ರಾಜ್ಯಾದ್ಯಂತ ನಡೆಯುವ ಸರಣಿಗೆ ಅನುಗುಣವಾಗಿ, ಉಡುಪಿ ಗ್ರಾಮಾಂತರ, ಕುಂದಾಪುರ ಮಂಡಲ ಹಾಗೂ ಬೈಂದೂರು ಬಿಜೆಪಿ ಮಂಡಲದ ಆಶ್ರಯದಲ್ಲಿ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿದ ನಳಿನ್ ಕುಮಾರ್ ಕಟೀಲ್
undefined
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಕಾಂಗ್ರೆಸ್ ಮಣ್ಣುಪಾಲು ಮಾಡಿದೆ. ಕಾಂಗ್ರೆಸ್ ಗಾಂಧೀಜಿಯವರ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡಿದೆ ಬಿಟ್ಟರೆ ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲಿಲ್ಲ. ಆದರೆ, ಗಾಂಧೀಜಿ ಕಂಡ ಕನಸನ್ನು ನರೇಂದ್ರ ಮೋದಿಯವರು ಕಾರ್ಯಗತಗೊಳಿಸುತ್ತಿದ್ದಾರೆ ಎಂದು ಹೇಳಿದ ಕಟೀಲ್
undefined
ರಾಜ್ಯದಲ್ಲಿ 96,000 ಸದಸ್ಯರಿರುವ 5808 ಗ್ರಾಮ ಪಂಚಾಯಿತಿಗಳಿವೆ. ಅವುಗಳಲ್ಲಿ ಶೇ.80ರಷ್ಟುಸದಸ್ಯ ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಯ ಗುರಿಯಾಗಿದೆ. ರಾಜ್ಯದಲ್ಲಿ ಪಕ್ಷದ ನಾಯಕರೂ, ಸಚಿವರೂ ಸೇರಿ 6 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ರಾಜ್ಯದ ಎಲ್ಲ ಗ್ರಾಮಾಂತರ ಜಿಲ್ಲೆಗಳಲ್ಲಿ ನ.27ರಿಂದ ಡಿ.3ರವರೆಗೆ 52 ಗ್ರಾಮ ಸ್ವರಾಜ್ ಸಮಾವೇಶಗಳನ್ನು ನಡೆಸಲಿದೆ ಎಂದರು.
undefined
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಸಿಬಿಐ ತನಿಖೆ ನಡೆಸುತ್ತಿರುವುದು ಕಾನೂನಿನ ವಿಚಾರ. ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ, ಅವರನ್ನು ಮಾತ್ರವಲ್ಲದೆ ಬೇರೆಯವರನ್ನೂ ಸಿಬಿಐ ತನಿಖೆ ಮಾಡುತ್ತಿದೆ ಎಂದರು.
undefined