ಗಂಗಾವತಿ: ನವವೃಂದಾವನ ಗಡ್ಡೆಯಲ್ಲಿ ವ್ಯಾಸರಾಜರ ಮಧ್ಯಾರಾಧನೆ

First Published | Apr 2, 2021, 2:20 PM IST

ಗಂಗಾವತಿ(ಏ.02): ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಶ್ರೀಕೃಷ್ಣದೇವರಾಯರ ರಾಜಗುರುಗಳಾಗಿದ್ದ ವ್ಯಾಸರಾಜರ ಮಧ್ಯಾರಾಧನೆ ಜರುಗಿತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆನೆಗೊಂದಿಯ ನವವೃಂದಾವನ ಗಡ್ಡೆ
ವ್ಯಾಸರಾಜ ಮಠಾಧೀಶರಾದ ವಿದ್ಯಾಶ್ರೀಶ ಶ್ರೀಪಾದಂಗಳವರ ನೇತೃತ್ವದಲ್ಲಿ ಜರುಗಿದ ಆರಾಧನೆಯಲ್ಲಿ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳರು ಭಾಗವಹಿಸಿದ್ದರು.
Tap to resize

ಬೆಳಗ್ಗೆ ಬೃಂದಾವನಕ್ಕೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ, ನೈವೇದ್ಯ ಹಾಗೂ ಪಂಡಿತರಿಂದ ಉಪನ್ಯಾಸ ಜರುಗಿತು.
ಈ ಸಂದರ್ಭದಲ್ಲಿ ಅನಂತಚಾರ, ಸುಮಂತ ಕುಲಕರ್ಣಿ, ಮಧುಸೂದನಚಾರ, ಗುರುರಾಜ್‌ ದೇಶಪಾಂಡೆ ಸೇರಿದಂತೆ ಭಕ್ತರು ಭಾಗವಹಿಸಿದ್ದರು.

Latest Videos

click me!