‘ಶಾರದೆಯಾಗಿಯೇ ಬಾಳಿ, ಅಗತ್ಯ ಬಿದ್ರೆ ಕಾಳಿಯಾಗಿ’: ಮಹಿಳಾ ಸಬಲೀಕರಣದ ಚಿತ್ರ ಸಂದೇಶ ವೈರಲ್..!
First Published | Oct 31, 2020, 10:00 AM ISTಮೂಡುಬಿದಿರೆ(ಅ.31): ತುಳುನಾಡು ಕರಾವಳಿಯಲ್ಲಿ ದಸರಾ, ಮಾರ್ನೆಮಿ ಎಂದರೆ ವೇಷಧಾರಿಗಳ, ಹುಲಿವೇಷಗಳ ಹಿಂಡು, ತಾಸೆ, ಬ್ಯಾಂಡ್ ವಾದ್ಯಗಳ ದಂಡು ಹೀಗೆ ಹಬ್ಬದ ಅಬ್ಬರದ ವರ್ಣಮಯ ಕ್ಷಣಗಳು ಸಾಮಾನ್ಯ. ಈ ಬಾರಿ ಕೋವಿಡ್ ಕಾರಣಕ್ಕೆ ಎಲ್ಲೆಲ್ಲೂ ಸರಳತೆ ಹೊದ್ದ ವಾತಾವರಣ. ಆದರೇನಂತೆ ನವದುರ್ಗೆಯರ ವೇಷಧಾರಿಗಳಾಗಿಯೇ ಹಲವು ಹಿರಿಯ, ಕಿರಿಯರು ಫೋಟೋ ವೀಡಿಯೋ ಶೂಟಿಂಗ್ ನಡೆಸಿ ಕರಾವಳಿಯ ಶಾರದೆ ಸಹಿತ ನವದುರ್ಗೆಯರ ವೇಷ, ಸಂದೇಶಗಳಿಗೆ ದನಿಯಾದದ್ದು, ಸಾಮಾಜಿಕ ಜಾಲತಾಣಗಳ ಮೂಲಕವೇ ಜಗದಗಲ 32 ಸಾವಿರಕ್ಕೂ ಅಧಿಕ ಮಂದಿಯ ಲೈಕ್ ಗಿಟ್ಟಿಸಿಕೊಂಡದ್ದು ಈ ಬಾರಿಯ ವಿಶೇಷ.