ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೋಮು ಸೌಹಾರ್ದತೆಯ ದ್ಯೋತಕವೆಂದು ಭಾವಿಸಿ ಹಿಂದೂ ವಿಧವೆಯೊಬ್ಬರಿಗೆ ಮನೆ ಕೊಡಿಸಲು ಬಂದ ಬುರ್ಖಾಧಾರಿ ಮಹಿಳೆಯರಿಗೆ ಸಹಾಯ ಮಾಡಲು ಮುಂದಾದರು. ಆದರೆ, ಆ ಬುರ್ಖಾಧಾರಿ ಮಹಿಳೆಯರಲ್ಲಿ ಒಬ್ಬರು ಆ ವಿಧವೆಯ ಮತಾಂತರಗೊಂಡ ಮಗಳೇ ಎಂಬ ಸತ್ಯ ಬಯಲಾಗಿದೆ, ಮುಂದೇನು?
ಉಡುಪಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೇ ಪಂಗನಾಮ ಹಾಕಿರುವ ಘಟನೆ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿಯಾದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ವಿಧವೆ ಮಹಿಳೆಗೆ 1989 ರಲ್ಲೇ ನಿವೇಶನ ಮಂಜೂರಾಗಿದ್ದರೂ, ತಾಂತ್ರಿಕ ಅಡಚಣೆಗಳಿಂದಾಗಿ ಇಂದಿಗೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರಿಗೆ ಮನೆ ಕಟ್ಟಿಸಿಕೊಡಲು ನೆರವಾಗಿ ಎಂದು ಕಣ್ಣೀರು ಸುರಿಸುತ್ತಾ ಇಬ್ಬರು ಬುರ್ಖಾಧಾರಿಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಬಂದಿದ್ದರು.
26
ಭಾವುಕರಾದ ಸಚಿವೆ
ಹಿಂದೂ ಮಹಿಳೆಗೆ ನ್ಯಾಯ ಕೋರಿದ್ದ ಮುಸ್ಲಿಂ ಮಹಿಳೆಯರನ್ನು ನೋಡಿ ಸಚಿವೆ ಭಾವುಕರಾಗಿಬಿಟ್ಟರು. ಅಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲಾಯಿತು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಈ ಹೃದಯಸ್ಪರ್ಶಿ ಘಟನೆಯ ಬಗ್ಗೆ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದರು.
36
ಕೋಮು ಸೌಹಾರ್ದತೆ ಪಾಠ
ಕೋಮು ಸೌಹಾರ್ದತೆಯೇ ನಮ್ಮ ಭಾರತದ ಅಸ್ತಿತ್ವ ಎಂಬ ಶೀರ್ಷಿಕೆ ಕೊಟ್ಟು ಕೋಮು ಸೌಹಾರ್ದತೆ ಬಗ್ಗೆ ಬಿಜೆಪಿಯವರಿಗೆ ಸಚಿವೆ ಪಾಠ ಮಾಡಿದರು. ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವವರು ಸಮಾಜದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ, ಇಂತಹ ಸಾಮಾನ್ಯ ಜನರೇ ನಮ್ಮ ದೇಶದ ನಿಜವಾದ ಸೌಹಾರ್ದತೆಯ ರಾಯಭಾರಿಗಳು. ಈ ಮುಸ್ಲಿಂ ಸಹೋದರಿಯರ ಕಾಳಜಿಯನ್ನು ಕಂಡು “ಇದು ನೋಡಿ ನಮ್ಮ ಹೆಮ್ಮೆಯ ಭಾರತ” ಎಂದು ನನಗೆ ಹೆಮ್ಮೆ ಎನಿಸಿತು ಎಂದರು.
ಬಡತನ ಮತ್ತು ಕಷ್ಟಗಳಿಗೆ ಯಾವುದೇ ಧರ್ಮವಿರುವುದಿಲ್ಲ, ಮಾನವೀಯತೆಯೊಂದೇ ಪರಮ ಧರ್ಮ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಷ್ಟದಲ್ಲಿರುವ ಆ ತಾಯಿಗೆ ಕಾನೂನುಬದ್ಧವಾಗಿ ಭೂಮಿಯ ವಾಸ್ತವ್ಯ ದೊರಕಿಸಿಕೊಟ್ಟು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಸಮಾಜದಲ್ಲಿ ದ್ವೇಷ ಬಿತ್ತುವವರು ಸಾಮಾನ್ಯ ಜನರ ಈ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ನೋಡಿ ಕಲಿಯಬೇಕಿದೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವುದು ಮತ್ತು ಇಂತಹ ಸೌಹಾರ್ದತೆಯನ್ನು ಎತ್ತಿಹಿಡಿಯುವುದೇ ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ ಎಂದರು.
56
ಮುಸ್ಲಿಂ ಮಹಿಳೆ ಜಾತಕ ತೆರೆದಾಗ...
ಆದರೆ ಆಮೇಲೆ ಆಗಿದ್ದೇ ಬೇರೆ. ಬಿಜೆಪಿ ಮುಖಂಡರು ಈ ಮುಸ್ಲಿಂ ಮಹಿಳೆಯರ ಜಾತಕ ತೆರೆದಾಗ, ಅಲ್ಲಿಗೆ ಬಂದ ಹಿಂದೂ ಮಹಿಳೆಯ ಮತಾಂತರಗೊಂಡಿರುವ ಅಸಲಿ ಮಗಳೇ ಈ ಬುರ್ಖಾಧಾರಿ ಎಂದು ಗೊತ್ತಾಯಿತು. ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈವರೆಗೂ ಈ ಬಗ್ಗೆ ಸಚಿವೆ ರಿಯಾಕ್ಷನ್ ಕೊಟ್ಟಂತಿಲ್ಲ.
66
ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ
ಈಗ ಇದರ ನಡುವೆಯೇ, ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಇಂಥ ಸುದ್ದಿ ಸಿಕ್ಕರೆ ನೆಟ್ಟಿಗರು ಬಿಡ್ತಾರಾ? ಹಿಂದೂ ಮಹಿಳೆ ಅರ್ಥಾತ್ ತನ್ನನ್ನು ಹುಟ್ಟಿಸಿದ ಅಮ್ಮನನ್ನೇ ನೆರೆಮನೆಯವಳು ಎಂದಿರುವ ಈ ಬುರ್ಖಾಧಾರಿ ಮಹಿಳೆಗೆ ಮನೆ ಸಿಗುತ್ತಾ? ಅಮ್ಮನಿಗೆ ಮನೆ ಕೊಟ್ಟರೆ ಅದು ಈ ಮಹಿಳೆಗೇ ಕೊಟ್ಟಂತೇ ಎನ್ನೋದು ನೆಟ್ಟಿಗರ ಅಭಿಮತ. ಏಕೆಂದ್ರೆ ಭೂಮಿಯ ವಾಸ್ತವ್ಯ ದೊರಕಿಸಿಕೊಟ್ಟು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡುವಂತೆ ಇದಾಗಲೇ ಡಿಸಿಗೆ ಆದೇಶ ಮಾಡಿರೋ ಸಚಿವೆ ಅದನ್ನು ವಾಪಸ್ ತಗೋತಾರಾ, ಅಥವಾ ಮುಂದಿನ ಕ್ರಮ ಜರುಗಿಸುತ್ತಾರಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.