Internet Amazing Websites: ಇಂಟರ್ನೆಟ್‌ನಲ್ಲಿ ಕೋಟ್ಯಂತರ ವೆಬ್‌ಸೈಟ್‌ಗಳಿವೆ. ಆದರೆ, ಅವುಗಳಲ್ಲಿ ಕೆಲವು ಸಾಮಾನ್ಯ ವೆಬ್‌ಸೈಟ್‌ಗಳಿಗಿಂತ ಸಂಪೂರ್ಣ ಭಿನ್ನವಾಗಿವೆ. ನೋಡ್ತಾ ನೋಡ್ತಾ ಬೇರೆ ಲೋಕಕ್ಕೆ ನಿಮ್ಮನ್ನು ಕರಕೊಂಡು ಹೋಗುತ್ತೆ.
Internet Amazing Websites: ಇಂಟರ್ನೆಟ್‌ನಲ್ಲಿ ಕೋಟ್ಯಂತರ ವೆಬ್‌ಸೈಟ್‌ಗಳಿವೆ. ಆದರೆ, ಅವುಗಳಲ್ಲಿ ಕೆಲವು ಸಾಮಾನ್ಯ ವೆಬ್‌ಸೈಟ್‌ಗಳಿಗಿಂತ ಸಂಪೂರ್ಣ ಭಿನ್ನವಾಗಿವೆ. ಕೆಲವೆಡೆ ಕೇವಲ ಒಂದು ಫೋಟೋ ಅಪ್‌ಲೋಡ್ ಮಾಡಿದರೆ ಅದಕ್ಕೆ ಜೀವ ಬಂದಂತೆ ಕಾಣುತ್ತದೆ. ಇನ್ನೊಂದು ವೆಬ್‌ಸೈಟ್‌ನಲ್ಲಿ ಕುಳಿತಲ್ಲೇ ಸಮುದ್ರದ ಅತ್ಯಂತ ಆಳಕ್ಕೆ ಪ್ರಯಾಣಿಸಬಹುದು. ಮತ್ತೊಂದರಲ್ಲಿ ಜಗತ್ತಿನಾದ್ಯಂತ ಹಾರುತ್ತಿರುವ ವಿಮಾನಗಳನ್ನು ಲೈವ್ ಆಗಿ ನೋಡಬಹುದು.
25
1. ಹಳೆಯ ಫೋಟೋಗೆ ಜೀವ ತುಂಬುವ Deep Nostalgia
ಹಳೆಯ ಫೋಟೋಗಳನ್ನು ನೋಡಿದಾಗ ನಮ್ಮ ಹಳೆಯ ನೆನಪುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಆ ಫೋಟೋದಲ್ಲಿರುವ ವ್ಯಕ್ತಿ ಕಣ್ಣು ಮಿಟುಕಿಸಿದರೆ ಅಥವಾ ನಗುವಂತೆ ಕಂಡರೆ ಹೇಗಿರುತ್ತದೆ? MyHeritage Deep Nostalgia ಎಂಬ AI ಆಧಾರಿತ ತಂತ್ರಜ್ಞಾನ ಇದನ್ನೇ ಸಾಧ್ಯವಾಗಿಸುತ್ತದೆ. ಇಲ್ಲಿ ಹಳೆಯ ಸ್ಥಿರ ಫೋಟೋವನ್ನು ಅಪ್‌ಲೋಡ್ ಮಾಡಿದಾಗ, AI ಮುಖದ ಚಲನೆಗಳನ್ನು ಸೃಷ್ಟಿಸುತ್ತದೆ. ವ್ಯಕ್ತಿ ಕಣ್ಣು ಮಿಟುಕಿಸುವುದು, ಸಣ್ಣ ನಗು ಬೀರುವುದು ಅಥವಾ ತಲೆಯನ್ನು ತಿರುಗಿಸುವಂತೆ ಕಾಣಬಹುದು. ಹೀಗಾಗಿ ಹಲವು ವರ್ಷಗಳ ಹಿಂದಿನ ಫೋಟೋ ಕೂಡ ಚಲಿಸುವ ದೃಶ್ಯದಂತೆ ಕಾಣುತ್ತದೆ. ಹಳೆಯ ಕುಟುಂಬದ ಫೋಟೋಗಳನ್ನು ಹೊಸ ರೀತಿಯಲ್ಲಿ ನೋಡುವ ಕುತೂಹಲಕಾರಿ ಅನುಭವ ಇದಾಗಿದೆ.
35
2. ಸ್ಕ್ರೋಲ್ ಮಾಡುತ್ತಲೇ ಸಮುದ್ರದಾಳಕ್ಕೆ ಪ್ರಯಾಣ
ಸಮುದ್ರದ ಆಳದಲ್ಲಿ ಏನಿದೆ ಎಂಬ ಕುತೂಹಲ ನಿಮಗಿದ್ದರೆ Neal.fun – The Deep Sea ವೆಬ್‌ಸೈಟ್ ನಿಮಗೆ ಇಷ್ಟವಾಗಬಹುದು. ವೆಬ್‌ಸೈಟ್‌ನಲ್ಲಿ ಕೆಳಕ್ಕೆ ಸ್ಕ್ರೋಲ್ ಮಾಡುತ್ತಾ ಹೋದಂತೆ, ಸಮುದ್ರದ ಮೇಲ್ಮೈಯಿಂದ ನಿಧಾನವಾಗಿ ಆಳಕ್ಕೆ ಹೋಗುತ್ತಿರುವ ಅನುಭವವಾಗುತ್ತದೆ. ಆಳ ಹೆಚ್ಚಾದಂತೆ ಸುತ್ತಮುತ್ತಲಿನ ಬೆಳಕು ಕಡಿಮೆಯಾಗುತ್ತಾ ಹೋಗುತ್ತದೆ. ವಿವಿಧ ಆಳಗಳಲ್ಲಿ ಕಂಡುಬರುವ ವಿಚಿತ್ರ ಜಲಚರಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಅಂದರೆ ಮನೆಯಿಂದ ಹೊರಗೆ ಹೋಗದೆಯೇ ಸಮುದ್ರದ ಆಳದ ಜಗತ್ತನ್ನು ವರ್ಚುವಲ್ ಆಗಿ ಅನ್ವೇಷಿಸಬಹುದು.
45
3. ಈ ಕ್ಷಣದಲ್ಲಿ ಆಕಾಶದಲ್ಲಿ ಎಷ್ಟು ವಿಮಾನಗಳಿವೆ ಗೊತ್ತಾ?
ಆಕಾಶದಲ್ಲಿ ವಿಮಾನ ಹಾರುವುದನ್ನು ನೋಡಿದಾಗ ಅದು ಎಲ್ಲಿಂದ ಬರುತ್ತಿದೆ, ಎಲ್ಲಿಗೆ ಹೋಗುತ್ತಿದೆ ಎಂಬ ಕುತೂಹಲ ಸಾಮಾನ್ಯ. Flightradar24 ಈ ಕುತೂಹಲಕ್ಕೆ ಉತ್ತರ ನೀಡುವ ವೆಬ್‌ಸೈಟ್. ಇದರಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಹಾರುತ್ತಿರುವ ವಿಮಾನಗಳನ್ನು ಲೈವ್ ಮ್ಯಾಪ್‌ನಲ್ಲಿ ವೀಕ್ಷಿಸಬಹುದು. ನಿಮ್ಮ ಪ್ರದೇಶದ ಮೇಲೆ ಹಾರುತ್ತಿರುವ ವಿಮಾನ ಯಾವುದು, ಅದು ಎಲ್ಲಿಂದ ಹೊರಟಿದೆ, ಎಲ್ಲಿಗೆ ತೆರಳುತ್ತಿದೆ ಸೇರಿದಂತೆ ಹಲವು ಮಾಹಿತಿಗಳನ್ನು ನೋಡಬಹುದು. ವಿಮಾನಗಳ ಹಾರಾಟವನ್ನು ಕುತೂಹಲದಿಂದ ಗಮನಿಸುವವರಿಗೆ ಇದು ವಿಶೇಷ ಅನುಭವ ನೀಡುತ್ತದೆ.
55
ಇಂಟರ್ನೆಟ್‌ನಲ್ಲಿ ಇಂಥದ್ದೂ ಇದೆಯಾ?
ನಾವು ಸಾಮಾನ್ಯವಾಗಿ ಇಂಟರ್ನೆಟ್ ಎಂದರೆ ಸಾಮಾಜಿಕ ಜಾಲತಾಣ, ವಿಡಿಯೋ, ಸುದ್ದಿ ಅಥವಾ ಶಾಪಿಂಗ್ ವೆಬ್‌ಸೈಟ್‌ಗಳನ್ನು ಮಾತ್ರ ನೆನಪಿಸಿಕೊಳ್ಳುತ್ತೇವೆ. ಆದರೆ, ಹೊಸ ವಿಷಯಗಳನ್ನು ಕಲಿಯಲು ಮತ್ತು ಕುತೂಹಲಕಾರಿ ಅನುಭವ ಪಡೆಯಲು ಇಂತಹ ಹಲವು ವೆಬ್‌ಸೈಟ್‌ಗಳೂ ಇವೆ. ಹಳೆಯ ಫೋಟೋಗಳಿಗೆ AI ಮೂಲಕ ಚಲನೆ ನೀಡುವುದರಿಂದ ಹಿಡಿದು ಸಮುದ್ರದ ಆಳವನ್ನು ಅನ್ವೇಷಿಸುವುದು ಮತ್ತು ಪ್ರಪಂಚದ ವಿಮಾನಗಳನ್ನು ಲೈವ್ ಟ್ರ್ಯಾಕ್ ಮಾಡುವವರೆಗೆ—ಈ ಮೂರು ವೆಬ್‌ಸೈಟ್‌ಗಳು ಇಂಟರ್ನೆಟ್ ಎಷ್ಟು ವೈವಿಧ್ಯಮಯವಾಗಿದೆ ಎಂಬುದಕ್ಕೆ ಉತ್ತಮ ಉದಾಹರಣೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.