ಬೆಟ್ಟದ ನಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವು: ಹೃದಯವಿದ್ರಾವಕ ಘಟನೆ

Published : May 18, 2026, 01:30 PM IST

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ, ಆಟವಾಡುತ್ತಿದ್ದ ಎರಡು ವರ್ಷದ ಮಗು ಬೆಟ್ಟದ ನಲ್ಲಿಕಾಯಿಯನ್ನು ನುಂಗಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

PREV
14
ಕೋಲಾರದ ಎರಡು ವರ್ಷದ ಮಗು ಸಾವು

ಬೆಟ್ಟದ ನಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಮಾಲೂರು ಪಟ್ಟಣದ ನಿವಾಸಿಗಳಾದ ಮಾಲಾ ಮತ್ತು ರವಿ ದಂಪತಿಯ ಮಗು ಕೊನೆಯುಸಿರೆಳೆದಿದೆ.

24
ಆಟವಾಡುತ್ತಾ ನೆಲ್ಲಿಕಾಯಿ ನುಂಗಿದ ವಿಜಯೇಂದ್ರ

ಎರಡು ವರ್ಷದ ವಿಜಯೇಂದ್ರ ಮೃತ ಮಗು. ಮಾಲಾ ಮತ್ತು ರವಿ ದಂಪತಿ ಸೊಪ್ಪು ವ್ಯಾಪಾರ ಮಾಡಿಕೊಂಡು ಮಾಲೂರು ಪಟ್ಟಣದಲ್ಲಿ ವಾಸವಾಗಿದ್ದಾರೆ. ತಾಯಿ ಮಾಲಾ, ಜ್ಯುಸ್ ಮಾಡಲು ಬೆಟ್ಟದ ನಲ್ಲಿಕಾಯಿ ಮನೆಗೆ ತಂದಿದ್ದರು. ಆಟವಾಡುತ್ತಾ ವಿಜಯೇಂದ್ರ ನೆಲ್ಲಿಕಾಯಿಯನ್ನು ನುಂಗಿದ್ದಾನೆ.

34
ನೆಲ್ಲಿಕಾಯಿ ನುಂಗುತ್ತಿದ್ದಂತೆ ಮಗುವಿಗೆ ಉಸಿರಾಟದ ಸಮಸ್ಯೆ

ನಲ್ಲಿಕಾಯಿ ಗಂಟಲಲ್ಲಿ ಸಿಲುಕಿದ ಬಳಿಕ ಮಗು ವಿಜಯೇಂದ್ರಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಪೋಷಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.

44
ಮಗುವನ್ನು ಕಳೆದುಕೊಂಡ ಪೋಷಕರ ಕಣ್ಣೀರು

ತಾಲೂಕು ಆಸ್ಪತ್ರೆಯ ವೈದ್ಯರು ಮಗು ವಿಜಯೇಂದ್ರನ ಗಂಟಲಿನಲ್ಲಿ ಸಿಲುಕಿದ್ದ ಬೆಟ್ಟದ ನೆಲ್ಲಿಕಾಯಿಯನ್ನು ಹೊರತೆಗೆದಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read more Photos on
click me!

Recommended Stories