ಇಲಿಗಳ ಉಗಮ ರಹಸ್ಯ: ಎಲ್ಲಿದೆ ಇವುಗಳ ತವರು ದೇಶ?

Published : Apr 05, 2025, 02:56 PM ISTUpdated : Apr 05, 2025, 03:02 PM IST

ಇಲಿಗಳು ಮನೆಯಲ್ಲಿ ಕಿರಿಕಿರಿ ಉಂಟುಮಾಡುತ್ತವೆ. ಆದರೆ ಅವುಗಳ ಉಗಮದ ಬಗ್ಗೆ ನಿಮಗೆ ತಿಳಿದಿದೆಯೇ? ಇಲಿಗಳು ಹೇಗೆ ಜಗತ್ತಿನಾದ್ಯಂತ ಹರಡಿದವು ಮತ್ತು ಅವುಗಳ ನಿರ್ಮೂಲನೆಗೆ ನಡೆದ ಪ್ರಯತ್ನಗಳೇನು ಎಂಬುದನ್ನು ತಿಳಿಯಿರಿ.

PREV
17
ಇಲಿಗಳ ಉಗಮ ರಹಸ್ಯ: ಎಲ್ಲಿದೆ ಇವುಗಳ ತವರು ದೇಶ?

ಮನೆಯಲ್ಲಿ ಇಲಿಗಳಿದ್ರೆ ನೆಮ್ಮದಿಯೇ ಇರಲ್ಲ. ಯಾವಾಗ, ಯಾವ ವಸ್ತು ಹಾಳಾಗುತ್ತೆ ಎಂಬ ಆತಂಕವಿರುತ್ತದೆ. ಮನೆಯಲ್ಲಿರುವ ಆಹಾರ ಸಾಮಾಗ್ರಿ, ದಾಖಲೆ ಪತ್ರಗಳು ಮತ್ತು ಕೆಲವೊಮ್ಮೆ ಹಣವನ್ನು ಕಚ್ಚಿ ನಾಶ ಮಾಡುತ್ತವೆ. ಹಾಗಾಗಿ ಇಲಿಗಳನ್ನು ಮನೆಯಿಂದ ಓಡಿಸಲು ಎಲ್ಲರೂ ಪ್ರಯತ್ನಿಸುತ್ತಾರೆ.

27

ಈ ಇಲಿಗಳು ಜಗತ್ತಿಗೆ ಮೊದಲು ಎಲ್ಲಿಂದ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಏಪ್ರಿಲ್ 4ರಂದು ಅಂತರಾಷ್ಟ್ರೀಯ ಇಲಿಗಳ ದಿನ ಎಂದು ಆಚರಿಸಲಾಗುತ್ತದೆ. ಇಲಿಗಳನ್ನು ಮನೆಯಿಂದ ಓಡಿಸುವ ಕಷ್ಟ ತಿಳಿದವರಿಗೆ ಮಾತ್ರ ಗೊತ್ತು.

37

ಸುಮಾರು ಎರಡ್ಮೂರು ವರ್ಷಗಳ ಹಿಂದೆ ಇಡೀ ನ್ಯೂಜಿಲೆಂಡ್ ಇಲಿಗಳ ದಾಳಿಗೆ ತುತ್ತಾಗಿತ್ತು. ಇಲಿಗಳ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಕುರಿತ ಅಭಿಯಾನಗಳು ನ್ಯೂಜಿಲೆಂಡ್‌ನಲ್ಲಿ ನಡೆದಿದ್ದವು. ಇಲಿಗಳ ನಿರ್ಮೂಲನೆಗಾಗಿ ನ್ಯೂಜಿಲೆಂಡ್ ಸರ್ಕಾರ ಮಹತ್ವದ ಯೋಜನೆಗಳನ್ನು ರೂಪಿಸುವ ಸಮಯ ಬಂದಿತ್ತು.

47

ನ್ಯೂಜಿಲೆಂಡ್‌ನಲ್ಲಿ ಇಲಿಗಳ ಸಂಖ್ಯೆ ಎಷ್ಟು ಹೆಚ್ಚಾಗಿತ್ತು ಅಂದ್ರೆ ಇತರೆ ಪ್ರಾಣಿಗಳ ಭವಿಷ್ಯ ಅಪಾಯದಲ್ಲಿತ್ತು.  ನ್ಯೂಜಿಲೆಂಡ್‌ನ ರಾಷ್ಟ್ರೀಯ ಪಕ್ಷಿಯಾದ ಕಿವಿ ಕೂಡ ಅಪಾಯದಂಚಿಗೆ ಬಂದು ತಲುಪಿತ್ತು. ಹೀಗಾಗಿ ಇಲಿಗಳ ನಿರ್ಮೂಲನೆಗಾಗಿ ಇಂಗ್ಲೆಂಡ್‌ನಲ್ಲಿ ಅಭಿಯಾನಗಳು ನಡೆದಿದ್ದವು. ಈ ಅಭಿಯಾನಗಳು ಜಾಗತಿಕಮಟ್ಟದಲ್ಲಿ ಸದ್ದು ಮಾಡಿದ್ದವು.

57
ಇಲಿಗಳ ಉಗಮ

ಹಾಗಾದ್ರೆ ಎಲ್ಲರಿಗೂ ಬೇಡವಾದ ಇಲಿಗಳು ಉಗಮ ಆಗಿದ್ದು ಎಲ್ಲಿ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇಲಿಗಳು ಮೊದಲು ಮಧ್ಯ ಅಥವಾ ಉತ್ತರ ಚೀನಾದಲ್ಲಿ ಹುಟ್ಟಿಕೊಂಡವು. ಇದು ಆರಂಭಿಕ ನವಶಿಲಾಯುಗದ ಅವಧಿ ಮತ್ತು ಕೃಷಿಯ ಅಭಿವೃದ್ಧಿಯ ಸಮಯವಾಗಿತ್ತು. ಈ ಸಮಯದಲ್ಲಿ ಇಲಿಗಳ ಉಗಮವಾಯ್ತು.

67
rats

ಈ ಇಲಿಗಳು ಹಡಗುಗಳಲ್ಲಿ ಸೇರಿಕೊಂಡು ಒಂದು ದೇಶದಿಂದ ಮತ್ತೊಂದು ದೇಶವನ್ನು ತಲುಪಿವೆ.  ಪ್ರಪಂಚದಾದ್ಯಂತ ಪ್ರಯಾಣಿಸಿ ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ದೇಶಗಳನ್ನು ತಲುಪಿವೆ. ಸಮುದ್ರ ಮಾರ್ಗದ ಮೂಲಕ ಇಲಿಗಳು ಒಂದು ದೇಶದಿಂದ ಮತ್ತೊಂದು ದೇಶವನ್ನು ತಲುಪಿವೆ ಎಂದು ವರದಿಯಾಗಿದೆ. 

77
ವ್ಯಾಪಾರಿ ಹಡಗುಗಳಲ್ಲಿ ಪ್ರಯಾಣ

ಕಪ್ಪು ಇಲಿಗಳು ಏಷ್ಯಾದಿಂದ ಯುರೋಪ ತಲುಪಿದ ಮೊದಲ ಪ್ರಾಣಿಗಳಾಗಿವೆ. ಸುಮಾರು ಕ್ರಿ.ಪೂ. 3000ರ ವೇಳೆಯಲ್ಲಿ ಭಾರತದಿಂದ ಹೊರಟ ವ್ಯಾಪಾರಿ ಹಡುಗಗಳ ಮೂಲಕ ಈಜಿಪ್ತ ಸೇರಿಕೊಂಡವು. ಇಲಿಗಳು ಎಲ್ಲಾ ವಾತಾವರಣದಲ್ಲಿ ಬದುಕುವ ಅತ್ಯುನ್ನತ ಸಾಮರ್ಥ್ಯವನ್ನು ಹೊಂದಿವೆ. ಇಲಿಗಳಿಂದ ಮಾರಣಾಂತಿಕ ಪ್ಲೇಗ್ ರೋಗ ಸಹ ಹುಟ್ಟಿಕೊಂಡಿತ್ತು.

Read more Photos on
click me!

Recommended Stories