ಎಸ್ ಎಂಎಸ್ ಅಗತ್ಯವಿರುವವರಿಗೆ ಈ ಪ್ಲಾನ್ ಹೆಚ್ಚು ಪ್ರಯೋಜನಕಾರಿ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories