Bengaluru: ಹೊಸಕೋಟೆ ಬಿರಿಯಾನಿ ತಿನ್ನಲು ಹೋಗ್ತಿದ್ದ ಬಿಬಿಎ ವಿದ್ಯಾರ್ಥಿಗೆ ಚಾಕು ಇರಿತ

Published : May 18, 2026, 10:05 AM IST

ಹೊಸಕೋಟೆ ಬಿರಿಯಾನಿ ತಿನ್ನಲು ಬೆಳಗಿನ ಜಾವ ಹೊರಟಿದ್ದ ವಿದ್ಯಾರ್ಥಿ ಧೀರಜ್ ಮೇಲೆ ರಾಮಮೂರ್ತಿ ನಗರದಲ್ಲಿ ಚಾಕು ಇರಿತ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು, ಪೊಲೀಸರು ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

PREV
14
ವಿದ್ಯಾರ್ಥಿಗೆ ಚಾಕು ಇರಿತ

ಬೆಳಗಿನ ಜಾವ ಹೊಸಕೋಟೆಯ ಬಿರಿಯಾನಿ ತಿನ್ನಲು ಹೋದ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ರಾಮಮೂರ್ತಿ ನಗರದ ಬಂಜಾರ ಲೇಔಟ್‌ನಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು 21 ವರ್ಷದ ಧೀರಜ್ ಎಂದು ಗುರುತಿಸಲಾಗಿದೆ.

24
ಬೆಳಗಿನ ಜಾವ ನಡೆದ ಘಟನೆ

ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ಧೀರಜ್ ಮತ್ತು ಆರೋಪಗಳ ನಡುವೆ ಗಲಾಟೆ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಆರೋಪಿಗಳು ಧೀರಜ್‌ಗೆ ಚಾಕು ಇರಿದಿದ್ದಾರೆ.

34
ಅಪ್ರಾಪ್ತ ಸೇರಿ ಮೂವರು ಆರೋಪಿಗಳ ಬಂಧನ

ಧೀರಜ್‌ನ ಬೆನ್ನಿಗೆ ಹಾಗೂ ತೊಡೆ ಭಾಗಕ್ಕೆ ಚಾಕು ಇರಿಯಲಾಗಿದೆ. ಧೀರಜ್ ಬಿಬಿಎ ಓದುತ್ತಾ ಫ್ಲಿಫ್ಕಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಘಟನೆ ಸಂಬಂಧ ಪೊಲೀಸರು ಭುವನ್, ಮಿಥುನ್ ಸೇರಿ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.

44
ಪ್ರಾಣಾಪಾಯದಿಂದ ಪಾರು, ಚಿಕಿತ್ಸೆ ಪಡೆಯುತ್ತಿರುವ ಧೀರಜ್

ಧೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಹಿನ್ನಲೆ ಕಲೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.

Read more Photos on
click me!

Recommended Stories