ಮಾಂಸಕ್ಕಾಗಿ ಚೆಕ್ ಡ್ಯಾಮ್‌ಗೆ ಯೂರಿಯಾ ಬೆರಕೆ: ಜಿಂಕೆ, ಹಸುಗಳು ಸಾವು

First Published | Mar 29, 2021, 6:03 PM IST

ಕುಡಿಯೂ ನೀರಿಗೆ ಯೂರಿಯಾ ಬೆರೆಸಿದ್ರು | ಮಾಂಸಕ್ಕಾಗಿ ಮಾಡಿದ ಹೇಯ ಕೃತ್ಯದಿಂದ ಮೂಕ ಪ್ರಾಣಿಗಳು ಸಾವು

ಚೆಕ್ ಡ್ಯಾಮ್ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿದ ಪರಿಣಾಮ ನೀರನ್ನು ಕುಡಿದ 1 ಜಿಂಕೆ ಮತ್ತು 4 ಹಸುಗಳು ಸಾವನ್ನಪ್ಪಿವೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗದ ಮೂಗ್ಗೂರು ಅರಣ್ಯ ಪ್ರದೇಶ ವ್ಯಾಪ್ತಿಯ ಆಲಕುಳಿ ಗ್ರಾಮದ ಬಳಿಯ ಹೊಸ ಬಾವಿ ಹಳ್ಳದಲ್ಲಿ ಘಟನೆ ನಡೆದಿದೆ.
Tap to resize

ಕಳ್ಳ ಬೇಟೆಗಾರರು ಬಂದೂಕು ಬಳಸುವ ಬದಲು ನೀರಿನಲ್ಲಿ ಯೂರಿಯಾ ಬೆರೆಸಿ ಆ ನೀರನ್ನು ಕುಡಿದ ಪ್ರಾಣಿಗಳು ಸ್ಥಳದಲ್ಲೇ ಮೃತಪಟ್ಟ ನಂತರ ಸುಲಭವಾಗಿ ಮಾಂಸವನ್ನು ಮಾರಾಟ ಮಾಡುವ ಯೋಜನೆಯಿಂದ ಘಟನೆ ನಡೆದಿದೆ.
ನರೇಗಾ ಯೋಜನೆಯಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳ‌ ನೀರಿನ ಬವಣೆ ನೀಗಿಸಲು ವೈಜ್ಞಾನಿಕವಾಗಿ ಚೆಕ್ ಡ್ಯಾಮ್ ನಿರ್ಮಾಣ ಮಾಡಿದ್ದಾರೆ.
ಆದ್ರೆ ಈ ಚಕ್ ಡ್ಯಾಮ್ ಕಾಡು ಪ್ರಾಣಿಗಳಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ ಆಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ಕೃತ್ಯಗಳನ್ನ ತಡೆಯಬೇಕು ಇಲ್ಲವಾದರೆ ಕಾಲ ಕ್ರಮೇಣ ಕಾಡು ಪ್ರಾಣಿಗಳು ಪಕ್ಷಿಗಳಿಗೆ ಅಪಾಯ ತಪ್ಪಿದ್ದಲ್ಲ ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest Videos

click me!