Huawei Osta O 1 Pro: ನವೆಂಬರ್ 20 ರಂದು ಓಸ್ಟಾ ಒ1 ಪ್ರೊ ಹೊಸ ಫೋನ್ ಬಿಡುಗಡೆ ಮಾಡುವುದಾಗಿ ಹುವಾವೇ ಕಳೆದ ವಾರ ಹೇಳಿತ್ತು. ಆದರೀಗ ಬಿಡುಗಡೆಗೆ ಮುನ್ನವೇ ಅಧಿಕೃತವಾಗಿ ಹೊಸ ಫೋನ್‌ಗಳ ವಿನ್ಯಾಸ, ಬಣ್ಣಗಳ ಆಯ್ಕೆಗಳನ್ನು ರಿವೀಲ್ ಮಾಡಿದೆ.
ನವೆಂಬರ್ 20 ರಂದು ಓಸ್ಟಾ ಒ1 ಪ್ರೊ ಹೊಸ ಫೋನ್ ಬಿಡುಗಡೆ ಮಾಡುವುದಾಗಿ ಹುವಾವೇ ಕಳೆದ ವಾರ ಹೇಳಿತ್ತು. ಆದರೀಗ ಬಿಡುಗಡೆಗೆ ಮುನ್ನವೇ ಅಧಿಕೃತವಾಗಿ ಹೊಸ ಫೋನ್‌ಗಳ ವಿನ್ಯಾಸ, ಬಣ್ಣಗಳ ಆಯ್ಕೆಗಳನ್ನು ರಿವೀಲ್ ಮಾಡಿದೆ. ಚೀನಾದಲ್ಲಿ ಈಗಾಗಲೇ ಪ್ರಿ ಆರ್ಡರ್(Osta O1 Pro pre-order) ಪಡೆಯಲು ಕಂಪನಿ ಶುರು ಮಾಡಿದ್ದು, ಹೊಸ ಫೋನ್ ಖರೀದಿಸಲು ಜನರು ಮುಗಿಬಿದ್ದು ಆರ್ಡರ್ ಮಾಡಲಾರಂಭಿಸಿದ್ದಾರೆ..
24
ಒಸ್ಟಾ ಒ1 ಮೂರು ಬಣ್ಣಗಳ ಆಯ್ಕೆ ನೀಡಿದೆ.
ಕಳೆದ ವಾರ ಲೀಕ್ ಆಗಿದ್ದ ಫೋನ್‌ನ ಫೋಟೊ(Render)ಕ್ಕೂ ಈಗ ಅಧಿಕೃತವಾಗಿ ಕಂಪನಿ ಬಿಡುಗಡೆ ಮಾಡಿರುವ ಚಿತ್ರಕ್ಕೂ ಹೋಲಿಕೆಯಿದೆ. ಈ ಹೊಸ ಫೋನ್‌ನಲ್ಲಿ ಅಗಲವಾದ ಡಿಸ್‌ಪ್ಲೇ ಹೊಂದಿರುವುದು ವಿಶೇಷವಾಗಿದೆ. ಫೋನ್‌ನ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ನೋಡಲು ಆಪಲ್‌ನ ಕಂಪನಿ ಹೊಸ ಫೋನ್‌ನ ಮಾದರಿಯಲ್ಲಿಯೇ ಕಾಣುತ್ತದೆ.
ಅಧಿಕೃತ ಮಾಹಿತಿ ಪ್ರಕಾರ, Osta O1 Pro ಫೋನ್ ನೆಬ್ಯುಲಾ ವೈಟ್, ಸ್ಟಾರಿ ನೈಟ್ ಬ್ಲ್ಯಾಕ್, ಸ್ಟಾರ್ ಲೈಟ್ ಪರ್ಪಲ್ ಈ ಮೂರು ಬಣ್ಣಗಳಲ್ಲಿ ಸಿಗಲಿದೆ. ಇನ್ನು ಈ ಫೋನ್ ರಾಮ್ ಸಾಮರ್ಥ್ಯ ಏನು ಎಂಬ ಪ್ರಶ್ನೆ ಮೂಡಿತಾ? ಈ ಫೋನ್ 12GB RAM + 256GB ಸ್ಟೋರೇಜ್ ಹಾಗೂ 12GB RAM + 512GB ಸ್ಟೋರೇಜ್ ಎಂಬ ಎರಡು ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ.
34
Osta O1 Pro ಯಾವಾಗ ಬಿಡುಗಡೆ?
ಅಧಿಕೃತ ಮಾಹಿತಿಯ ಪ್ರಕಾರ ನವೆಂಬರ್ 20 ರಂದು Osta O1 Pro ಬಿಡುಗಡೆ ಮಾಡುವುದಾಗಿ ಹುವಾಯಿ ಕಂಪನಿ ಹೇಳಿದೆ. ಅಲ್ಲದೆ ಇದೇ ದಿನವೇ Osta ಬ್ರ್ಯಾಂಡ್, ಅದರ ಮೊದಲ ಸಾಧನಗಳನ್ನು ಪರಿಚಯಿಸಲಿದೆ. ಫೋನ್‌ನ ಸಂಪೂರ್ಣ ವೈಶಿಷ್ಟ್ಯಗಳನ್ನೂ ಬಿಡುಗಡೆ ಸಮಾರಂಭದಲ್ಲಿ ಬಹಿರಂಗಪಡಿಸುವ ಸಾಧ್ಯತೆಯಿದೆ. ಆದರೆ ಇದಕ್ಕೂ ಮೊದಲೇ ಪ್ರಿ ಆರ್ಡರ್ ಪಡೆಯುತ್ತಿದೆ.
ಲೀಕ್ ಆಗಿರುವ ಮಾಹಿತಿಯ ಪ್ರಕಾರ ಹೇಳುವುದಾದರೆ Osta O1 Pro ಫೋನ್ 6.39 ಇಂಚಿನ LTPS OLED ಡಿಸ್‌ಪ್ಲೇ ಹೊಂದಿದ್ದು, ಇದು 16:9.5 ಆ್ಯಸ್ಪೆಕ್ಟ್ ರೇಷಿಯೋ ಮತ್ತು 1.5K ರೆಸಲ್ಯೂಶನ್ ಹೊಂದಿರುವ ಸಾಧ್ಯತೆ ಇದೆ. ಇದಲ್ಲದೆ ಈ ಫೋನ್‌ನಲ್ಲಿ Kirin 9030S ಚಿಪ್‌ಸೆಟ್ ಅಳವಡಿಸಿದೆ ಎಂದು ಹೇಳಲಾಗುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.