ಚಳಿಗಾಲದಲ್ಲಿ ಗೀಸರ್ ಹೇಗೆ ಬಳಸಬೇಕು? ಎಷ್ಟು ಸಮಯ ಆನ್ ಮಾಡ್ಬೇಕು?

First Published Nov 5, 2024, 12:10 PM IST

ಚಳಿಗಾಲದಲ್ಲಿ ಗೀಸರ್‌ಗಳು ಬಹಳ ಉಪಯುಕ್ತ. ಆದರೆ ಅವುಗಳ ಸರಿಯಾದ ಬಳಕೆ ಗೊತ್ತಾ? ಎಷ್ಟು ಹೊತ್ತು ಆನ್ ಮಾಡ್ಬೇಕು, ಏನೇನು ಜಾಗ್ರತೆ ವಹಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ದೀಪಾವಳಿ ನಂತರ ಚಳಿ ಜಾಸ್ತಿಯಾಗುತ್ತೆ. ಚಳಿಗಾಲದಲ್ಲಿ ಗೀಸರ್ ಬಳಕೆ ಹೆಚ್ಚಾಗುತ್ತದೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡೋದು, ಬಟ್ಟೆ ಒಗೆಯುವುದು ಕಷ್ಟ. ಹಾಗಾಗಿ ಬಹುತೇಕ ಜನರು ಗೀಸರ್ ಬಳಸುತ್ತಾರೆ. ಆದರೆ ಅತಿ ಬಳಕೆ ಒಳ್ಳೆಯದಲ್ಲ.

ಚಳಿಗಾಲದಲ್ಲಿ ಬಿಸಿನೀರಿನ ಅವಶ್ಯಕತೆ ಹೆಚ್ಚಿರುತ್ತೆ. ಹೀಗಾಗಿ ಗೀಸರ್‌ಗಳು ಗಂಟೆಗಟ್ಟಲೆ ಆನ್‌ ಇರುತ್ತವೆ. ಇದು ಸಮಸ್ಯೆಗಳನ್ನು ತಂದೊಡ್ಡಬಹುದು. ಅವು ಯಾವುವು ಅಂತ ತಿಳ್ಕೊಳ್ಳೋಣ.

ಗೀಸರ್ ಎಷ್ಟು ಹೊತ್ತು ಆನ್ ಇರಬೇಕು?
ಯಾವ ವಿದ್ಯುತ್ ಉಪಕರಣನೂ ಗಂಟೆಗಟ್ಟಲೆ ಆನ್ ಇರಬಾರದು. ಗುಣಮಟ್ಟದ ಗೀಸರ್‌ಗಳನ್ನು 1-2 ಗಂಟೆಗಳಿಗಿಂತ ಹೆಚ್ಚು ಆನ್ ಮಾಡಬೇಡಿ ಅಂತ ತಜ್ಞರು ಹೇಳ್ತಾರೆ. ಆಟೋಮ್ಯಾಟಿಕ್ ಗೀಸರ್‌ಗಳು ನೀರು ಬಿಸಿಯಾದ್ಮೇಲೆ ಆಫ್ ಆಗುತ್ತವೆ. ಬಳಸುವಾಗ ಮಾತ್ರ ಆನ್ ಆಗುತ್ತವೆ.

ಗೀಸರ್ ಅತಿ ಬಳಕೆ ಯಾಕೆ ಒಳ್ಳೆಯದಲ್ಲ?
ವಿದ್ಯುತ್ ಬಿಲ್:
ಗೀಸರ್‌ಗಳು ಹೆಚ್ಚು ವಿದ್ಯುತ್ ಬಳಸುತ್ತವೆ. ಹೀಗಾಗಿ ಗಂಟೆಗಟ್ಟಲೆ ಆನ್ ಇಟ್ಟರೆ ಬಿಲ್ ಜಾಸ್ತಿಯಾಗುತ್ತೆ. ಬಿಸಿನೀರು ಬೇಕಾದಾಗ ಮಾತ್ರ ಆನ್ ಮಾಡಿ, ಬಳಸಿ ಮುಗಿದ ಮೇಲೆ ಆಫ್ ಮಾಡಿ.

Latest Videos


ಅತಿ ಬಿಸಿ: ಪ್ರತಿ ಗೀಸರ್‌ಗೂ ಒಮ್ಮೆಲೆ ಕೆಲವು ಲೀಟರ್ ನೀರು ಬಿಸಿ ಮಾಡುವ ಸಾಮರ್ಥ್ಯ ಇರುತ್ತೆ. ಉದಾಹರಣೆಗೆ 5 ಲೀಟರ್ ಗೀಸರ್ 5 ಲೀಟರ್ ನೀರು ಖಾಲಿಯಾಗುವವರೆಗೂ ಬಿಸಿಮಾಡುತ್ತಲೇ ಇರುತ್ತೆ. ಇದು ಗೀಸರ್‌ನ ಒಳಭಾಗಗಳಿಗೆ ಹಾನಿ ಮಾಡಬಹುದು. ರಿಪೇರಿ ದುಬಾರಿಯಾಗುತ್ತೆ.
ಅಪಾಯ: ಗೀಸರ್ ಅತಿ ಬಳಕೆಯಿಂದ ಓವರ್‌ಹೀಟಿಂಗ್ ಆಗಿ ಶಾರ್ಟ್ ಸರ್ಕ್ಯೂಟ್ ಆಗಬಹುದು. ಬಳಸುವಾಗ ಮಾತ್ರ ಆನ್ ಮಾಡಿ, ಬಳಸಿ ಮುಗಿದ ಮೇಲೆ ಆಫ್ ಮಾಡಿ.

ನೀರಿನ ವ್ಯರ್ಥ: ಗೀಸರ್ ಯಾವಾಗಲೂ ಆನ್ ಇದ್ರೆ ನೀರು ವ್ಯರ್ಥ ಆಗುತ್ತೆ. ನೀರು ವ್ಯರ್ಥ ಮಾಡದೆ, ಸಮಸ್ಯೆ ತಪ್ಪಿಸಲು ಗೀಸರ್ ಅನ್ನು ಎಚ್ಚರಿಕೆಯಿಂದ ಬಳಸಿ.

ಗೀಸರ್ ಬಳಸುವಾಗ ನೆನಪಿಡಿ
ನಿಯಮಿತ ತಪಾಸಣೆ: ಚಳಿಗಾಲ ಶುರುವಾಗುವ ಮುನ್ನ ಎಲೆಕ್ಟ್ರಿಷಿಯನ್‌ರಿಂದ ಗೀಸರ್ ತಪಾಸಣೆ ಮಾಡಿಸಿ. ನೀವೂ ನಿಯಮಿತವಾಗಿ ಪರಿಶೀಲಿಸಿ. ಹೀಗೆ ಮಾಡಿದ್ರೆ ಸಮಸ್ಯೆಗಳಿಂದ ದೂರವಿರಬಹುದು.

ಬಾತ್ರೂಮ್ ವಾಸ್ತು ಟಿಪ್ಸ್

ಕೆಟ್ಟ ಗೀಸರ್: ಗೀಸರ್‌ಗೆ ಏನಾದ್ರೂ ಸಮಸ್ಯೆ ಇದ್ರೆ ಬಳಸಬೇಡಿ. ತಕ್ಷಣ ಎಲೆಕ್ಟ್ರಿಷಿಯನ್‌ಗೆ ರಿಪೇರಿ ಮಾಡಿಸಿ. ಇಲ್ಲದಿದ್ರೆ ಶಾಕ್, ಶಾರ್ಟ್ ಸರ್ಕ್ಯೂಟ್ ಆಗಬಹುದು.
ನೀರು ಖಾಲಿ ಮಾಡಿ: ಗೀಸರ್‌ನಲ್ಲಿ ಬಿಸಿನೀರನ್ನು ಆಗಾಗ ಖಾಲಿ ಮಾಡ್ತಾ ಇರಿ. ಇಲ್ಲದಿದ್ರೆ ಒಳಭಾಗಗಳು ಹಾಳಾಗುತ್ತವೆ.
ಗಾಳಿ: ಬಾತ್ರೂಮ್‌ನಲ್ಲಿ ಗೀಸರ್ ಇದ್ರೆ ಗಾಳಿ ಬರೋ ವ್ಯವಸ್ಥೆ ಇರಲಿ. ಗೀಸರ್ ಓವರ್‌ಹೀಟ್ ಆಗದಂತೆ ಗಾಳಿ ಬಹಳ ಮುಖ್ಯ.

click me!