ಅತೀ ಹೆಚ್ಚು ಭಾಷೆ ಮಾತನಾಡುವ ದೇಶಗಳ ಪೈಕಿ ಭಾರತಕ್ಕೆ 4ನೇ ಸ್ಥಾನ, ನಂ.1 ಯಾರು?

Published : Oct 22, 2023, 03:50 PM ISTUpdated : Oct 22, 2023, 03:53 PM IST

ಭಾರತದ ಪ್ರತಿ ರಾಜ್ಯದಲ್ಲಿ ಆಯಾ ಭಾಷೆಗಳಿವೆ. ರಾಜ್ಯದೊಳಗೆ ಉಪಭಾಷೆಗಳಿವೆ. ಇನ್ನು ಹಲವು ಭಾಷೆಗಳು ಪುಸ್ತಕಕ್ಕೆ ಸೀಮಿತವಾಗಿದ್ದರೆ, ಮಾತಿನಲ್ಲಿ ಉಳಿದಿಲ್ಲ. ಇಷ್ಟಾದರೂ ಭಾರತದಲ್ಲಿ ಸದ್ಯ ಮಾತನಾಡುವ ಭಾಷೆಗಳ ಸಂಖ್ಯೆ 453. ಭಾರತ ನಾಲ್ಕನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿರುವ ದೇಶದಲ್ಲಿರುವ ಭಾಷೆ ಸಂಖ್ಯೆ ಎಷ್ಟು?  

PREV
18
ಅತೀ ಹೆಚ್ಚು ಭಾಷೆ ಮಾತನಾಡುವ ದೇಶಗಳ ಪೈಕಿ ಭಾರತಕ್ಕೆ 4ನೇ ಸ್ಥಾನ, ನಂ.1 ಯಾರು?
Image: Getty

ಆಯಾ ದೇಶದಲ್ಲಿ ಅಧಿಕೃತ ಭಾಷೆಗಳಿವೆ. ಇನ್ನು ರಾಜ್ಯಗಳು, ಸಮುದಾಯಗಳು, ಬುಡಕಟ್ಟು ಜನಾಂಗಗಳು ಸೇರಿದಂತೆ ಹಲವು ಭಾಷೆಗಳು ಚಾಲ್ತಿಯಲ್ಲಿದೆ. ಭಾರತದ ಪ್ರತಿ ರಾಜ್ಯದಲ್ಲೂ ಒಂದೊಂದು ಅಧಿಕೃತ ಭಾಷೆಗಳಿವೆ. ಇನ್ನು ಆಯಾ ರಾಜ್ಯದೊಳಗೆ ಉಪಭಾಷೆಗಳು ಹಲವು. 

28

ಸಂಸ್ಕೃತ ಸೇರಿದಂತೆ ಹಲವು ಭಾಷೆಗಳು ಪುಸ್ತಕಕ್ಕೆ ಸೀಮಿತವಾಗಿದೆ. ಹಲವು ಭಾಷೆಗಳು ನಶಿಸಿ ಹೋಗಿದೆ. ಆದರೂ ಭಾರತದಲ್ಲಿ ಭಾಷಾ ವೈವಿದ್ಯತೆ, ಸಾಂಸ್ಕೃತಿಕ ವೈವಿದ್ಯತೆ, ಉಡುಗೆ ತೊಡುಗೆ, ಜೀವನ ಪದ್ಧತಿ, ಆಹಾರ ಪದ್ಧತಿಗಳು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತದೆ.

38

ಅತೀ ಹೆಚ್ಚು ಮಾತನಾಡುವ ಭಾಷೆಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟು 453 ಭಾಷೆಗಳನ್ನು ಮಾತನಾಡುತ್ತಾರೆ. ಕರ್ನಾಟಕದಲ್ಲಿ ಕನ್ನಡ ರಾಜ್ಯ ಭಾಷೆಯಾಗಿದ್ದರೆ, ಉಪಭಾಷೆಗಳ ಪಟ್ಟಿ ದೊಡ್ಡದಿದೆ.

48

ವಿಶ್ವದಲ್ಲಿ ಅತೀ ಹೆಚ್ಚು ಭಾಷೆ ಮಾತನಾಡುವ ದೇಶ ಅನ್ನೋ ಹೆಗ್ಗಳಿಕೆ ಪಪುವಾ ನ್ಯೂಗಿನಿಯಾ ದೇಶ ಪಾತ್ರವಾಗಿದೆ. ಇಲ್ಲಿ ಬರೋಬ್ಬರಿ 840 ಭಾಷೆ ಮಾತನಾಡುವ ಜನರಿದ್ದಾರೆ.

58

ಎರಡನೇ ಸ್ಥಾನದಲ್ಲಿ ಇಂಡೋನೇಷಿಯಾ ವಿರಾಜಮಾನವಾಗಿದೆ. ಇಂಡೋನೇಷಿಯಾದಲ್ಲಿ 710 ಭಾಷೆಗಳಿದ್ದರೆ, 3ನೇ ಸ್ಥಾನದಲ್ಲರುವ ನೈಜೀರಿಯಾದಲ್ಲಿ 524 ಭಾಷೆಗಳಿವೆ.

68

ನಾಲ್ಕನೇ ಸ್ಥಾನ ಭಾರತದ ಪಾಲಾಗಿದ್ದರೆ,335 ಭಾಷೆಗಳಿರುವ ಅಮೆರಿಕ 5ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 319 ಹಾಗೂ ಚೀನಾದಲ್ಲಿ 305 ಭಾಷೆಗಳಿವೆ.
 

78

ಪಾಕಿಸ್ತಾನದ ಭೌಗೊಳಿಕವಾಗಿ ಸಣ್ಣದಾಗಿದ್ದರೂ ಅತೀ ಹೆಚ್ಚು ಭಾಷೆಗಳಿತ್ತು. ಬಲೂಚಿ, ಸಿಂಧ್ ಸೇರಿದಂತೆ ಪ್ರತಿ ಪ್ರಾಂತ್ಯದಲ್ಲಿ ಒಂದೊಂದು ಭಾಷೆಗಳು, ಬಳಿಕ ಸಮುದಾಯಗಳ ಭಾಷೆಗಳೂ ಭಿನ್ನವಾಗಿತ್ತು. ಆದರೆ ಪಾಕಿಸ್ತಾನದಲ್ಲಿ ಇದೀಗ 85 ಭಾಷೆಗಳು ಮಾತ್ರ ಉಳಿದಿದೆ. ಇದರಲ್ಲಿ 40ಕ್ಕೂ ಹೆಚ್ಚು ಭಾಷೆ ಅಳಿವಿನಂಚಿನಲ್ಲಿದೆ.

88

ಹಮಾಸ್ ಉಗ್ರರು ದಾಳಿ ನಡೆಸಿದ ಇಸ್ರೇಲ್‌ನಲ್ಲಿ 53 ಭಾಷೆಗಳಿವೆ. ಇನ್ನು ಗಾಜಾ ಮೇಲೆ ಪ್ರತಿದಾಳಿ ನಡೆಸಿದ ಹಮಾಸ್ ಉಗ್ರರ ಸರ್ವನಾಶ ಮಾಡಲಾಗುತ್ತದೆ. ಈ ಪ್ಯಾಲೆಸ್ತಿನ್‌ನಲ್ಲಿ 10 ಭಾಷೆಗಳಿವೆ.

Read more Photos on
click me!

Recommended Stories